5th December 2024
Share

TUMAKURU:SHAKTHIPEETA FOUNDATION

  ಕೊರೊನಾ ಮಹಾಮಾರಿ ತಡೆಗಟ್ಟಲು ದೇಶಾದ್ಯಂತ ತಾವು ಕೈಗೊಂಡಿರುವ ಕ್ರಮ ಅತ್ಯಂತ ಶ್ಲಾಘನೀಯ.ಎಲ್ಲಾ ವರ್ಗದ ಜನತೆಗೆ ಪ್ರತಿದಿನವೂ ಹಲವಾರು ಜನಪರ ಯೋಜನೆಗಳನ್ನು ಘೋಷಿಸಿಸುವ ಮೂಲಕ ಜನರ ಪ್ರೀತಿಗೆ ಪಾತ್ರಾರಾಗಿದ್ದೀರಿ.

  ದಿಗ್ಭಂದನ  ಹಿನ್ನೆಲೆಯಲ್ಲಿ ಯಾರು ಸಹ ಅನ್ನಕ್ಕಾಗಿ ಪರದಾಡಬಾರದು. ಎಂಬ ದೂರದೃಷ್ಟಿಯಲ್ಲಿ ಕಾರ್ಮಿಕರಿಗೆ, ವಲಸೆದಾರರಿಗೆ ಊಟ ವಸತಿ ನೀಡಲು ಸಹ ರಾಜ್ಯಗಳಿಗೆ ಆದೇಶ ನೀಡಿರುವುದು ಸ್ವಾಗಾತಾರ್ಹವಾಗಿದೆ.

  ವಿಶೇಷವಾಗಿ ದೇಶಾದ್ಯಂತ ನಗರ ಪ್ರದೇಶಗಳಲ್ಲಿ ವಾರ್ಡ್‌ವಾರು ಆಹಾರ ದಿನಸಿ ಪದಾರ್ಥಗಳು, ಹಣ್ಣು, ತರಕಾರಿ, ಹಾಲು ಮತ್ತು ಅಗತ್ಯವಿರುವವರಿಗೆ ಆಹಾರ ಪದಾರ್ಥಗಳನ್ನು ಪ್ರತಿಯೊಂದು ರಸ್ತೆಯಲ್ಲೂ ನಿಗದಿತ ಸಮಯದಲ್ಲಿ ವಾಹನಗಳ ಮೂಲಕ ಮಾರಾಟಕ್ಕೆ ವ್ಯವಸ್ಥೆ ಮಾಡುವ ಅಗತ್ಯವಿದೆ. 

 ಗ್ರಾಮೀಣ ಪ್ರದೇಶಗಳಲ್ಲಿ ರೈತರು ಬೆಳೆದಿರುವ ಎಲ್ಲಾ ವಿಧವಾದ ಬೆಳೆಗಳು, ತರಕಾರಿ, ಹಣ್ಣು ಇತರೆ ವಸ್ತುಗಳನ್ನು ನೇರವಾಗಿ ರೈತರೆ ತಂದು ನಗರ ಪ್ರದೇಶಗಳಲ್ಲಿ ಮಾರಾಟ ಮಾಡಲು ಅಥವಾ ಸರ್ಕಾರ ಖರೀದಿಸಿ ನಗರ ಪ್ರದೇಶಗಳಲ್ಲಿ ಮಾರಾಟ ಮಾಡಲು ಅಗತ್ಯ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಮನವಿ ಮಾಡಿದ್ದಾರೆ.

 ನಗರದಲ್ಲಿ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದರೆ, ಹೊರಗಡೆ ಓಡಾಡುವ ಜನರ ಸಂಖ್ಯೆ ಕಡಿಮೆ ಆಗಲಿದೆ. ನಂತರವೂ ಹೊರಗಡೆ ಓಡಾಡುವ ಜನರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವಾಗಿದೆ. 

   ಗ್ರಾಮೀಣ ಪ್ರದೇಶಗಳ ಜನತೆಯಲ್ಲಿ ಜಾಗೃತಿ ಮೂಡಿದೆ. ರೈತರು ಬೆಳೆಗಳನ್ನು ಅದಲು ಬದಲು ಮಾಡಿಕೊಂಡು ಜೀವನ ನಡೆಸುವ ಸೌಹಾರ್ಧತೆ ಇದೆ. ಅಗತ್ಯ ವಸ್ತಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ವಿತರಣೆ ಮಾಡಿದರೆ ಸಾಕಾಗುತ್ತದೆ.

   ಆದರೆ ನಗರ ಪ್ರದೇಶಗಳಲ್ಲಿ ಈ ವಾತವಾರಣ ಮಾಯಾವಾಗಿದೆ. ಎಲ್ಲಾ ವರ್ಗದವರು ಸಹ ಮನೆಗಳಲ್ಲಿ ಜಾಸ್ತಿ ಪದಾರ್ಥಗಳ ಸಂಗ್ರಹ ಮಾಡುವುದು ಅತಿಕಡಿಮೆ. ಈಗಾಗಲೇ ಐದು ದಿವಸಗಳಾಗಿದೆ. ಬಹುತೇಕ ಜನರು ಮನೆಬಾಗಿಲಿಗೆ ವ್ಯವಸ್ಥೆ ಮಾಡಲು ಸಲಹೆ ನೀಡುತ್ತಿದ್ದಾರೆ. ಆದ್ದರಿಂದ ದೇಶಾಧ್ಯಂತ ಈ ಯೋಜನೆ ಜಾರಿಗೊಳಿಸಲು ಮನವಿ ಮಾಡಿದ್ದಾರೆ.

   ತಾವು ಕೈಗೊಂಡ ನಿರ್ಧಾರಗಳಿಂದ ನೇರವಾಗಿ ಜನತೆಯ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗುವುದರಿಂದ  ಪಾರದರ್ಶಕವಾಗಿದೆ. ಕೆಲವು ಕಡೆ ಆಧಾರ್ ಮತ್ತು ಜನಧನ ಖಾತೆ ತೆರೆಯದವರು ಈಗ ಕಣ್ಣೀರು ಹಾಕುವ ಪರಿಸ್ಥಿತಿ ಇದೆ. ಅಂಥವರಿಗೂ ಮತ್ತೊಂದು ಅವಕಾಶ ನೀಡಿ ಆರ್ಥಿಕ ನೆರವು ನೀಡುವುದು ಅಗತ್ಯವಾಗಿದೆ. ನಿಮ್ಮ ನಿರ್ಧಾರಗಳಿಗೆ ನಾವು ತಲೆಬಾಗಲಿದ್ದೇವೆ.

ಜಿಲ್ಲೆಯ ಜನತೆಗೆ ಜಿ.ಎಸ್.ಬಸವರಾಜ್ ಮನವಿ.

 ಮಾನ್ಯ ಪ್ರಧಾನ ಮಂತ್ರಿಯವರ ಮತ್ತು ಮುಖ್ಯಮಂತ್ರಿಯವರ ಮನವಿಗೆ ಸ್ಪಂಧಿಸಿ ತಾವು ಮನೆಗಳಲ್ಲಿರುವುದಕ್ಕೆ ಜಿಲ್ಲೆಯ ಜನತೆಗೆ ಅಭಿನಂದನೆಗಳು. ಯಾರೊಬ್ಬರಿಗೆ ಯಾವುದೇ ತೊಂದರೆ ಆದರೂ ನಾವು ಸದಾ ನಿಮ್ಮೊಂದಿಗಿದ್ದೇವೆ. ಯಾವುದಕ್ಕೂ ಯಾರು ಗಾಬರಿ ಪಡುವುದು ಬೇಡ ಎಂದು ಜಿಲ್ಲೆಯ ಜನತೆಗೆ ಬಸವರಾಜ್ ಮನವಿ ಮಾಡಿದ್ದಾರೆ.