5th December 2024
Share

TUMAKURU:SHAKTHIPEETA FOUNDATION

ಒಬ್ಬ ಅಧಿಕಾರಿ ಅಥವಾ ನೌಕರ ಯಾವುದೇ ಕೆಲಸವನ್ನು ಮಾಡಬೇಕಾದರೆ ಸ್ವತಃ ಅವರಿಗೆ ಪ್ರಾಯೋಗಿಕ ಜ್ಞಾನವಿರಬೇಕು. ಅವರ ಜಮೀನಿನಲ್ಲಿ  ಅಥವಾ ಅವರ ಗ್ರಾಮದಲ್ಲಿ ಅಥವಾ ಯಾವುದಾದರೂ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಪ್ರಾಯೋಗಿಕ ಕೆಲಸ ಆರಂಬಿಸದರೆ ಮಾತ್ರ ಅವರು ದೇಶಕ್ಕೆ ಆಸ್ತಿಯಾಗುತ್ತಾರೆ.

 ತುಮಕೂರು ಜಿಲ್ಲಾ ಪಂಚಾಯತ್‌ನಲ್ಲಿ ಜಲಾಮೃತ ಯೋಜನೆಯಡಿ ನೀರಿನ ಆಯವ್ಯಯ, ನೀರಿನ ಆಡಿಟ್ ಮತ್ತು ನೀರಿನ ಸ್ಟ್ರಾಟಜಿ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ ನಡೆಸಲಾಗಿತ್ತು.

 ಅಂದಿನ ಸಭೆಯಲ್ಲಿ ಶಿರಾ ತಾಲ್ಲೂಕಿನ  ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆಯ ಎಇಇ ಶ್ರೀ ಮಂಜುಪ್ರಸಾದ್‌ರವರು ಅವರ ಗ್ರಾಮದಲ್ಲಿ ಗ್ರಾಮದ ಕೊಳಚೆ ನೀರಿನ ಬಳಕೆ ಬಗ್ಗೆ ಅವರು ಮಾಡಿರುವ ಸಂಶೋಧನೆ ಬಗ್ಗೆ ಮಾತನಾಡಿದರು.

 ಅವರ ಗ್ರಾಮಕ್ಕೆ ಹೋಗಿ ಪರೀಶಿಲನೆ ಮಾಡಲೇ ಬೇಕೆಂದು ನಾನು ಅಂದೇ ತೀರ್ಮಾನ ಮಾಡಿದೆ, ನಿನ್ನೆ ಶಿರಾ ತಾಲ್ಲೂಕಿನಲ್ಲಿರುವ ಅಮಲಗೊಂದಿ ಗ್ರಾಮಕ್ಕೆ ಭೇಟಿ ನೀಡಿದೆ. ಅವರು ನೀರಿನ ಬಗ್ಗೆ ಸಂಶೋಧನೆ ಮಾಡುತ್ತಿರುವ ಎಲ್ಲಾ ವ್ಯವಸ್ಥೆಯ ಬಗ್ಗೆ ಗಮನಹರಿಸಿದೆ.

 ನಿಜಕ್ಕೂ ಅದ್ಭುತ ಎನಿಸಿತು, ನಾನು ಅಲ್ಲಿಂದಲೇ ಅಟಲ್ ಭೂಜಲ್ ಯೋಜನೆ ರೂಪಿಸುತ್ತಿರುವ ಇಂಜಿನಿಯರ್‌ಗಳಿಗೆ ಮಾತನಾಡಿದೆ. ಇವರ ನೀರಿನ ಜ್ಞಾನವನ್ನು ಬಳಸಿಕೊಳ್ಳಿ, ಇಂಥಹ ನೂರಾರು ಜನರು ಮಾಡಿರುವ ಪ್ರಾಯೋಗಿಕ ಯೋಜನೆಗಳು ನಿಮಗೆ ದಾರಿ ದೀಪವಾಗಬೇಕು. ಮೊದಲು ನೀರಿನ ಯೋಜನೆ ರೂಪಿಸಿ, ಸಂಶೋಧನಾ ಮಾಡುತ್ತಿರುವವರ ಅನುಭವ ಪಡೆದುಕೊಳ್ಳಿ.

 ಯೋಜನೆ ಸಫಲವಾಗಿರಲಿ ಅಥವಾ ವಿಫಲವಾಗಿರಲಿ ಅವರ ಅನುಭವ ಅಪಾರವಾಗಿರುತ್ತದೆ. ಅವರಿಗಿರುವ ಜಮೀನಿನನ್ನು ಪಾಳುಬಿಟ್ಟು ಬೇರೆಯವರಿಗೆ ಹೀಗೆ ಮಾಡಿ, ಹಾಗೆ ಮಾಡಿ ಎಂದು ತಬಲ ಬಾರಿಸುವುದನ್ನು ಬಿಟ್ಟು ನಾನು ಹೀಗೆ ಮಾಡಿದ್ದೇನೆ, ನೀವೂ ಮಾಡಿ ಎಂದರೆ ಜನ ಧೈರ್ಯವಾಗಿ ಮುಂದೆ ಬರುತ್ತಾರೆ.

  ಕೇಂದ್ರ ಮತ್ತು ರಾಜ್ಯಸರ್ಕಾರಗಳು ನೂರಾರು ಯೋಜನೆ ಜಾರಿತಂದರೂ ಕಡತದಲ್ಲಿ ಮಾತ್ರ ಇರುತ್ತದೆ, ಭೂಮಿಯಮೇಲೆ ಜಾರಿ ಮಾಡಬೇಕಾದಲ್ಲಿ ಇಂಥಹವರ ಜ್ಞಾನ ಭಂಡಾರ ಅಗತ್ಯವಿದೆ. ಕಡತದಲ್ಲಿ ಸಾಧನೆ ಮಾಡುವವರೇ ಜಾಸ್ತಿ.

 ಮಳೆ ಮಾಪನ, ಕೃಷಿಹೊಂಡಾ, ಕೊಳಚೆ ನೀರಿನ ಬಳಕೆ, ಮಳೆ ನೀರಿನ ಅಳತೆ ಮಾಡುವ ಮಾಪನಗಳು, ಕೃಷಿಹೊಂಡಾದ ಬಹುಪಯೋಗಿ ಚಿಂತನೆ, ನೀರಿನ ಬಳಕೆ ಗ್ರಾಫ್, ಇತ್ಯಾದಿ ಬಗ್ಗೆ ಶ್ರೀ ಮಂಜುಪ್ರಸಾದ್‌ರವರು  ಮಾಡಿರುವ ನೀರಿನ ಸಂಶೋಧನೆಗಳ ಬಗ್ಗೆ ಅವರೇ ಬರೆಯುತ್ತಾರೆ.