22nd December 2024
Share

TUMAKURU:SHAKTHIPEETA FOUNDATION

  ತುಮಕೂರಿನಲ್ಲಿ ಸ್ವಯಂ ಡಿಜಿಟಲ್ ಸೇವೆ ಮಾಡಲು ಆಸಕ್ತಿ ಇರುವವರು ಸೇರಿಕೊಂಡು C0VID-19 VOLUTEERS TUMAKURU ಎಂಬ ವಾಟ್ಸ್‌ಪ್ ಗ್ರೂಪ್ ರಚಿಸಿಕೊಂಡಿದ್ದಾರೆ. ಅವರ್‍ಯಾರು ಗುಂಪು, ಗುಂಪಾಗಿ ಬಂದು ಬೀದಿಯಲ್ಲಿ ಸಭೆ ಮಾಡುವುದಿಲ್ಲಾ. ಬಯಾಲಿಜಿಕಲ್‌ವಾರ್‌ಗೆ ಸಿದ್ಧವಾಗಿರುವ ಕೊರೊನಾ ವೈರಸ್ ವಿರದ್ಧ ಡಿಜಿಟಲ್‌ವಾರ್ ಮಾಡಲು ಚಿಂತನೆ ನಡೆಸಿದ್ದಾರೆ.

  • ಇವರ ಮೂಲ ಉದ್ದೇಶ ತುಮಕೂರು ನಗರದಲ್ಲಿ ಕೊರೊನಾ ವೈರಸ್ ದಿಗ್ಭಂದನದ ಹೆಸರಿನಲ್ಲಿ ಯಾರೊಬ್ಬರೂ ಹಸಿವಿನಿಂದ ನರಳಬಾರದು. ತುಮಕೂರಿನ ರಸ್ತೆ, ರಸ್ತೆಯ ಸ್ನೇಹಿತರುಗಳಿಗೆ ಫೋನ್ ಮಾಡಿ ಯಾರಿಗೆ ಊಟ ತಿಂಡಿಯ ಅಗತ್ಯವಿದೆ ಎಂಬ ಮಾಹಿತಿ ಕಲೆಹಾಕುತ್ತಿದ್ದಾರೆ.
  • ಯಾರಿಗಾದರೂ ಬೀದಿಯಲ್ಲಿರುವವರಿಗೆ ಶೆಲ್ಟರ್‌ನ ಅಗತ್ಯವಿದೆಯೇ ಎಂದು ಮಾಹಿತಿ ಕಲೆಹಾಕುತ್ತಿದ್ದಾರೆ.
  • ಮಹಿಳೆಯರು ಅಂಗಡಿಗಳಿಗೆ ಹೋಗುವುದನ್ನು ತಪ್ಪಿಸುವ ಸಲುವಾಗಿ ತರಕಾರಿ, ಹಣ್ಣು, ದಿನಸಿ ಪದಾರ್ಥಗಳನ್ನು ಅವರವರ ಮನೆ ಬಾಗಿಲಿಗೆ ತಲುಪುವ ವ್ಯವಸ್ಥೆಯ ಬಗ್ಗೆ ರಸ್ತೆವಾರು ಮಾಹಿತಿ ಕಲೆಹಾಕುತ್ತಿದ್ದಾರೆ.
  • ಮಾಸ್ಕ್‌ಗಳನ್ನು ಅಗತ್ಯವಿರುವವ ಕಡೆ ಹಂಚಲು ಮಾಹಿತಿ ಕಲೆಹಾಕುತ್ತಿದ್ದಾರೆ.
  • ಯಾರಿಗೆ ಎನೇ ಅವಶ್ಯ ಕತೆಯಿದ್ದರೂ ಈ ಗ್ರೂಪ್ ಗಮನಕ್ಕೆ ತಂದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ.
  • ಈ ಗ್ರೂಪ್‌ನಲ್ಲಿ ಒಂದು ಶಿಸ್ತು ತರಲು ಸಹ ಕಟ್ಟು ನಿಟ್ಟಿನ ನಿರ್ಧೇಶನ ನಿಡುತ್ತಿದ್ದಾರೆ.
  • ಗ್ರೂಪ್‌ನ ಉದ್ದೇಶ ಬಿಟ್ಟು ಯಾವುದೇ ಅನಗತ್ಯ ಚರ್ಚೆ ಇಲ್ಲಿಬೇಡ ಎಂಬ ಸ್ವಯಂ ನಿಲುವು ಹೊಂದಿರುವವರು ಮಾತ್ರ ಈ ಗ್ರೂಪ್‌ನಲ್ಲಿರಿ, ಇಲ್ಲವಾದರೆ ಲೆಪ್ಟ್ ಆಗಿರಿ ಎಂಬ ಸಂದೇಶ ಎಲ್ಲರಿಗೂ ಖಡಕ್ ಆಗಿ ಹೋಗಿದೆ.

   ಇವರ ಸೇವೆ ಮತ್ತು ಸಲಹೆಗಳನ್ನು ಪರಿಗಣಿಸಿ, ಚುನಾಯಿತ ಜನಪ್ರನಿಧಿಗಳು ಮತ್ತು ಜಿಲ್ಲಾಡಳಿತ ಸ್ಪಂಧಿಸುವ ಕೆಲಸ ಮಾಡಲು ಸಜ್ಜಾಗುತ್ತಿವೆ. ದಯವಿಟ್ಟು ಈ ತರಹದ ಸೇವೇಯೇ ದೇವರ ಸೇವೆ, ಮುನ್ನುಗ್ಗಿ ಯಾವುದೇ ಕಾರಣಕ್ಕೂ ಗುಂಪಾಗಿ ಬೀದಿಗೆ ಬರುವುದು ಬೇಡ, ಫೊನ್ ಮುಖಾಂತರವೇ ಪರಿಹಾರ ಬಗೆ ಹರಿಸಲು ಪ್ರಯತ್ನಿಸುವುದು ಸೂಕ್ತ.

  ಈ ಗ್ರೂಪ್‌ನಲ್ಲಿ ನಗರದ ಎಲ್ಲಾ ಬಡಾವಾಣೆಯ ಎಲ್ಲಾ ಮುಖ್ಯ ರಸ್ತೆ. ಅಡ್ಡರಸ್ತೆ, ಲಿಂಕ್ ರಸ್ತೆಗಳ ಸದಸ್ಯರು ಇರುವಂತಾಗಲಿ ಇಡೀ ನಗರದ ತಾಜಾ ಮಾಹಿತಿ ಈ ಗ್ರೂಪ್‌ನಲ್ಲಿ ದೊರೆಯುವ ಕೆಲಸ ಆಗಲಿದೆ.