ಭಾರತ ದೇಶ ಎಲ್ಲ ರಂಗದಲ್ಲೂ ಮುಂಚೂಣೆ ಪಡೆಯಲು ತುದಿಗಾಲಲ್ಲಿ ನಿಂತಿದೆ. ಆದರೇ ಕೊರೊನಾ ವೈರಸ್ ಅಟ್ಯಾಕ್ ಆದರೆ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ರೋಗಿಗಳನ್ನು ಇಡಲು ಹೈಟೆಕ್ ಆಸ್ಪತ್ರೆಗಳೇ ಇಲ್ಲ ಎನ್ನುವುದು ಆತಂಕಕಾರಿ ಅಂಶವಾಗಿದೆ.
ಮುಂಜಾಗ್ರತೆಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಯೋಜನೆ ರೂಪಿಸುವುದು ಅಗತ್ಯ. ಈಗ ಆಸ್ಪತ್ರೆ ನಿರ್ಮಿಸುವ ವೇಳೆವರೆಗೂ ಕೊರೊನಾ ಇರುತ್ತದಾ ಎಂದು ಟೀಕೆ ಮಾಡುವುರು ಇದ್ದಾರೆ. ಆದರೆ ಮುಂದೆ ಯಾವುದೇ ರೋಗ ಬಂದರೂ ಶಕ್ತಿಶಾಲಿಯಾಗ ಬೇಕಿದೆ.
ರಾಜಧಾನಿ ಬೆಂಗಳೂರಿನಲ್ಲಿ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆ ನಿರ್ಮಿಸಿದ ನಂತರ ದೊಡ್ಡಮಟ್ಟದಲ್ಲಿ ಯಾವುದೇ ಆಸ್ಪತ್ರೆ ನಿರ್ಮಿಸಿರುವ ಮಾಹಿತಿ ನನಗಿಲ್ಲ. ಮೈಸೂರು ಲ್ಯಾಂಪ್ಸ್ ಕಂಪನಿ ಮುಳುಗುವ ಹಂತದಲ್ಲಿದೆ. ಬೆಂಗಳೂರಿನಲ್ಲಿ ಸುಮಾರು 22 ಎಕರೆ ವಿಶಾಲವಾದ ಜಮೀನು ಇದೆ. ಈ ಜಾಗವನ್ನು ಕಬಳಿಸಲು ಸಾವಿರಾರು ಜನರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕೂಡಲೇ ಇಲ್ಲಿ ಒಂದು ಹೈಟೆಕ್ ಆಸ್ಪತ್ರೆ ನಿರ್ಮಿಸಲು ಕ್ರಮಕೈಗೊಳ್ಳುವುದು ಸೂಕ್ತ.
ಇದೇ ರೀತಿ ನಾಲ್ಕು ಕಂದಾಯ ವಿಭಾಗಗಳಲ್ಲಿ, ಬೆಂಗಳೂರಿಗೆ ಪ್ರವೇಶ ಮಾಡುವ ಎಲ್ಲಾ ದಿಕ್ಕುಗಳಲ್ಲಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಿಸುವುದು ಅಗತ್ಯವಾಗಿದೆ. ಇದು ದೂರದೃಷ್ಠಿ ಯೋಜನೆಯಾಗಲಿ.