22nd December 2024
Share

WHITE SHIRT DC. BLUE PANT, T SHIRT MLA

TUMAKURU:SHAKTHIPEETA FOUNDATION

ಕೇರಳದ ಒಬ್ಬ ಜಿಲ್ಲಾಧಿಕಾರಿ ಮತ್ತು ಒಬ್ಬ ಶಾಸಕ ಇಬ್ಬರೂ ಮೂಟೆ ಹೊತ್ತು ಹೊಳೆ ಆಚೆ ಇರುವವರಿಗೆ ನೀಡುತ್ತಿದ್ದಾರೆ ಎಂದು ಒಬ್ಬ ಸ್ನೇಹಿತರು ಕಳುಹಿಸಿದ್ದಾರೆ. ಇವರು ಯಾವ ಜಿಲ್ಲೆಯವರು ಎಂದು ನನಗೆ ಗೊತ್ತಿಲ್ಲ. ಇದು ಅಸಲಿಯೋ, ನಕಲಿಯೋ ಗೊತ್ತಿಲ್ಲ ವಾಟ್ಸ್‌ಅಫ್‌ನಲ್ಲಿ ಬಂದ ಎಲ್ಲವೂ ಸರಿಯಲ್ಲ.

 ಇಲ್ಲಿ ನಿವ್ಯಾರು ರೀತಿ ಮೂಟೆ ಹೊರಬೇಡಿ, ಸರ್ಕಾರಿ ವ್ಯವಸ್ಥೆ ಮಾಡಿಸಿ, ಈಗಂತೂ ಮನೆ ಬಾಗಿಲಿಗೆ ಅಗತ್ಯವಸ್ತು ಸರಬರಾಜು ಮಾಡುವುವರು ಜನರ ದೃಷ್ಟಿಯಲ್ಲಿ ಹೀರೋಗಳಾಗುತ್ತಾರೆ. ಎಲ್ಲೋ ಒಂದು ಕಡೆ ಕೊಟ್ಟು ಫೋಟೋ ಪ್ರಚಾರ ಮಾಡುವವರು ಖಳನಾಯಕರಾಗುತ್ತಾರೆ.

  • ರೈಲು ಭೋಗಿಗಳನ್ನು ತಾತ್ಕಾಲಿಕವಾಗಿ ಕೋವಿಡ್-19 ಐಸೋಲೇಷನ್ ವಾರ್ಡ್ ಮಾಡುವ ಪ್ರಧಾನ ಮಂತ್ರಿ ನೋಡುತ್ತಿದ್ದೇವೆ.
  • ತಾತ್ಕಾಲಿಕವಾಗಿ ಕೆ.ಎಸ್.ಆರ್.ಟಿ.ಸಿ ಬಸ್‌ಗಳನ್ನು ದಿನಸಿ ಮೊಬೈಲ್ ಅಂಗಡಿ ಮಾಡಿಸಿ, ವಾರ್ಡ್ ಗೊಂದು ಬಸ್ ಸಾಕು, ಮನೆ ಮನೆ ಬಾಗಿಲಿಗೆ ಅಗತ್ಯವಸ್ತು ಸರಬರಾಜು ಮಾಡುವ ಡಿಸಿಯನ್ನು ನೋಡಲಿಲ್ಲಾ, ಚುನಾಯಿತ ಜನಪ್ರತಿನಿಧಿಯನ್ನು ನೋಡಲಿಲ್ಲಾ.
  • ನಮಗೆ ತಾಜಾ ಉದಾಃ ಘನತ್ಯಾಜ್ಯ ವಸ್ತು ಸರಬರಾಜು ಮಾಡುವ ವಾಹನಗಳು, ಇಲ್ಲಿ ಮನೆಯಿಂದ ಕಸ ಸಂಗ್ರಹಮಾಡುತ್ತೇವೆ. ಬಸ್‌ನಲ್ಲಿ ಮನೆ ಮನೆಗೆ ಅಗತ್ಯ ವಸ್ತು ಮಾರಾಟ ಮಾಡುವುದು/ವಿತರಿಸುವುದು ಅಷ್ಟೆ. ಉಚಿತವಾಗಿ ಅಲ್ಲ ಜನರೇ ಹಣ ಕೊಟ್ಟು ಕೊಂಡುಕೊಳ್ಳುತ್ತಾರೆ.
  • ಸರ್ಕಾರಕ್ಕೆ ಯಾವುದೇ ಒಂದು ರೂ ನಷ್ಟ ಇಲ್ಲ, ಯಾವುದೋ ಅಂಗಡಿಯವರು ಸರಬರಾಜು ಮಾಡುತ್ತಾರೆ. ಬೇಕಾದಲ್ಲಿ ಬಸ್ ಬಾಡಿಗೆಯನ್ನು ಅಂಗಡಿಯವರಿಂದಲೇ ಪಡೆಯಬಹುದು.
  • ಬಸ್‌ನಲ್ಲಿ ಮೈಕ್, ಒಬ್ಬರು ಪೋಲೀಸ್ ಇರುವುದು ಸೂಕ್ತ. ಅವರ ಮೊಬೈಲ್ ನಂಬರ್ ಸಹಯವಾಣಿಯಂತಿರ ಬೇಕು.
  • ಇದು ಸರ್ಕಾರದ ವ್ಯವಸ್ಥೆ ಆದಲ್ಲಿ ಜನರಿಗೆ ಒಂದು ನಂಬಿಕೆ.
  • ನಮ್ಮ ಜಿಲ್ಲಾಡಳಿತ ಇಂಥ ಜನಪರ ಕೆಲಸ ಮಾಡಿದೆ ಎಂಬ ನಮ್ರತಾ ಭಾವನೆ ಬರಲಿದೆ.
  • ಚುನಾವಣೆ ಸಮಯದಲ್ಲಿ ಮನೆ ಮನೆಗೆ ರಾಜಕಾರಣಿಗಳು ಉಚಿತ ನೀರು ನೀಡುವ ಹಾಗೆ ಎಂದು ಕೊಳ್ಳಿ.
  • ಗ್ರಾಮೀಣ ಪ್ರದೇಶದಲ್ಲಿನ ರೈತರು ಬೆಳೆದಿರುವ ತರಕಾರಿ ಬೆಳೆ, ಹೂ, ಹಣ್ಣು ನೇರವಾಗಿ ತಂದು ಈ ಬಸ್ ಹಿಂಭಾಗದಲ್ಲಿ ಇನ್ನೊಂದು ವಾಹನ ಅಥವಾ ಈ ಬಸ್‌ನಲ್ಲಿಯೇ ಮಾರಾಟಕ್ಕೆ ವ್ಯವಸ್ಥೆ.
  • ಟಿವಿಯಲ್ಲಿ ನೋಡುತ್ತೇವೆ, ತಿಪ್ಪೆಗೆ ಸಪೋಟಾ ಸುರಿಯಯವರು ಇದ್ದಾರೆ, ನೇರವಾಗಿ ರೈತರೇ ಗ್ರಾಮಗಳಿಗೆ ತೆರಳಿ ಉಚಿತವಾಗಿ ಹಂಚುವವರು ಇದ್ದಾರೆ.
  • ಇಂಥಹ ಸಮಯದಲ್ಲಿ ಸರ್ಕಾರದ ಪಾತ್ರ ಏನು?
  • ಹಾಫ್ ಕಾಮ್ಸ್, ಹಾಲು ಒಕ್ಕೂಟಗಳು ಮತ್ತು ಡಿ.ಸಿ.ಸಿ ಬ್ಯಾಂಕ್‌ಗಳು ಮಾಡಬಹುದಲ್ಲವೇ?
  • ಮಾಡುತ್ತೇವೆ ಎಂದು ಫೋಟೋ ನಾಟಕ ಬೇಡ, ನಿರಂತರವಾದ ವ್ಯವಸ್ಥೆಯಾಗಬೇಕು