22nd November 2024
Share
DR.LAKSHMITHATHACHAR, VIPUL, SATHYNAND, KUNDARANAHALLI RAMESH, PANKAJA
VIPUL

TUMAKURU:SHAKTHIPEETA FOUNDATION

ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲ್ಲೂಕಿನ ಚಿತ್ರಕೂಟ ಹರಿಹರ ಪ್ರಬೋಧಿಸೀ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿರುವ ತುಮಕೂರಿನ ಚಿ.ವಿಪುಲ್ 9 ನೇ ತರಗತಿಯಿಂದ 10 ನೇ ತರಗತಿಗೆ ಕಾಲಿಡುವ ವಿದ್ಯಾರ್ಥಿ ಸುಮಾರು 1500 ಶ್ಲೋಕಗಳನ್ನು ಬಾಯಿಯಲ್ಲಿ ಪಟ, ಪಟ ಹೇಳುತ್ತಾನೆ ಎಂಬ ಮಾಹಿತಿ ನನಗೆ ತಿಳಿಯಿತು.

ನಾನು ಅವರ ಮನೆಗೆ ಹೋದೆ, ಅವರ ತಂದೆ ಭಗವಧ್ಗೀತೆ ಪುಸ್ತಕ ತಂದು ನನ್ನ ಕೈಗೆ ಕೊಟ್ಟರು, ಸಾರ್ ಇದರಲ್ಲಿ ನೀವು ಯಾವುದೇ ಶ್ಲೋಕದ ಮೊದಲನೆ ಸಾಲು ಹೇಳಿ ಉಳಿದ ಭಾಗವನ್ನು ಹೇಳುತ್ತಾನೆ ಎಂದಾಗ ನನಗೆ ಆಶ್ಚರ್ಯವೂ ಆಯಿತು.

ನಾನು ಕೇಳಲು ಆರಂಭಿಸಿದೆ, ಅವನು ಹೇಳಲು ಶುರುಮಾಡಿದ, ನಂತರ ಇನ್ನೂ ಯಾವ ಶ್ಲೋಕಗಳು ಬರುತ್ತವೆ ಎಂದಾಗ ವೃಕ್ಷಗಳ ಶ್ಲೋಕಗಳು ಎಂಬ ಅವನ ಮಾತು ನನಗೆ ಇನ್ನೂ ಆಶ್ಚರ್ಯವಾಯಿತು. ಹೇಳು ನೋಡೋಣ ಅಂದರೆ ಸುಮಾರು  ಮರಗಳ ಬಗ್ಗೆ ಇರುವ ಶ್ಲೋಕಗಳನ್ನು ಹೇಳಲು ಆರಂಭಿಸಿದ. ಹಾಗೆ ಇವುಗಳ ಅರ್ಥಗಳನ್ನು ಹೇಳು ಎಂದಾಗ ಅವನ ಮಾತುಕೇಳಿ ಇವುಗಳನ್ನು ನಿನಗೆ ಕಲಿಸುತ್ತಿರುವವರು ಯಾರು? ಎಂದಾಗ ನನಗೆ ತಿಳಿದಿದ್ದು ಮೇಲುಕೋಟೆಯ ಡಾ.ಲಕ್ಷ್ಮಿತಾತಾಚಾರ್‌ರವರು.

ಶ್ರೀ ಜಿ.ಎಸ್.ಬಸವರಾಜ್ ಸಲಹೆಯಂತೆ ಸಿದ್ಧಗಂಗಾ ಶ್ರೀಗಳ ಜನ್ಮಶತಮಾನೋತ್ಸವದ ಅಂಗವಾಗಿ ಹಸಿರು-ತುಮಕೂರು ಯೋಜನೆಯಡಿ ತುಮಕೂರು ನಗರದಲ್ಲಿ ಸುಮಾರು 36500 ಗಿಡಗಳನ್ನು ಹಾಕುವಾಗ ನಮಗೆ ಈ ಅಂಶವೇ ಹೊಳೆದಿರಲಿಲ್ಲ. ಮರಗಳು ಉತ್ತಮ ಗಾಳಿ, ಮಳೆ, ಮರಮುಟ್ಟು, ಹಣ್ಣು ಹಂಪಲೂ ನೀಡುತ್ತವೆ ಎಂಬ ಅಂಶ ಮಾತ್ರ ನನಗೆ ತಿಳಿದಿದ್ದು.

ನಾನು ಮೇಲುಕೋಟೆಗೆ ಹೋಗಿ  ಡಾ.ಲಕ್ಷ್ಮಿತಾತಾಚಾರ್‌ರವರನ್ನು ಭೇಟಿಯಾಗಿ ಮಾತನಾಡಿದಾಗ ತಿಳಿಯಿತು ಪ್ರತಿ ವೃಕ್ಷಕ್ಕೂ ಒಂದು ಇತಿಹಾಸವಿದೆ, ಯಾವ ಗಿಡವನ್ನು ಎಲ್ಲಾ ಹಾಕಿದರೆ ಯಾವ ಫಲದೊರೆಯುತ್ತದೆ ಎಂಬ ಬಗ್ಗೆ ನಿಖರವಾದ ಶಾಸ್ರ್ತ, ಇತಿಹಾಸ, ಆಗಮ, ವಾಸ್ತು, ವೇದ, ಪುರಾಣ, ವಿಜ್ಞಾನ, ತಂತ್ರಜ್ಞಾನ, ನ್ಯಾನೋ ಟೆಕ್ನಲಾಜಿ ಹೀಗೆ ಎಲ್ಲಾ ಜ್ಞಾನಗಳ ಅರಿತಿರುವ   84 ವರ್ಷದ ತರುಣ ಡಾ.ಲಕ್ಷ್ಮಿತಾತಾಚಾರ್‌ರವರ ಜ್ಞಾನ ಭಂಡಾರದ ಮಾತುಗಳಿಂದ.

ನಾನು ಅವರಲ್ಲಿ ಮನವಿ ಮಾಡಿದ ವಿಷಯ ನಮ್ಮ ಶಕ್ತಿಪೀಠದ ಕ್ಯಾಂಪಸ್‌ನಲ್ಲಿ ಎಲ್ಲಿ ಯಾವ ಗಿಡ ಹಾಕಬೇಕು ಎಂಬ ಬಗ್ಗೆ ಮಾಹಿತಿ ನೀಡಿ, ನಾನು ಆ ಪ್ರಕಾರ ಗಿಡಗಳನ್ನು ಹಾಕಬೇಕು ಎಂದಾಗ ಅವರು ನಕ್ಷೆಕೊಡಿ ಒಂದು ವಾರ ಸಮಯ ನೀಡಿ, ನಿಮಗೆ ಒಂದು ರೀಸರ್ಚ್ ಪೇಪರ್ ನೀಡುತ್ತೇನೆ ಎಂಬ ಖಚಿತ ಭರವಸೆ ನೀಡಿದರು.

ವಿಪುಲ್‌ಗೆ ಯಾವುದೇ ಪೆನ್ನು, ಪುಸ್ತಕ ಬರವಣಿಗೆ ಇಲ್ಲದೆ ಬಾಯಿ ಮಾತಲ್ಲಿ ವೃಕ್ಷಗಳಿಗೆ ಸಂಬಂಧಿಸಿದ ಎಲ್ಲಾ ಶ್ಲೋಕಗಳನ್ನು ಕಲಿಸುತ್ತಿದ್ದೇನೆ. ಆ ಪ್ರಕಾರ ನಿಮ್ಮ ಕ್ಯಾಂಪಸ್‌ನಲ್ಲಿ ಸೂಕ್ತ ಸ್ಥಳದಲ್ಲಿ, ಸೂಕ್ತ ಗಿಡಗಳನ್ನು ಹಾಕಿ   ಎಂಬ ಸಲಹೆ ನೀಡಿದರು. ಅಷ್ಟೆ ಅಲ್ಲ ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಯಾವ ದೇವಾಲಯದ ಸುತ್ತ ಯಾವ ಗಿಡ ಹಾಕಬೇಕು ಎಂಬ ಮಾಹಿತಿ ಅರಿತು ಗಿಡಹಾಕುತ್ತಿದ್ದರು ಎಂಬ ಬಗ್ಗೆ ಪುರಾವೆಗಳೊಂದಿಗೆ ಮಾಹಿತಿ ಹಂಚಿಕೊಂಡರು.

ಮುಂದುವರೆಯುವುದು-