22nd December 2024
Share

TUMAKURU:SHAKTHIPEETA FOUNDATIN

 ಕೊರೊನಾ ಮಹಾಮಾರಿಯ ದಿಗ್ಭಂದನದ ಹಿನ್ನೆಲೆಯಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂದು ದೇಶದ ಪ್ರಧಾನಿಗಳು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಖಡಕ್ ಆಗಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ವಲಸಿಗರು ಮತ್ತು ನಿರಾಶ್ರಿತರಿಗೆ ಛತ್ರಗಳನ್ನು ಮಾಡಿ ಅಲ್ಲಿ ಅವರಿಗೆ ಆಶ್ರಯ ನೀಡುವುದು ಜೊತೆಗೆ ಅನ್ನ ಹಾಕಲು ಯೋಜನೆ ಘೋಷಿಶಿದ್ದಾರೆ. ಇದೊಂದು ಒಳ್ಳೆಯ ನಿರ್ಧಾರ, ಎಲ್ಲರೂ ಸ್ವಾಗತಿಸಲೇ ಬೇಕು.

ವಲಸಿಗರು ಎಂದರೆ ಯಾರು? ಅವರು ಎಲ್ಲಿಂದ ಯಾವ ಉದ್ದೇಶಕ್ಕೆ ಬಂದಿದ್ದಾರೆ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಜನರು ವಲಸಿಗರು ಇದ್ದಾರೆ, ಅವರು ಯಾರ್‍ಯಾರು, ಅವರಿಗೆ ಎಲ್ಲಿ ಉಳಿದು ಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅವರಿಗೆ ಯಾರ್‍ಯಾರು ಅನ್ನ ಹಾಕಿದ್ದಾರೆ ಎಂಬ ಪ್ರತಿದಿನದ ಮಾಹಿತಿಯನ್ನು ಜನತೆಗೆ ತಿಳಿಸುವುದು ಸೂಕ್ತ.  

ನಿರಾಶ್ರಿತರು ಎಂದರೆ ಯಾರು? ಅವರಿಗೆ ಸ್ವಂತ ಮನೆಯಿಲ್ಲದವರು, ರಸ್ತೆ ಬೀದಿಯಲ್ಲಿ ವಾಸಿಸುವರು,  ಇಂದಿರಾ ಕ್ಯಾಂಟೀನ್‌ಗಳಲ್ಲಿ ಪ್ರತಿದಿನ ಯಾವ ವರ್ಗದವರು, ಎಷ್ಟು ಜನ ಊಟ ತಿಂಡಿ ಮಾಡುತ್ತಿದ್ದಾರೆ, ಎಂಬ ಪ್ರತಿದಿನದ ಮಾಹಿತಿಯನ್ನು ಜನತೆಗೆ ತಿಳಿಸುವುದು ಸೂಕ್ತ.  

ಸರ್ಕಾರದ ಸೌಲಭ್ಯವಂಚಿತರು ಯಾರು? ಅಂದರೆ ಕೊರೊನಾ ಪ್ಯಾಕೇಜ್ ಪಡೆಯಲು ನೇರ ನಗದು ಪಾವತಿ ಆಗಿರುವುದರಿಂದ ಆಧಾರ್ ಕಾರ್ಡ್, ಜನಧನ ಬ್ಯಾಂಕ್ ಖಾತೆ, ಸಾಮಾಜಿಕ ಭಧ್ರತೆ, ಕಿಸಾನ್ ಸಮ್ಮಾನ್  ಮತ್ತು ರೇಷನ್ ಕಾರ್ಡ್ ಹೀಗೆ ಇತರ ಯೋಜನೆಗಳ ಸೌಲಭ್ಯವಂಚಿತರು ಯಾರಾದರೂ ಇದ್ದಾರೆಯೇ? ಇದ್ದಲ್ಲಿ ಅವರಿಗೆ ಶಾಶ್ವತ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳೇನು? ಎಂಬ ಪ್ರತಿದಿನದ ಮಾಹಿತಿಯನ್ನು ಜನತೆಗೆ ತಿಳಿಸುವುದು ಸೂಕ್ತ.  

ಈ ಒಂದು ಕೊರೊನಾ ಜನಾಂದೋಲನದಲ್ಲಿ ಶೇಕಡ 100  ರಷ್ಟು ಜನ ಫಲಾನುಭವಿಗಳಾಗಲು ಬ್ಯಾಂಕ್ ಖಾತೆ, ಆಧಾರ್ ಹೀಗೆ ಎಲ್ಲವನ್ನು ಮಾಡಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಅವರಿಗೆ ಸಹಾಯ ಮಾಡಲು ಬಹುದು. ಗುರಿಯನ್ನು ಸಾಧಿಸಬಹುದು.  

ಉಜ್ವಲ ಗ್ಯಾಸ್ ಪಲಾನುಭವಿಗಳಿಗೆ ಮಾತ್ರ ಮೂರು ತಿಂಗಳು ಉಚಿತ ಗ್ಯಾಸ್ ಎಂದಿದ್ದಾರೆ, ಕೆಲವರು ಬಿಪಿಎಲ್ ಕಾರ್ಡ್ ಇದ್ದರೂ ಈ ಯೋಜನೆಯ ಫಲಾನುಭವಿಗಳಾಗಿಲ್ಲ ಅಂಥವರು ನಮಗೆ ಎಕೆ ಉಚಿತ ಗ್ಯಾಸ್ ಇಲ್ಲ ಎಂಬ ಧ್ವನಿಯೆತ್ತಿದ್ದಾರೆ. ಅಂಥಹವರು ಎಷ್ಟು ಜನ ಇದ್ದಾರೆ? ಅವರಿಗೇನು ಮಾಡಬಹುದು.

ಅನಿವಾರ್‍ಯವಾಗಿ ಬಂದಿರುವವರು ತಮ್ಮ ಸ್ವಂತ ಗ್ರಾಮಕ್ಕೆ ತೆರಳಲೇ ಬೇಕು ಎನ್ನುವವರು ಎಷ್ಟು ಜನರಿದ್ದಾರೆ. ಅವರಿಗೆ ಯಾವ ವ್ಯವಸ್ಥೆ ಮಾಡಬೇಕು. ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ನೀಡಿದಲ್ಲಿ ಸರ್ಕಾರ ಜನತೆಯ ಭಾವನೆಗೆ ತಕ್ಕಂತ ಪರಿಹಾರ ನೀಡಲು ಯೋಚಿಸಲಿದೆ.

   ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರತಿ ದಿವಸ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಸದಸ್ಯರು ಬುಲೆಟಿನ್ ಪ್ರಕಟಿಸುವುದು  ಸೂಕ್ತ.  ಇದರಿಂದ ಜನತೆಗೂ ಸತ್ಯಾಂಶ ತಿಳಿಯಲಿದೆ. ಜೊತೆಗೆ ಅವರೆಲ್ಲರಿಗೂ ಕ್ಷೇತ್ರದ ಪೂರ್ಣ ಮಾಹಿತಿಯೂ ದೊರೆಯಲಿದೆ. ಶೇಕಡ 100 ರಷ್ಟು ಪಲಾನುಭವಿಗಳಾಗಿ ಮಾಡಿದ ಕೀರ್ತಿಯೂ ಬರಲಿದೆ, ಇದೂ ಅಗತ್ಯವಾಗಿದೆ.