22nd December 2024
Share

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ನಿರ್ಭಂದ ಬಡವರಿಗೆ, ದಿನಗೂಲಿ ಕಾರ್ಮಿಕರಿಗೆ QUARANTINE LOAN ಕೂಡಲೇ ಘೋಷಣೆ ಮಾಡಬೇಕು. ಈ ಸಾಲ ಬಡ್ಡಿ ರಹಿತವಾಗಿರಬೇಕು. ಸರ್ಕಾರಗಳು ಬಡ್ಡಿ ಪಾವತಿಸಬೇಕು, ಜನಧನ ಖಾತೆಗೆ ನೇರವಾಗಿ ಹಣ ಜಮಾ ಆಗಬೇಕು.

   ಬ್ಯಾಂಕ್ ಮುಂದೆ ಸಾಲಕ್ಕಾಗಿ ಅರ್ಜಿ ಹಿಡಿದು ನಿಲ್ಲುವ ಹಾಗಿಲ್ಲ, ಬ್ಯಾಂಕ್‌ನವರಿಗೆ ಒಂದು ಮೆಸೆಜ್ ಅಥವಾ ಮಿಸ್‌ಕಾಲ್ ಮಾಡಿದರೆ, ಅವರಿಂದ ಮಾಹಿತಿ ಪಡೆದು ಅವರ ಖಾತೆಗೆ ಹಣ ಜಮಾ ಮಾಡುವ ವ್ಯವಸ್ಥೆ ಆಗಲೇ ಬೇಕು.

  ಚುನಾವಣೆ ಸಮಯದಲ್ಲಿ ಸರ್ಕಾರಗಳು ಘೋಶಿಸುವ ಯೋಜನೆಗಿಂತ ಅತ್ಯಂತ ಅಗತ್ಯವಿರುವ ಯೋಜನೆ ಇದಾಗಲಿದೆ. ಒಂದು ವೇಳೆ ಬ್ಯಾಂಕ್ ಖಾತೆ ಇಲ್ಲದೆ ಇದ್ದಲ್ಲಿ ಆಧಾರ್ ಕಾರ್ಡ್ ಪಡೆದು ಬ್ಯಾಂಕ್ ಖಾತೆ ಮಾಡಿ ಹಣ ಜಮಾ ಮಾಡುವುದು ಸೂಕ್ತ.

  ಯಾವುದೇ ರೀತಿಯ ಸಾಲ ಬಡ್ಡಿ ವಸೂಲಿಯನ್ನು ಒಂದು ತಿಂಗಳು ಕಾಲ ಮುಂದಕ್ಕೆ ಹಾಕಬೇಕು. ಸಹಕಾರ ಬ್ಯಾಂಕ್, ಪತ್ತಿನ ಸಹಕಾರ ಸಂಘ, ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರವೂ ಸಾಲ ನೀಡಲು ವ್ಯವಸ್ಥೆ ಮಾಡಲೂ ಬಹುದು.

   ಗ್ರಾಮೀಣ ಪ್ರದೇಶದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕವೂ ಸಾಲ ನೀಡಲು ವ್ಯವಸ್ತೆ ಮಾಡಲು ಚಿಂತನೆ ನಡೆಸ ಬಹುದು. ಎಕೆಂದರೆ ಎಲ್ಲೂ ಜನಜಂಗುಳಿ ಆಗಬಾರದು. ಜನರಿಗೆ ದಿನ ನಿತ್ಯದ ಖರ್ಚಿಗೆ ತೊಂದರೆಯೂ ಆಗಬಾರದು. ಈ ನಿಟ್ಟಿನಲ್ಲಿ ಸರ್ಕಾರಗಳು ಚಿಂತನೆ ನಡೆಸಲಿ.