11th December 2024
Share

TUMAKURU:SHAKTHIPEETA FOUNDATION

 ಕೊರೊನಾ ಮಾಹಾಮಾರಿಯ ಐಸೋಲೇಷನ್ ವಾರ್ಡ್‌ಗಾಗಿ ಗುಬ್ಬಿ ಶ್ರೀ ಚನ್ನಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಬಳಸಿಕೊಳ್ಳಲು ತುಮಕೂರು ಲೋಕಸಭಾ ಸದಸ್ಯರು ಹಾಗೂ ಸಿಐಟಿ ಸಂಸ್ಥೆಯ ಅಧ್ಯಕ್ಷರು ಆದ  ಶ್ರೀ ಜಿ.ಎಸ್.ಬಸವರಾಜ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಸಂಸ್ಥೆಯ ಕಾರ್ಯದರ್ಶಿಯೂ ಆಗಿದ್ದಾರೆ.

   ಅಷ್ಟೆ ಅಲ್ಲ ಕೊರೊನಾ ದಿಗ್ಭಂದನ  ಹಿನ್ನೆಲೆಯಲ್ಲಿ ಯಾರೊಬ್ಬರೂ ಸಹ ಅನ್ನಕ್ಕಾಗಿ ಪರದಾಡಬಾರದು. ತುಮಕೂರು ಜಿಲ್ಲೆಯ ನಗರವಾಸಿಗಳಲ್ಲಿ ಹಸಿದವರಿಗೆ ಛತ್ರಗಳಲ್ಲಿ ಅಥವಾ ವಾಹನಗಳಲ್ಲಿ ಆಹಾರ ಪೊಟ್ಟಣಗಳನ್ನು ಸರಬರಾಜು ಮಾಡಿಸಲು ಚಿಂತನೆ ನಡೆಸಿದ್ದಾರೆ. ಅಹಾರದ ಅಗತ್ಯವಿರುವವರ ಮಾಹಿತಿ ಸಂಗ್ರಹಿಸಲು ನಗರಾಧ್ಯಾಂತ ಪರಿಣಿತರ ತಂಡಕ್ಕೆ ಸೂಚಿಸಿದ್ದಾರೆ.

  ಹಾಗೆಯೇ ವಾಹನಗಳಲ್ಲಿ ದಿನಸಿ ಪದಾರ್ಥಗಳನ್ನು ನಗರದ ಪ್ರತಿಯೊಂದು ರಸ್ತೆಯಲ್ಲೂ ನಿಗದಿತ ಸಮಯದಲ್ಲಿ ವಾಹನಗಳ ಮೂಲಕ ಮಾರಾಟಕ್ಕೆ ವ್ಯವಸ್ಥೆ ಮಾಡುವ ಅಗತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಲು ಸಹ ಸೂಚಿಸಿದ್ದಾರೆ.

  ತುಮಕೂರಿನ ಜನರಿಗೆ ಯಾವುದೇ ರೀತಿಯ ತೊಂದರೆ ಯಾವುದಕ್ಕೂ ಆಗಬಾರದು. ಗ್ರಾಮೀಣ ಪ್ರದೇಶಗಳಿಂದ ರೈತರು ಬೆಳೆದಿರುವ ತರಕಾರಿ ಮತ್ತು ಹಣ್ಣುಗಳನ್ನು ನಗರ ಪ್ರದೇಶಗಳ ಜನತೆಗೆ ನೇರವಾಗಿ ಮಾರಾಟಕ್ಕೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 ದೆಹಲಿಯ ತನ್ನ ಮನೆಯಲ್ಲಿ ರಾಜ್ಯದಿಂದ ಯಾರೇ ಹೋದರೂ ಊಟ ಹಾಕುವ, ತುಮಕೂರಿನ ಸಾಯಿಬಾಬಾ ದೇವಾಲಯದಲ್ಲಿ ನಿತ್ಯವೂ ಬಂದ ಜನರಿಗೆ ದಾಸೋಹ ನಡೆಸುವ ಬಸವರಾಜ್‌ರವರು ನಗರದ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂಬ ನಿಲುವು ಹೊಂದಿದ್ದಾರೆ.