16th September 2024
Share

TUMAKURU DIC JD SRI NAHESH & KUNDARANAHALLI RAMESH

TUMAKURU:SHAKTHIPEETA FOUNDATION

  ಇನ್‌ವೆಸ್ಟ್ ತುಮಕೂರು ಸಮರ್ಪಕ ಜಾರಿಗಾಗಿ ಪ್ರತ್ಯೇಕ ವೆಬ್‌ಸೈಟ್ ಮಾಡಿ ತುಮಕೂರು ಜಿಲ್ಲೆಯ ಎಲ್ಲಾ 330 ಗ್ರಾಮ ಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇಲಾಖಾವಾರು ಯಾವ ಯೋಜನೆಗಳಿಗೆ ಹೂಡಿಕೆ ಮಾಡಬಹುದು ಎಂಬ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಅಫ್ ಲೋಡ್‌ಮಾಡಿ ತುಮಕೂರು ಜಿಐಎಸ್‌ಗೆ ಲಿಂಕ್ ಮಾಡುವುದಾಗಿ ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀ ನಾಗೇಶ್ ಸ್ಪಷ್ಟಪಡಿಸಿದರು.

   ಈ ಸಂಬಂದ ಒಂದು ಆಪ್ ಮಾಡಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮಾಹಿತಿಗಳನ್ನು ಅಫ್ ಲೋಡ್ ಮಾಡಲು, ಆಸಕ್ತ ಹೂಡಿಕೆದಾರರು ಸಹ ಯಾವ ಯೋಜನೆ ಕೈಗೊಳ್ಳಲು ಉತ್ಸುಕರಾಗಿದ್ದಾರೆ ಎಂಬ ಬಗ್ಗೆ ಅಗತ್ಯ ಮಾಹಿತಿ ಜೊತೆಗೆ ನೊಂದಾಯಿಕೊಳ್ಳಲು ಮತ್ತು ಈಗಾಗಲೇ ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿ, ಕೈಗಾರಿಕಾ ವಸಾಹತುಗಳಲ್ಲಿ ಇರುವ ಉದ್ದಿಮೆಗಳ ಮಾಹಿತಿ ಸಂಗ್ರಹಿಸಲು  ಅವಕಾಶ ಕಲ್ಪಿಸುವ ಮೂಲಕ ಡಿಜಿಟಲ್ ಇಂಡಿಯಾಗೆ ಒತ್ತು ನೀಡುವುದಾಗಿ ತಿಳಿಸಿದರು.

   ದಿಶಾ ಸಮಿತಿಯ ನಿರ್ಣಯದ ಮೇರೆಗೆ ತುಮಕೂರು ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳ ಸ್ರ್ತಿ ಶಕ್ತಿ- ಸ್ವಶಕ್ತಿ ಫೆಡ್‌ರೇಷನ್‌ಗಳು ತಯಾರಿಸುವ ಉತ್ಪನ್ನಗಳ ಮಾಹಿತಿಯನ್ನು ಫೆಡ್‌ರೇಷನ್‌ವಾರು ಅಫ್ ಲೋಡ್ ಮಾಡಲು ಮತ್ತು ರೈತರ ಬೆಳೆಗಳ ಮಾಹಿತಿಯನ್ನು ನೀಡುವ ಸಂಬಂದ ಎಲ್ಲಾ ಅಗತ್ಯ ಲೈನ್ ಡಿಪಾರ್ಟ್‌ಗಳೊಂದಿಗೆ ಸಮಾಲೋಚನೆ ಮಾಡಿ ನಂತರ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.

  ಕೇಂದ್ರ ಸರ್ಕಾರದ ಎಂ.ಎಸ್.ಎಂ.ಇ, ರಾಜ್ಯ ಸರ್ಕಾರದ ಎಂ.ಎಸ್.ಎಂ.ಇ ಮತ್ತು ಕೆಸಿಟಿಯುನ ಸಹಕಾರದೊಂದಿಗೆ ಕ್ಲಸ್ಟರ್ ಸ್ಥಾಪಿಸಲು ಸೂಕ್ತ ಪ್ರದೇಶಗಳ ಜಿಐಎಸ್ ಲೇಯರ್ ಮಾಡಿ, ಮೂಲಭೂತ ಸೌಕರ್ಯಗಳ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದರು.

 ನಮ್ಮ ಇಲಾಖೆಯಲ್ಲಿ ಯಾವ, ಯಾವ ಜಿಐಎಸ್ ಲೇಯರ್ ಮಾಡಬಹುದು ಎಂಬ ಬಗ್ಗೆ ಕೈಗಾರಿಕೆಗೆ ಸಂಬಂದಿಸಿದ ಇಲಾಖೆಗಳೊಂದಿಗೆ ಸಮಾಲೋಚನೆ ಮಾಡಿ, ಜಿಲ್ಲಾಧಿಕಾರಿ ಶ್ರೀ ಡಾ.ರಾಕೇಶ್ ಕುಮಾರ್ ರವರು ಮತ್ತು ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶುಭಕಲ್ಯಾಣ್‌ರವರ ಜೊತೆಯು ಚರ್ಚಿಸಿ  ಒಂದೆರಡು ವಾರದಲ್ಲಿ ಖಚಿತಪಡಿಸುವ ಭರವಸೆ ನೀಡಿದರು.

ತುಮಕೂರು ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಚರ್ಚಿಸಿ, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಠಿಸಲು ವ್ಯಾಪಕ ಯೋಜನೆ ರೂಪಿಸಲು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಈಗಾಗಲೇ ಸೂಕ್ತ ಸಲಹೆಗಳನ್ನು ನೀಡಿದ್ದಾರೆ, ಹಾಗೆಯೇ ಜಿಲ್ಲೆಯ ಎಲ್ಲಾ ಶಾಸಕರುಗಳು, ಸಂಸದರು, ಸಚಿವರ ಸಲಹೆಗಳನ್ನು ಪಡೆಯುವುದಾಗಿ  ತಿಳಿಸಿದರು.

  ತುಮಕೂರು ಲೋಕಸಭಾ ಸದಸ್ಯರಾದ  ಶ್ರೀ ಜಿ.ಎಸ್.ಬಸವರಾಜ್ ಅಧ್ಯಕ್ಷತೆಯಲ್ಲಿ ದಿನಾಂಕ:30.06.2020 ರಂದು ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿಯ ಸಭೆಯಲ್ಲಿ ಇನ್‌ವೆಸ್ಟ್ ತುಮಕೂರು ವಿಷಯದ ಬಗ್ಗೆ ಚರ್ಚಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಭೇಟಿ ನೀಡಿದಾಗ ಈ ವಿಷಯ ಹಂಚಿಕೊಂಡರು.