3rd March 2024
Share

TUMAKURU:SHAKTHIPEETA FOUNDATION

   ತುಮಕೂರಿನ ತೋಟಗಾರಿಕಾ ಇಲಾಖೆಯ ಅಧಿಕಾರಿ ಮತ್ತು ನನ್ನ ಸ್ನೇಹಿತರಾದ ಶ್ರೀ ರಘುರವರು ಈ ಪೋಟೋ ಕಳುಹಿಸಿ ನಾವು ಮಾಡುತ್ತಿದ್ದೇವೆ ಸಾರ್ ಎಂದಿದ್ದಾರೆ. ನಾನು ಅವರ ಆರಂಭಿಕ ಸೇವೆಗೆ ಶ್ಲಾಘಿಸುತ್ತೇನೆ. ವಾಟ್ಸ್‌ಅಫ್‌ನಲ್ಲಿ, ಪತ್ರಿಕೆಯಲ್ಲಿ ನಾನೂ ನೋಡಿದ್ದೇನೆ ಸಾರ್, ಆದರೇ ನಾನು ಕೊಂಡುಕೊಳ್ಳಲು ಆಗಿಲ್ಲ.

  ನೋಡಿ ಮೋದಿಜಿ ಮನೆಯಲ್ಲಿರಿ, ನಾನು ನಿಮಗೆ ತೊಂದರೆ ಆಗಿದ್ದಕ್ಕೆ ಕ್ಷಮೆ ಕೋರುತ್ತೇನೆ ಎಂದು ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ. ನಾನೂ ಅವರ ಮನವಿ ಆದೇಶ ಎಂದು ಮನೆಯಲ್ಲಿದ್ದೇನೆ. ಆದರೂ ಬೆಳಿಗ್ಗೆ ಕಸ ಸಂಗ್ರಹ ಮಾಡುವವರು ಮನೆ ಬಾಗಿಲಿಗೆ ಸ್ವಚ್ಚತೆ ಕಾಪಾಡಿ’ ಎಂದು ಮೈಕ್‌ನಲ್ಲಿ ಪ್ರಚಾರ ಮಾಡಿ, ಕಸವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಆ ಪುಣ್ಯಾತ್ಮರು’

  ಅದೇ ರೀತಿ ನೀವೂ ಸಹ   ತುಮಕೂರಿನ 35 ವಾರ್ಡ್‌ಗೂ ಒಂದೊಂದು ವಾಹನ ಮಾಡಿ, ಒಂದೊಂದು ಮೈಕ್ ಹಾಕಿ ನಿಮ್ಮ ತೋಟಗಾರಿಕಾ ಇಲಾಖೆ- ನಿಮ್ಮ ಮನೆ ಬಾಗಿಲಿಗೆ, ನಿಮ್ಮ ಆರೋಗ್ಯ ಕಾಪಾಡಲು ನೀವೂ ಮನೆಯಲ್ಲಿರಿ- ನಿಮ್ಮ ಆರೋಗ್ಯಕ್ಕಾಗಿ ನಾವು ನಿಮ್ಮ ಮನೆ ಬಾಗಿಲಿಗೆ ಸರಬರಾಜು ಮಾಡುತ್ತೇವೆ’ ಎಂಬ ವಾಯ್ಸ್ ಕೇಳಬೇಕು ಎನ್ನುವುದು ನನ್ನ ಆಸೆ ಸಾರ್.

  ನಾನು ತರಕಾರಿ, ಹಣ್ಣು  ಇಲ್ಲದೆಯು ಜೀವನ ನಡೆಸುತ್ತೇನೆ ಸಾರ್, ಸಾವಿರಾರು ಹೆಣ್ಣು ಮಕ್ಕಳು ನಿಮ್ಮ ಸೇವೇಗಾಗಿ ಕಾಯುತ್ತಿದ್ದಾರೆ. ಅವರೆಲ್ಲಾ ಮನೆಯಲ್ಲಿದ್ದಾರೆ, ನೀವು ಎಲ್ಲೋ ಬಂದು ಮಾರಾಟ ಮಾಡಿದ್ದೇವೆ ಎಂದು ಪೋಟೂ ಕಳುಹಿಸಿದರೆ ಸಾಕಾ ಸಾರ್. ಅವರು ಯಾವ ಸಮಯದಲ್ಲಿ ಎಲ್ಲಿಗೆ ಬರಬೇಕು ನೀವೇ ಯೋಚಿಸಿ. ಕಸದ ವಾಹನವೇ ನಿಮಗೆ ಮಾದರಿ ಆಗಲಿ ಸ್ವಾಮಿ. ಏನಾದರೂ ತೊಂದರೆ ಇದೆಯಾ ಸಾರ್?

  ತಕ್ಷಣ ಈ ರೀತಿ ಮಾಡಿ ರಾಜ್ಯಕ್ಕೆ ಮಾದರಿ ಆಗಿ ಸಾರ್ , ಇದನ್ನು ನೀವೂ ನಿತಂರವಾಗಿಯೂ ಮುಂದುವರೆಸಬಹುದು.ಇದು ಒಂದು ಥರ ಚುನಾವಣೆಗಳಲ್ಲಿ ಎಣ್ಣೆ ಕಂಪನಿಯವರು ಉಚಿತವಾಗಿ ನೀಡಿ, ಅವರ ಬ್ರ್ಯಾಂಡ್ ಮಾಡಿಕೊಳ್ಳುವ ಹಾಗೆ(ಅನ್ಯಥಾ) ಭಾವಿಸಬಾರದು. ನಿಮ್ಮ ಹಾಫ್‌ಕಾಮ್ಸ್ ಬ್ರ್ಯಾಂಡ್ ಮಾಡಿಕೊಳ್ಳಲು ನಿಮಗೆ ಒಂದು ಸುವರ್ಣಾವಕಾಶ ಎಂದು ಕೊಳ್ಳಿ ಸ್ವಾಮಿ.

   ನಾನು ರಾಜ್ಯದಲ್ಲಿಯೇ ಆರಂಭಿಸಲಿ ಎಂದು ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರೂ, ಜಿಲ್ಲಾಧಿಕಾರಿಗಳಿಗೆ ಪ್ರಶ್ನೆಸಿದ್ದೇನೆ. ರಾಜಾಹುಲಿ ಕಚೇರಿಗೂ ಕಳುಹಿಸಿದ್ದೇನೆ ನೋಡೋಣಾ ಸಾರ್.

About The Author