23rd December 2024
Share

TUMAKURU: SHAKTHIPEETA FOUNDATION

ಇದೂವರೆಗೂ ತಮ್ಮ ಮಕ್ಕಳು/ಅಳಿಯ/ಸೊಸೆಯಂದಿರು ಸಾಫ್ಟ್‌ವೇರ್ ಇಂಜಿನಿಯರ್, ಟೆಕ್ಕಿ ಎಂದು ಬೀಗುತ್ತಿದ್ದ ಪೋಷಕರಿಗೆ ಎದೆ ಢವ-ಢವ. ’ಅನ್ನುವ ಹಾಗಿಲ್ಲ-ಸುಮ್ಮನೆ ಇರುವ ಹಾಗಿಲ್ಲ’ ಒದ್ದಾಡುತ್ತಿದ್ದಾರೆ.

  ಐಟಿ-ಬಿಟಿಯಲ್ಲಿ ವಿಶ್ವದ ಗಮನ ಸೆಳೆದು ಸಿಲಿಕಾನ್ ಸಿಟಿ ಎಂದು ಖ್ಯಾತಿ ಪಡೆದ ಬೆಂಗಳೂರು ಇಂದೂ ಕೊರೊನಾ- ಸಿಟಿ’ ಯಾದರೂ ಆಶ್ಚರ್ಯವಿಲ್ಲ. ಇದೂ ರಾಜ್ಯ ಸರ್ಕಾರದ ಎಡವಟ್ಟು ಎಂದು ಹೇಳುವ ಹಾಗಿಲ್ಲ. ಕೊರೊನಾ ಉಲ್ಭಣವಾಗುವುದರೊಳಗೆ ಸಾವಿರಾರು ಜನರು ಹೊರದೇಶಗಳಿಂದ ಬಂದು ಸೇರಿರುವ ಶಂಕೆ ಇದೆ.

   ಬೆಂಗಳೂರು ಏರ್‌ಪೋರ್ಟ್ ಬಳಿ ಇಟ್ಟ ನಿಗಾವನ್ನು ಅಕ್ಕ-ಪಕ್ಕದ ರಾಜ್ಯಗಳ ಏರ್‌ಪೋರ್ಟ್‌ನಿಂದ ಬಂದು ರಾಜ್ಯಕ್ಕೆ ಬಂದವರ ಮೇಲೆ ನಿಗಾ ಇಡಲು ಆಗಿಲ್ಲ. ಕಡಲ ತೀರದಲ್ಲೂ ಬಹಳ ಜನ ರಾಜ್ಯಕ್ಕೆ ಬಂದಿರುವ ಶಂಕೆ ಇದೆ. ದೇಶ-ವಿದೇಶಗಳ ಜನ ಜಂಗುಳಿಯೇ ಬೆಂಗಳೂರು. ಸಾಪ್ಟ್‌ವೇರ್ ಕಂಪನಿಗಳು ಹಲವಾರು ರಾಜ್ಯದ, ದೇಶಗಳ ಸಂಗಮವಾಗಿವೆ.

  ಲಾಕ್‌ಡೌನ್‌ಗೂ ಜನ ಜಗ್ಗಲ್ಲ ಎಂದರೆ, ಇದೇ ರೀತಿ ರೋಗ ಉಲ್ಭಣವಾದರೆ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಲೇ ಬೇಕಿದೆ. ಬೆಂಗಳೂರಿನ ಪೋಲೀಸ್ ಎಲ್ಲಾ ಕಡೆ ನಿಗಾ ಇಡಲು ಸಾಧ್ಯವೇ? ಮಿಲ್ಟ್ರಿ ಸಹಾಯ ಬೇಕೆ? ಮನೆಯಿಂದ ಹೊರಬರುವವರಿಗೆ ಭಯ ಹುಟ್ಟಿಸಲು ಕಂಡಲ್ಲಿ ಗುಂಡಿಕ್ಕಿ ಆದೇಶ ಜಾರಿಯಾಗ ಬೇಕೆ? ಎಂಬ ಬಗ್ಗೆ ಟಾಸ್ಕ್ ಪೋರ್ಸ್ ಚರ್ಚಿಸಬೇಕಿದೆ.

  ಜನಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಗಳಿಲ್ಲ, ವೈದ್ಯರಿಲ್ಲ ಎಂಬ ಕೊರಗು ಬರಬಾರದು. ಎಷ್ಟೇ ಕಷ್ಟವಾದರೂ ವಿಶೇಷ ವ್ಯವಸ್ಥೆ ಮಾಡಲೇ ಬೇಕು. ಪೂರ್ವ ಸಿದ್ಧತೆ  ಸಮರೋಪಾದಿಯಲ್ಲಿ ನಡೆಯ ಬೇಕಿದೆ. ಮಾತಿನಲ್ಲಿ, ಪತ್ರಿಕಾ ಹೇಳಿಕೆಗೆ ಸೀಮಿತವಾಗದೆ ಕೈಗೊಂಡ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು.

   ರೂ 200 ಕೋಟಿಯಿಂದ ಕೊರೊನಾ ತಡೆಗಟ್ಟಲೂ ಸಾಧ್ಯವೇ ಇಲ್ಲ ಎಂಬ ಭಾವನೆ ಜನರ ಮನಸ್ಸಿನಲ್ಲಿದೆ. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರೇ ನೇರ ಅಖಾಡಕ್ಕೆ ಇಳಿದಿರುವುದು ಜನತೆಗೆ ತುಸು ನೆಮ್ಮದಿ ತಂದಿದೆ. ಆದರೇ ಪರಿಸ್ಥಿತಿ ಉತ್ತಮವಾಗಿಲ್ಲ.

   ಬೆಂಗಳೂರಿಗೆ ಒಬ್ಬರು ಮತ್ತು ರಾಜ್ಯಕ್ಕೆ ಒಬ್ಬರು ಸಚಿವರಿಗೆ ಪೂರ್ಣ ಜವಾಬ್ಧಾರಿ ನೀಡುವುದು ಸೂಕ್ತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳು ಎಲ್ಲಾ ಜಿಲ್ಲಾ ಮಟ್ಟದಲ್ಲಿ ಸಮರೋಪಾದಿಯಲ್ಲಿ ಕಠಿಣ ನಿರ್ಧಾರ ಕೈಗೊಳ್ಳುವುದು ಅನಿರ್ವಾವಾಗಿದೆ.

ಮಾಸ್ಕ್ ಮತ್ತು ಸ್ಯಾನಿಟೈಸರ್ ಸಪ್ಲೈ’ ಮಾಡಲು ಇನ್ನೂ ಸಾಧ್ಯವಾಗಿಲ್ಲ ಎಂದು ಜನ ಗೊಣಗುತ್ತಿದ್ದಾರೆ. ಲಾಕ್ ಡೌನ್ ಆದ ಮೇಲೆ ದಿನ ನಿತ್ಯದ ವಸ್ತುಗಳ ಸರಬರಾಜು ಬಗ್ಗೆ ವಿಶೇಷ ಗಮನ ಹರಿಸುವುದು ಅಗತ್ಯವಾಗಿದೆ.