TUMAKURU:SHAKTHIPEETA FOUNDATION.
ಕೊರೊನಾ ಮಹಾಮಾರಿ ಆರ್ಭಟದಿಂದ ರಾಜ್ಯದ ಯಾವುದೇ ಆಸ್ಪತ್ರೆಯಲ್ಲಿ ವಾರ್ಡ್‌ಗಳು ಖಾಲಿ ಇರುವುದಿಲ್ಲಾ. ಬಹುಷಃ ಡಾಕ್ಟರ್‍ಸ್‌ಗಳೇ ಮೊಬೈಲ್ ಆಸ್ಪತ್ರೆ ಮಾಡಿಕೊಂಡು ರಸ್ತೆ ಮೇಲೆ ಬಂದು ಟ್ರೀಟ್ ಮೆಂಟ್ ಕೊಡುವ ಕಾಲ ದೂರವಿಲ್ಲವೇನೋ ಎಂದು ಅನಿಸುತ್ತಿದೆ.
ಬಹುಷಃ ಶಾಲಾವಾಹನಗಳು ಮೊಬೈಲ್ ಆಸ್ಪತ್ರೆಗಳಾದರೂ ಆಶ್ಚರ್ಯವಿಲ್ಲ. ಅದಕ್ಕೂ ಮೊದಲು ಲಾಡ್ಜ್‌ಗಳು, ಶಾಲಾ ಕಾಲೇಜುಗಳ ಹಾಸ್ಟೆಲ್‌ಗಳು ಹೀಗೆ ಖಾಲಿ ಇರುವ ಕಟ್ಟಡಗಳ ಮಾಹಿತಿಯನ್ನು ಮತ್ತು ಶಾಲಾವಾಹನಗಳ ಮಾಹಿತಿಯನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ದೂರದೃಷ್ಟಿಯಿಂದ ಪಟ್ಟಿ ಮಾಡಿ ಇಟ್ಟುಕೊಳ್ಳುವುದು ಸೂಕ್ತವಾಗಿದೆ. ಇವೂ ಮುಗಿದ ಮೇಲೆ ಮನೆಗಳೇ ವಾರ್ಡ್‌ಗಳಾಗಲಿವೆ.
ಇದನ್ನು ತಡೆಗಟ್ಟಬೇಕಾದವರೇ ಬೀದಿಯಲ್ಲಿ ಓಡಾಡುವಾಗ ಪೋಲೀಸರು ತಾನೆ ಏನು ಮಾಡಲು ಸಾಧ್ಯ. ಅವರ ರಕ್ಷಣೆಯೇ ಅವರಿಗೆ ಸಾಕಾಗುವ ಕಾಲ ಬರಲಿದೆ. ಸರ್ಕಾರ ಪೋಲೀಸರಿಗೆ, ವೈದ್ಯರಿಗೆ, ನರ್ಸ್‌ಗಳಿಗೆ, ಲಾಬ್ ಟೆಕ್ನಿಷಿಯನ್‌ಗಳಿಗೆ ರೂ 50 ಲಕ್ಷ ವಿಮೆ ಘೋಷಿಸಿದೆ. ಆದರೇ ಅವರ ರಕ್ಷಣೆಗೆ ಇನ್ನೂ ಏನು ನೀಡಿಲ್ಲವನೋ ಅನಿಸುತ್ತಿದೆ. ಪೋಲೀಸರು ಈಗಲೂ ಮಾಮೂಲಿಯಾಗಿದ್ದಾರೆ.
ಇಂತಹ ಸಂದರ್ಭದಲ್ಲಿ ಸೋಶಿಯಲ್ ಮಿಡಿಯಾದಲ್ಲಿ ಪ್ರಕಟವಾಗಿರುವ ತುಮಕೂರಿನ ಮಾಜಿ ಸಚಿವ ಶ್ರೀ ಸೊಗಡು ಶಿವಣ್ಣನವರು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಬರೆದ ಪತ್ರ ನಿಜವಾಗಿದ್ದರೇ ನಿಜಕ್ಕೂ ಅವರಿಗೆ ಅಭಿನಂದನೆ ಸಲ್ಲಿಸಲೇಬೇಕು. ಇದೊಂದು ಸಮಯೋಚಿತ ನಿರ್ಧಾರ ಮತ್ತು ಇತರ ಚುನಾಯಿತ ಜನಪ್ರತಿನಿಧಿಗಳಿಗೆ ಮಾದರಿಯಾಗಲಿದೆ.
ನಿಮಗೊಂದು ಸಲಾಂ ಸೊಗಡು.