15th January 2025
Share

TUMAKURU:SHAKTHIPEETA FOUNDATION

   ಕೊರೊನಾ ದಿಗ್ಭಂದನ  ಹಿನ್ನೆಲೆಯಲ್ಲಿ ವಾಹನಗಳಲ್ಲಿ ಮೊಬೈಲ್ ದಿನಸಿ ಅಂಗಡಿಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ ಬಿಡುವುದು ಸೂಕ್ತ. ಜನರಿಗೆ ಯಾವಾಗ ಬರುತ್ತದೊ ಎಂಬ ಗಾಬರಿ ಇರಬಾರದು. ನಿಗದಿತ ಸಮಯದಲ್ಲಿ ಆಯಾ ರಸ್ತೆಯಲ್ಲಿ ಹಾದು ಹೋಗುವಂತಿರಬೇಕು. ಸಮಯ ಹೆಚ್ಚು ಕಡಿಮೆ ಆದರೂ ಎಲ್ಲರೂ ಮನೆಯಲ್ಲಿಯೇ ಇರುವುದರಿಂದ ತೊಂದರೆ ಆಗಲಾರದು.

ನಗರಪ್ರದೇಶಗಳ ಎಲ್ಲಾ ವಾರ್ಡ್‌ಗಳಲ್ಲೂ ಒಂದೊಂದು ಕೆಎಸ್‌ಆರ್‌ಟಿಸಿ ಅಥವಾ ಖಾಸಗಿ ಬಸ್‌ನಲ್ಲಿ ದಿನಸಿ ಸಾಮಾನು, ಹಣ್ಣು, ಹಾಲು ಹೀಗೆ ಏನೇನು ಬೇಕು ಅವುಗಳನ್ನು ಸಂಗ್ರಹಿಸಿ ನಿಗದಿತ ಸಮಯದಲ್ಲಿ ನಿರ್ಧಿಷ್ಠ ಮಾರ್ಗದಲ್ಲಿ ಸಾಗುವ ವ್ಯವಸ್ಥೆ ಆಗಬೇಕು.

ಘನತ್ಯಾಜ್ಯ ವಸ್ತು ಸಂಗ್ರಹ ಮಾಡುವ ವಾಹನದ ಮಾದರಿಯಲ್ಲಿ ಮೈಕ್‌ನಲ್ಲಿ ಪ್ರಚಾರ ಮಾಡಬಹುದು.

ಖಾಸಗಿ ಅಂಗಡಿ ಮಾಲೀಕರಿಗೆ ಪಾಸ್/ಪರವಾನಗಿ ನೀಡಿ ಸರ್ಕಾರ ಉಚಿತವಾಗಿ ಬಸ್ ವ್ಯವಸ್ಥೆ ಮಾಡಬಹುದು.

ಆನ್‌ಲೈನ್ ಮೂಲಕವೂ  ಆರ್ಡರ್ ಮಾಡಲು ಅವಕಾಶ ಕಲ್ಪಿಸ ಬಹುದು.

ನೇರವಾಗಿಯೂ ಸಿಕ್ಕ ವಸ್ತುಗಳನ್ನು ಕೊಂಡುಕೊಳ್ಳಲು ವ್ಯವಸ್ಥೆಮಾಡಬಹುದು.

ನಗರ ಪ್ರದೇಶಗಳಲ್ಲಿ ವಾರ್ಡ್‌ಗಳ ಪಾಲಿಕೆ ಸದಸ್ಯರು, ಸ್ವಯಂ ಸೇವಕರು, ಅಧಿಕಾರಿಗಳು ನೇತೃತ್ವ ವಹಿಸಕೊಳ್ಳಬಹುದು.

ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ವಿಲೇಜ್ ಟಾಸ್ಕ್ ಪೋರ್‍ಸ್ ಸಮಿತಿ ಹೊಣೆಗಾರಿಕೆ ವಹಿಸಕೊಳ್ಳಬಹುದು.

ಇದೇ ವಾಹನದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಿಗುವ ತರಕಾರಿ, ದಿನಸಿ ಸಾಮಾನುಗಳನ್ನು ಕೊಂಡು ಕೊಳ್ಳಲು ವ್ಯವಸ್ಥೆಯಾಗಬೇಕು.

ಗ್ರಾಮೀಣ ಪ್ರದೇಶದಲ್ಲಿನ ವಸ್ತುಗಳ ಮಾರಾಟವೂ ಮನೆ ಬಾಗಿಲಿನಲ್ಲಿಯೇ ಆದಂತಾಗುತ್ತದೆ.

ಅದೂ ಕಾಟಚಾರಕ್ಕೆ ಅಥವಾ ಪ್ರಚಾರಕ್ಕೆ ಆಗಬಾರದು, ಸರ್ಕಾರದ ಇಲಾಖೆಗಳಿಂತರಬೇಕು, ವಾಹನಗಳು ಆಯಾ ಪ್ರದೇಶಗಳ ಜನತೆಯ ಮನಸ್ಸಿಗೆ ನೆಮ್ಮದಿ ತರುವುದರ ಜೊತೆಗೆ ಆಹಾರ ಪದಾರ್ಥಗಳಿಗೆ ಆಹಾಕಾರ ಆಗದ ರೀತಿಯಲ್ಲಿ ಇರಬೇಕು. ಮನೆಯಿಂದ ಹೊಹೋಗುವ ಪ್ರಮೇಯವೇ ಇರುವುದಿಲ್ಲಾ.

ಹೊಟೆಲ್ ಮಾಲೀಕರು ಈ ವ್ಯವಸ್ಥೆ ಮಾದರಿಯಲ್ಲಿ ಪಾರ್ಸಲ್ ಆಹಾರ ಪದಾರ್ಥಗಳನ್ನು ನೀಡಬಹುದು.