16th September 2024
Share

TUMAKURU:SHAKTHIPEETA FOUNDATION

   ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಪ್ರಧಾನಮಂತ್ರಿಗಳಾಗಿದ್ದ ಶ್ರೀ ಮನಮೋಹನ್ ಸಿಂಗ್ ಮತ್ತು ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಬ್ಬರೂ ದೇಶದಲ್ಲಿ ಡಿಬಿಟಿ ಕ್ರಾಂತಿಯ’ ಹರಿಕಾರರು.

   ಶ್ರೀ ಮನಮೋಹನ್ ಸಿಂಗ್ ಆಧಾರ್, ಜನಧನ ಖಾತೆ, ಡಿಬಿಟಿ ಯೋಜನೆಗಳ ಚಿಂತನೆ ಮಾಡಿದರು ಪಟ್ಟಭದ್ರಾ ಹಿತಾಸಕ್ತಿಗಳು ಜಾರಿ ಮಾಡಲು ಬಿಡಲಿಲ್ಲ. ಶ್ರೀ ನರೇಂದ್ರ ಮೋದಿಯವರು ಅಧಿಕಾರ ಹಿಡಿದ ತಕ್ಷಣ ತೀವೃಗತಿಯಲ್ಲಿ ಚಾಲನೆ ನೀಡಿದರು.

  ಮೊಬೈಲ್ ಕ್ರಾಂತಿ ಹರಿಕಾರರಾದ ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿಯವರು ಕೇಂದ್ರ ಸರ್ಕಾರ ನೀಡುವ ಹಣ ಪಲಾನುಭವಿಗಳಿಗೆ ತಲುಪುವುದು ಕೇವಲ ಶೇ 30 ರಷ್ಟು ಎಂದು ಬಹಿರಂಗವಾಗಿ ಅಂದೇ ಹೇಳಿದ್ದರು. ಶ್ರೀ ನರೇಂದ್ರ ಮೋದಿಯವರು ಮುಖ್ಯ ಮಂತ್ರಿಗಳಾಗಿ ಅನುಭವ ಪಡೆದಿದ್ದರಿಂದ ಕೇವಲ ಶೇ 15 ರಷ್ಟು ತಲುಪುವುದಿಲ್ಲ ಎಂದಿದ್ದರು.

  ನೋಡಿ ಅವರ ಅನುಭವದ ಮಾತುಗಳು ಕೃತಿಗೆ ಇಳಿಯಬೇಕಾದಲ್ಲಿ ಹಲವಾರು ವರ್ಷಗಳು ತೆಗೆದು ಕೊಂಡವು, ಇಂದು ಕೇಂದ್ರ ಸರ್ಕಾರ ಘೋಷಿಸಿರುವ ಕೊರೊನಾ ಪ್ಯಾಕೇಜ್ ರೂ 1.70 ಲಕ್ಷ ಕೋಟಿ ಹಣ ನೇರವಾಗಿ ಪಲಾನುಭವಿಗಳ ಬ್ಯಾಂಕ್ ಖಾತೆಗೆ (DIRECT BENEFIT TRANSFER OR DBT) ಜಮಾ ಆಗುವ ಕಾಲ ನೋಡಿ ಖುಷಿಯಾಗುತ್ತಿದೆ. ಇದು ನಿಜವಾದ ಪ್ರಜಾ ಪ್ರಭುತ್ವ.

  ನೋಡಿ ಆಧಾರ್ ಮತ್ತು ಜನಧನ ಖಾತೆ ಮಾಡುವಾಗ ಕೆಲವರು ಅಣಕ ಆಡಿದರು. ಇನ್ನೂ ಕೆಲವರು ನೀವು ಮಾಡಿಸಬೇಡಿ ನೋಡೋಣ ಆ ಮೋದಿ ಏನು ಮಾಡುತ್ತಾನೆ ಎಂದು ಮಾಧ್ಯಮದ ಮುಂದೆ ಬೊಬ್ಬೆ ಹೊಡೆದಿದ್ದರೂ.

  ಈಗ ಅಂದು ನನ್ನ ಜೊತೆ ಟೀಕೆ ಮಾಡಿದ್ದ ಒಬ್ಬ ಬಡವರ ಪರ ಚಿಂತಕರು, ಇಂದು ನೋಡಿ ರಮೇಶ್ ಅವರೇ ಇನ್ನೂ ಎಷ್ಟೋ ಜನಕ್ಕೆ ಆಧಾರ್ ಕಾರ್ಡ್ ಇಲ್ಲ, ಜನಧನ ಖಾತೆ ಇಲ್ಲ ಅಂಥವರಿಗೆ ಏನು ಮಾಡೋದು ಎಂದು ಕೇಳಿದರು. ನಾನು ಏನು ಸಾರ್ ಆವತ್ತು ನೀವು ನನ್ನ ಜೊತೆ ಏನು ಮಾತನಾಡಿದ್ರಿ ಎಂದು ನೇರವಾಗಿ ಕೇಳಿದೆ.

 ಅವರ ಉತ್ತರ ಅದು ಈಗ ಬೇಡ ಬೀಡಿ, ಏನಾದರೂ ಮಾಡಿ ಯಾರಿಗೆ ಆಧಾರ್ ಇಲ್ಲವೋ? ಯಾರಿಗೆ ಜನಧನ ಖಾತೆ ಇಲ್ಲವೋ ಅಂತವರಿಗೆ ಅನ್ಯಾಯ ಆಗಬಾರದು. ಈಗಲೂ ಎನ್.ಜಿ.ಓ ಗಳ ಮುಖಾಂತರ ಅಂಥವರನ್ನು ಹುಡುಕಿ ಮಾಡಿಸಿ ಹಣ ಬರುವ ಹಾಗೆ ಮಾಡಿದರೆ ನಿಜಕ್ಕೂ ಒಳ್ಳೆಯದು ಎನ್ನುತ್ತಾರೆ.

  ಹೌದು ಖಂಡಿತ ಇದು ನ್ಯಾಯಯುತವಾದ ಬೇಡಿಕೆ. ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ವಿಲೇಜ್ ಟಾಸ್ಕ್ ಫೋರ್‍ಸ್‌ನವರು ಆಧಾರ್, ಸಾಮಾಜಿಕ ಭಧ್ರತೆ ಯೋಜನೆ ಮತ್ತು ಜನಧನ ಖಾತೆ ವಂಚಿತರು ಇದ್ದರೆ ಈಗಲೂ ಮಾಡಿಸುವುದು ಸೂಕ್ತ.

   ನಗರ ಪ್ರದೇಶಗಳಲ್ಲಿ ಘನತ್ಯಾಜ್ಯ ವಸ್ತು ಸಂಗ್ರಹಿಸುವ ವಾಹನಗಳಲ್ಲಿರುವ ಮೈಕ್‌ನಲ್ಲಿ ಅನೌನ್ಸ್ ಮಾಡಿಸಿ, ಆಧಾರ್, ಬ್ಯಾಂಕ್ ಖಾತೆ ಇಲ್ಲದವರನ್ನು ಹುಡುಕಿ ಮಾಡಿಸಿದರೆ ಇಂತಿಷ್ಟು ಸಹಾಯಧನ ಎಂದು ಘೋಷಿಸಿ ಮಾಡಿಸುವುದು ಸೂಕ್ತವಾಗಿದೆ.

ಅಥವಾ

 ಯಾರ ಮನೆಯ ಬಳಿ ಅಥವಾ ಅವರು ವಾಸಿಸುವ ರಸ್ತೆಗಳಲ್ಲಿ ಆಧಾರ್, ಬ್ಯಾಂಕ್ ಖಾತೆ ಇಲ್ಲದವರನ್ನು ಹುಡುಕಿ ಸ್ಥಳೀಯ ಸಂಸ್ಥೆಗಳಿಗೆ ತಿಳಿಸಿದಲ್ಲಿ ಇದು ಬಡವರ ಪಾಲಿಗೆ ವರದಾನವಾಗಲಿದೆ. ಮಾನ್ಯ ಮುಖ್ಯ ಮಂತ್ರಿಗಳು ಈ ಬಗ್ಗೆ ಸೂಕ್ತ ಆದೇಶ ಹೊರಡಿಸುವುದು ಸಮಯೋಚಿತವಾಗಿದೆ.

   ಬಡವರು ಸರ್ಕಾರದ ಯೋಜನೆಗಳಿಂದ ವಂಚಿತರಾಗಬಾರದು, ಅನ್ನವಿಲ್ಲದೆ ನರಳಬಾರದು, ಇದೂ ಸಹ ವಿಶ್ವ ಒಪ್ಪುವ ಚಿಂತನೆ ಸ್ವಾಮಿ.