27th December 2024
Share

TUMAKURU:SHAKTHIPEETA FOUNDATION

 ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಯಾದ ಅಟಲ್ ಭೂಜಲ್ ಯೋಜನೆಗೆ ‘ಬೋಗಸ್ ಡೇಟಾ’ ಗಳನ್ನು ಹಾಕಿ ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ಮತ್ತು ಶ್ರೀ ಜಿ.ಎಸ್.ಬಸವರಾಜ್ ರವರಿಗೆ ‘ಚಳ್ಳೆಹಣ್ಣು ತಿನ್ನಿಸಲು ‘ ತುಮಕೂರಿನ ಅಧಿಕಾರಿಗಳ ತಂಡ ಸಿದ್ಧವಾಗಿದೆ ಎಂದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

 ದಿನಾಂಕ:26.06.2020 ರಂದು ಸಂಜೆ ತುಮಕೂರಿನ ಜಿಲ್ಲಾ ಪಂಚಾಯತ್‌ಗೆ ಭೇಟಿ ನೀಡಿ ಅಧಿಕಾರಿಗಳ ಬಳಿ ಮಾಹಿತಿ ಕೇಳಿದಾಗ ಅವರು ತೋರಿಸಿದ ಪಿಪಿಟಿ ನೋಡಿ ನನಗೆ ಆಶ್ಚರ್ಯವಾಯಿತು. ನನ್ನ ಯಾವುದೇ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ದೊರೆಯಲಿಲ್ಲ.

  ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಶ್ರೀ ಮೃತ್ಯುಂಜಯಸ್ವಾಮಿರವರು ಎರಡು ಮೂರು ಭಾರಿ ರಾಜ್ಯ ಮಟ್ಟದ ಅಧಿಕಾರಿಗಳ ಸಭೆ ನಡೆಸುವಾಗ ನಾನು ಸಹ ಸಭೆಯಲ್ಲಿ ಭಾಗವಹಿಸಿದ್ದೆ. ಸಭೆಯಲ್ಲಿ ಬಹಳ ಉತ್ತಮವಾದ ಸಲಹೆಗಳ ಸುರಿಮಳೆ ಇದ್ದವು. ತುಮಕೂರಿನ ಅಧಿಕಾರಿಗಳು ಸಭೆ ನಡೆಸುವಾಗ ಸಭೆಗಳಿಗೆ ಆಹ್ವಾನ ಬರದೇ ಹೋಗಬಾರದು ಎಂದು ಸಭೆಗಳಿಗೆ ಭಾಗವಹಿಸಿರಲಿಲ್ಲ. ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದಾಗ ಸಭೆಯಲ್ಲಿ ಇಂದ್ರ-ಚಂದ್ರ ಎಲ್ಲಾ ಮಾಡುವುದಾಗಿ ಭಾಷಣಗಳ ಸುರಿಮಳೆಗೆ ಕೊರತೆಯಿರಲಿಲ್ಲ.

  ಇದೇ ಮಾದರಿಯ ರಾಜ್ಯ ಸರ್ಕಾರದ ಜಲಾಮೃತ ಯೋಜನೆಯ ಸಭೆಗೆ ಜಿಲ್ಲಾಪಂಚಾಯತ್ ಸಿಇಓ ರವರ ಆಹ್ವಾನದ ಮೇರೆಗೆ ಭಾಗವಹಿಸಿದ್ದೆ, ಸುಮಾರು ಗ್ರಾಮಪಂಚಾಯಿತಿ ಪಿಡಿಓಗಳ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿಯೂ ಅತ್ಯುತ್ತಮವಾದ ಸಲಹೆಗಳ ವ್ಯಕ್ತವಾಗಿದ್ದವು. ಯೋಜನೆಯ ನಿರ್ದೇಶಕರಾದ ಶ್ರೀ ನಿಜಲಿಂಗಪ್ಪನವರ ಭಾಷಣ ನಿಜಕ್ಕೂ ನನಗೆ ತೃಪ್ತಿ ತಂದಿತ್ತು.

  ಇವೆಲ್ಲಕ್ಕಿಂತಲೂ ಮೊದಲು ತುಮಕೂರು ಜಿಲ್ಲೆಯ ದಿಶಾ ಸಮಿತಿ ಸಭೆಯಲ್ಲಿ ನಿರ್ಣಯ ಮಾಡಿ ಜಲಗ್ರಾಮ ಕ್ಯಾಲೆಂಡರ್ ಮಾಡುವ ಮೂಲಕ ವಾಟರ್ ಆಡಿಟ್, ವಾಟರ್ ಬಜೆಟ್ ಮತ್ತು ವಾಟರ್ ಆಡಿಟ್ ಮಾಡಿಸಲು ಮಹತ್ವದ ನಿರ್ಣಯ ಮಾಡಲಾಗಿತ್ತು.

  ತುಮಕೂರು ಜಿಲ್ಲೆಯ ಜಲಮೂಲಗಳ ಪತ್ತೆಗಾಗಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಗಳು ತುಮಕೂರಿನ ಸೆಕ್ಟ್ರಾ ಅಸೋಯೇಷನ್‌ಗೆ ಟೆಂಡರ್ ಮಾಡುವ ಮೂಲಕ ಜವಾಬ್ಧಾರಿ ನೀಡಿದ್ದರೂ ಸಹ ಅಧಿಕಾರಿಗಳು ಇದ್ಯಾವುದನ್ನು ಗಮನಿಸದೆ ಯಾವುದೋ ಬೋಗಸ್ ಡೇಟಾ ಹಾಕಿ ಕೇಂದ್ರ ಸರ್ಕಾರದ ವಿಡಿಯೋ ಕಾನ್ಪೆರೆನ್ಸ್ ಗೆ ಸಿದ್ಧತೆ ಮಾಡಿಕೊಂಡಿರುವ ಅಂಶ ಪತ್ತೆಯಾಗಿದೆ.

 ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೂ ಇದೇ ರೀತಿ ಬೋಗಸ್ ಡೇಟಾ ಹಾಕಿ 2016 ರಲ್ಲಿ ಡಿಸ್ಟ್ರಿಕ್ಟ್ ಇರ್ರಿಗೇಷನ್ ಪ್ಲಾನ್ ಮಾಡಿ ಅಫ್ ಲೋಡ್ ಮಾಡಲಾಗಿದೆ. ಈಗಲೂ ಸಹ ಅದೇ ಚಾಳಿ ಮುಂದುವರೆಯುವ ಲಕ್ಷಣಗಳು ಗೋಚರಿಸಿವೆ.

   ಮಾನ್ಯ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನವದೆಹಲಿ ಆದೇಶದ ಅನ್ವಯ ಪ್ರಧಾನ ಪೀಠಕ್ಕೆ ಜಲಮೂಲಗಳ ಮಾಹಿತಿಯನ್ನು ನೀಡಲು ದಿನಾಂಕ:12.06.2020 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಲ್.ಕೆ.ಅತೀಕ್ ರವರು ಜಿಲ್ಲೆಯ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಜೂನ್ 15-20, 2020  ರೊಳಗೆ ಜಲಮೂಲಗಳ ಸಪ್ತಾಹ’ ಅಭಿಯಾನ ರೂಪದಲ್ಲಿ ಆಯೋಜಿಸಿ ಎಲ್ಲಾ ಮಾಹಿತಿಯನ್ನು ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್‌ಗೆ ಅಫ್ ಲೋಡ್ ಮಾಡಲು ಸೂಚಿಸಿದ್ದಾರೆ.

  ಅಟಲ್ ಭೂಜಲ್, ಜಲಾಮೃತ, ಅಂತರ್ಜಲ ಚೇತನ, ಜಲಶಕ್ತಿ ಅಭಿಯಾನ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಜಲಾನಯನ, ಜಲಗ್ರಾಮ ಕ್ಯಾಲೆಂಡರ್ ಯೋಜನೆ ಹೀಗೆ ಇಂಥಹ ನೂರಾರು ಯೋಜನೆಗಳನ್ನು ಜಾರಿಗೆ ತಂದರೂ ಅವುಗಳ ನಿರ್ಧಿಷ್ಟ ಗುರಿ ಶೂನ್ಯವಾಗಿದೆ.

 ತುಮಕೂರು ಜಿಐಎಸ್ ಮಾಡಿ ಮೊಟ್ಟ ಮೊದಲನೆಯದಾಗಿ ಜಲಮೂಲಗಳ ಜಿಐಎಸ್ ಆಧಾರಿತ ಲೇಯರ್‌ಗಳನ್ನು ಅಫ್ ಲೋಡ್ ಮಾಡಲು ಜಿಲ್ಲಾಧಿಕಾರಿಗಳು ಮತ್ತು ಸಿಇಓ ರವರು ನೀಡಿದ ಸಲಹೆಗಳ ದಿಶಾ ಸಮಿತಿಯ ನಿರ್ಣಯಕ್ಕೂ ತಿಲಾಂಜಲಿ ಇಡಲಾಗಿದೆ.

  ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಸಭೆಯಲ್ಲಿ ಶ್ರೀ ಜಿ.ಎಸ್.ಬಸವರಾಜ್ ರವರು ಫೋರಂ ಮತ್ತು ತುಮಕೂರಿನ ಸ್ಪೆಕ್ಟ್ರಾ ತಯಾಸಿರಿದ್ಧ ಜಲಗ್ರಾಮ ಕ್ಯಾಲೆಂಡರ್ ಮಾದರಿ ಯೋಜನೆ ಪ್ರದರ್ಶನ ಮಾಡಿ ಮೆಚ್ಚುಗೆ ಪಡೆದಿದ್ದು ಇತಿಹಾಸವಾಗಿ ಉಳಿದಿದೆ.

 ದಿನಾಂಕ:30.06.2020 ರ ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಯಲ್ಲಿ ಸಂಭಂಧಿಸಿದ ಎಲ್ಲಾ 330 ಗ್ರಾಮ ಪಂಚಾಯತ್, 11 ನಗರ ಸ್ಥಳೀಯ ಸಂಸ್ಥೆಗಳ ಮತ್ತು ಯೋಜನೆಗೆ ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ತಾಜಾ ಡೇಟಾ ಅಫ್ ಲೋಡ್ ಮಾಡದೇ ಇರುವುದಕ್ಕೆ ‘ಸನ್ಮಾನ  ಮಾಡಲು ಅಥವಾ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು’ ಸಂಸದರು ಮತ್ತು ಸಚಿವರಲ್ಲಿ ಆಗ್ರಹ ಮಾಡಿದ್ದಾರೆ.