31st March 2023
Share

TUMAKURU:SHAKTHIPEETA FOUNDATION

  ಕೊರೊನಾ ಮಹಾಮಾರಿಗೆ ತತ್ತರಿಸುವ ನಗರ ಪ್ರದೇಶಗಳ ಅಪಾರ್ಟ್‌ಮೆಂಟ್ ಮಾಲೀಕರು, ರೆಸಾರ್ಟ್ ಮಾಲೀಕರು, ಲಾಡ್ಜ್‌ಗಳ ಮಾಲೀಕರು  ಆಯಾ ರಾಜ್ಯದ ಮುಖ್ಯಮಂತ್ರಿಗಳ ಬಳಿ ಲಾಭಿ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ.

  ರೆಸಾರ್ಟ್ ಮಾಲೀಕರು, ಲಾಡ್ಜ್‌ಗಳ ಮಾಲೀಕರು  ನಮಗೆ ಬಾಡಿಗೆಗೆ ಯಾರು ಬರುತ್ತಿಲ್ಲ ಖಾಲಿ ಉಳಿದಿವೆ, ಅಡುಗೆ ಭಟ್ಟರು ಮತ್ತು ಕೂಲಿಕಾರ್ಮಿಕರಿಗೆ ಕೂಲಿ ಕೊಡಲೇ ಬೇಕಿದೆ. ಆದ್ದರಿಂದ ಆಸ್ಪತ್ರೆಗೆ ನಮ್ಮ ಕಟ್ಟಡಗಳನ್ನು ತೆಗೆದುಕೊಳ್ಳಿ ಎಂದು ದುಂಬಾಲು ಬಿದ್ದಿದ್ದಾರಂತೆ.

    ಅಪಾರ್ಟ್‌ಮೆಂಟ್ ಮಾಲೀಕರುಗಳು ಹೇಗೂ ಡಾಕ್ಟರ್‍, ನರ್ಸ್, ಲ್ಯಾಬ್ ಟೆಕ್ನಿಷಿಯನ್ ಮತ್ತು ಪೋಲೀಸ್‌ರನ್ನು ಮನೆ ಮಾಲೀಕರು ಖಾಲಿ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಸಾವಿರಾರು ಅಪಾರ್ಟ್ ಮೆಂಟ್‌ಗಳು  ನೋಟ್ ಬ್ಯಾನ್‌ನಿಂದ ಖಾಲಿ ಬಿದ್ದಿವೆ. ಇವರಿಗೆಲ್ಲಾ ಒಂದು ಸ್ಕೀಂ ಮಾಡಿ ಹೌಸಿಂಗ್ ಫಾರ್‌ಆಲ್-2022 ಯೋಜನೆಯಡಿಯಲ್ಲಿ ಬ್ಯಾಂಕ್‌ನಿಂದ ಸಾಲಕೊಡಿಸಿ ಪ್ಲಾಟ್ ಕೊಡಿಸಿ ಬಡ್ಡಿಯನ್ನು ಸರ್ಕಾರವೇ ಪಾವತಿಸಲು ನಿಯಮ ರೂಪಿಸಿ. ಅವರಿಗೂ ಸಹಾಯ ಮಾಡಿದ ಹಾಗೆ ಆಗಲಿದೆ. ನಮಗೂ ವ್ಯಾಪಾರ ಆಗಲಿದೆ ಎಂಬ ಸಲಹೆ ನೀಡುತ್ತಿದ್ದಾರಂತೆ.

  ದೆಹಲಿಯ ಮುಖ್ಯಮಂತ್ರಿ ಮಾನ್ಯ ಶ್ರೀ ಅರವಿಂದ್ ಕೇಜ್ರಿವಾಲ್‌ರವರು ಅಪಾರ್ಟ್ ಮೆಂಟ್ ಮಾಲೀಕರಿಗೆ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಿದ ಕೂಲಿಕಾರ್ಮಿಕರು ಗುಡಿಸಲಿನಲ್ಲಿದ್ದಾರೆ. ಕೊರೊನಾ ಮುಗಿಯುವವರೆಗೂ ಅವರೆಲ್ಲರನ್ನೂ ಖಾಲಿ ಅಪಾರ್ಟ್ ಮೆಂಟ್‌ಗಳಲ್ಲಿ ಇರಿಸೋಣ, ಮಾಲೀಕರಿಗೆ ಬಾಡಿಗೆ ನಿಡೋಣ, ಬಡವರಿಗೆ ಊಟ ಮತ್ತು ಔಷಧಿ ನೀಡುವ ಮೂಲಕ ಅನೂಕೂಲ ಕಲ್ಪಿಸೋಣ ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದಾರಂತೆ.

   ಗ್ರಾಮೀಣ ಪ್ರದೇಶಗಳಲ್ಲಿ ನೀರಿಗೆ ತೊಂದರೆ ಆದಾಗ ನೀರು ಬರುವ ಬೋರ್‌ವೆಲ್‌ಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆಯಲಿದೆ. ಆದೇ ಮಾದರಿಯಲ್ಲಿ ಖಾಲಿ ಕಟ್ಟಡ ಪಡೆಯಲು ರಾಜ್ಯ ಸರ್ಕಾರಗಳಿಗೆ ಕೆಲವರು ಸಲಹೆ ನೀಡುತ್ತಿದ್ದಾರಂತೆ. ದೆಹಲಿಯ ನಾಯಕರೊಬ್ಬರೂ ಅಚ್ಚರಿಯ ಈ ಮಾಹಿತಿ ತಿಳಿಸಿದ್ದಾರೆ.