12th October 2024
Share

TUMAKURU:SHAKTHIPEETA FOUNDATION

ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು 2022 ರೊಳಗೆ ದೇಶದ ಎಲ್ಲರಿಗೂ ವಸತಿ ಎಂಬ ಘೋಷಣೆ ಮಾಡಿದ್ದಾರೆ. ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು, ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಡಾ.ರಾಕೇಶ್ ಕುಮಾರ್‌ರವರು ಮತ್ತು ತುಮಕೂರು ಮಹಾನಗರಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕರವರು, ತುಮಕೂರು ಉಪವಿಭಾಗಾಧಿಕಾರಿಗಳಾದ ಶ್ರೀ ಅಜಯ್‌ರವರು ಮತ್ತು ತುಮಕೂರು ತಾಲ್ಲೂಕು ತಹಶೀಲ್ಧಾರ್‌ರವರಾದ ಶ್ರೀ ಮೋಹನ್‌ರವರು  ತುಮಕೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ನಿವೇಶನ ಮತ್ತು ವಸತಿ ರಹಿತರಿಲ್ಲ ಎಂಬ ಘೋಷಣೆ ಮಾಡಲೇ ಬೇಕು ದೃಢ ನಿರ್ಧಾರ ಮಾಡಿದ್ದಾರೆ’

  ಈ ಬಗ್ಗೆ ಸುಮಾರು ಸಭೆಗಳನ್ನು ಈಗಾಗಲೇ ನಡೆಸಿದ್ದಾರೆ, ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 19882 ಜನರು ನಿವೇಶನ ಮತ್ತು ವಸತಿ ಇಲ್ಲ ಎಂದು ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಯಡಿಯಲ್ಲಿ ನಿವೇಶನ ಮತ್ತ ವಸತಿ ಪಡೆಯಬೇಕಾದರೆ ಫಲಾನುಭವಿಗಳಿಗೆ ರಾಜ್ಯದ/ದೇಶದ ಯಾವುದೇ ಮೂಲೆಯಲ್ಲಾಗಲಿ ಆ ದಂಪತಿಗಳ ಹೆಸರಿನಲ್ಲಿ ನಿವೇಶನ ಅಥವಾ ಜಮೀನು ಇರಲೇಬಾರದು ಎಂಬುದು ನಿಯಮವಿದೆಯಂತೆ.

 ಮೊದಲ ಹಂತವಾಗಿ ನೋದಾಯಿಸಿಕೊಂಡಿರುವವರಲ್ಲಿ ಅರ್ಹ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಲು ನಿರ್ಣಯಮಾಡಲಾಗಿದೆ. ಪ್ರಸ್ತುತ ರಾಜ್ಯ ಸರ್ಕಾರ ಕೋವಿಡ್-19 ಗೆ ಬೂತ್‌ವಾರು ಮತ್ತು ವಾರ್ಡ್‌ವಾರು ರಚಿಸಿರುವ ಟಾಸ್ಕ್ ಪೋರ್ಸ್’ ನಿಂದ ಫಲಾನುಭವಿಗಳ ತಪಾಸಣೆ ಮಾಡಿಸಲು ಚಿಂತನೆ ನಡೆಸುತ್ತಿದ್ದಾರೆ. ಹೇಗೂ ಮನೆ-ಮನೆ ಸಮೀಕ್ಷೆ ಮಾಡುವಾಗ ವಸತಿ/ನಿವೇಶನ ರಹಿತರ ಪಟ್ಟಿ ತಪಾಸಣೆ ಮಾಡಲು ಅನೂಕೂಲವಾಗಲಿದೆ.

 ಎರಡನೇ ಹಂತದಲ್ಲಿ ತುಮಕೂರು ಮಹಾನಗರಪಾಲಿಕೆಯ ವ್ಯಾಪ್ತಿ ಸುತ್ತಲೂ ಇರುವ ಸರ್ಕಾರಿ ಭೂಮಿಗಳನ್ನು ಗುರುತಿಸಿ ಜಿಐಎಸ್ ಲೇಯರ್’ ಮಾಡಲು ಕಂದಾಯ ಇಲಾಖೆ ಮುಂದಾಗಿದೆ. ಈಗಾಗಲೇ ಫೈಲಟ್ ಆಗಿ ಏಳು ಗ್ರಾಮಗಳಲ್ಲಿ ಸರ್ಕಾರಿ ಜಮೀನುಗಳ ಲೇಯರ್ ಮಾಡಲಾಗಿದೆ. ನಗರದ ಸುತ್ತವಿರುವ ಬಹುತೇಕ ಜಮೀನು ಕಲ್ಲು-ಗುಡ್ಡ-ಬಂಡೆಗಳಿಂದ ಕೂಡಿದೆ. ಸಮತಟ್ಟಾದ ಅಂಗೈನಂತ ಜಮೀನು ದೊರೆಯುವುದು ಕಷ್ಟವಾಗಿದೆ.

 ಈ ಸರ್ಕಾರಿ ಜಮಿನೀನಲ್ಲಿ ಬಗರ್‌ಹುಕುಂ ಯೋಜನೆಯಡಿ ಫಾರಂ 50, 53 ಮತ್ತು 57 ಅಡಿ ಅರ್ಜಿಹಾಕಿರುವವರ ಪಟ್ಟಿಮಾಡಿದರೆ ರೈತರು ಉಳುಮೆ ಮಾಡುತ್ತಿರುವ ಸರ್ಕಾರಿ ಜಮೀನು ದೊರೆಯಲಿದೆ, ಇವರಿಗೆ ನಿಯಮ ಪ್ರಕಾರ ಪಾಲಿಕೆ ವ್ಯಾಪ್ತಿಯ 10 ಕೀಮೀ ವ್ಯಾಪ್ತಿಯಲ್ಲಿ ಮಂಜೂರು ಮಾಡಲು ಬರುವುದಿಲ್ಲ.

 ರೆವಿನ್ಯೂ ಅಧಿಕಾರಿಗಳು ಇದು ವಾಸಕ್ಕೆ ಯೋಗ್ಯವಲ್ಲ ಎಂದು ತಿಳಿಸುವ ಆಗಿಲ್ಲ ಟೆಕ್ನಲಾಜಿ ಬದಲಾಗಿದೆ’ ವಸತಿ ಇಲಾಖೆಗೆ ಗ್ರಾಮವಾರು ಗುರುತಿಸಿರುವ ಸರ್ಕಾರಿ ಭೂಮಿಗಳನ್ನು ನೀಡಿ ಕಟ್ಟಡ ನಿರ್ಮಾಣ ಮಾಡಲು ಯೋಗ್ಯವಾಗಿರುವ ಭೂಮಿಯನ್ನು ಗುರುತಿಸಲು ಚಿಂತನೆ ನಡೆದಿದೆ. ಹಾಗೇಯೇ ನಿವೇಶನ/ವಸತಿ ರಹಿತರಿಗೂ ಈ ಪಟ್ಟಿ ನೀಡಿ ’ನೀವು ಯಾವ ಜಮೀನಿನಲ್ಲಿ ನಿವೇಶನ ಪಡೆಯಲು ಆಸಕ್ತರಾಗಿದ್ದಾರಿ’ ಎಂಬ ಮನವಿಯನ್ನು ಸ್ವೀಕರಿಸಲು ಯೋಚಿಸಲಾಗಿದೆಯಂತೆ. ಆಸಕ್ತ ಫಲಾನುಭವಿಗಳು ಗುಂಪಾಗಿ ಈ ಜಮೀನಿನಲ್ಲಿ ನೀಡಿ ನಾವೇ ಸಮತಟ್ಟು ಮಾಡಿಕೊಳ್ಳುತ್ತೇವೆ ಎಂಬ ನಿರ್ಧಾರಕ್ಕೂ ಬರಬೇಕಾಗುವುದು. ಎಲ್ಲವನ್ನು ಸರ್ಕಾರವೇ ಮಾಡಲಿ ಎಂದು ಕೂರುವುದು ಸರಿಯಲ್ಲ.

 ಮೂರನೇ ಹಂತದಲ್ಲಿ ತುಮಕೂರು ಮಹಾನಗರ ಮತ್ತು ಪಾಲಿಕೆಯ 10 ಕೀಮಿ ವ್ಯಾಪ್ತಿಯಲ್ಲಿ ಗುರಿತಿಸಿರುವ ಸರ್ಕಾರಿ ಭೂಮಿ ಹೊರತು ಪಡಿಸಿ ಇನ್ನೂ ಯಾವ ಗ್ರಾಮಗಳಲ್ಲಾಗಲಿ ಸರ್ಕಾರಿ ಜಮೀನು ಇರುವ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದ ಸಂಶೋಧಕರು’ ಹುಡುಕಿದರೆ, ಆಯಾ ವ್ಯಾಪ್ತಿಯ ಅಧಿಕಾರಿಗೆ ’ಶಿಕ್ಷೆ’ ಕಾದಿದೆ.

 ರಾಜ್ಯ ಸರ್ಕಾರವೇ ರೆವಿನ್ಯೂ ಇಲಾಖೆ ಅಧಿಕಾರಿಗಳಿಗೆ ಸರ್ಕಾರಿ ಜಮೀನು ಗುರುತಿಸಿ ಪಟ್ಟಿಮಾಡಲು ಆದೇಶ ನೀಡಿದೆ. ಅಲ್ಲದೆ ಈಗಾಗಲೇ ಹಲವಾರು ವರ್ಷಗಳಿಂದ ಹರಸಾಹಸ ಮಾಡುತ್ತಿದೆ. ತುಮಕೂರು ನಗರದ ಮಾಹಿತಿ ಹಕ್ಕು ಹೋರಾಟಗಾರರು ತುಮಕೂರು ಸುತ್ತವಿರುವ ಗ್ರಾಮಗಳ ಮತ್ತು ನಗರದ ಸಾವಿರಾರು ಎಕರೆ ಸರ್ಕಾರಿ ಜಮೀನಿನ ಸರ್ವೆ ನಂಬರ್‌ವಾರು ಪಟ್ಟಿ ಮಾಡಿ ಹೋರಾಟಮಾಡುತ್ತಿದ್ದಾರೆ.

 ಎಲ್ಲರ ಹೋರಾಟಕ್ಕೂ ತೆರೆಬೀಳಲೇ ಬೇಕು. ಸರ್ಕಾರಿ ಜಮೀನು ಎಲ್ಲಾ ಲಭ್ಯವಿಲ್ಲ ಎಂದಾದರೆ ಅಗತ್ಯಭೂಮಿಯನ್ನು ಭೂ ಸ್ವಾಧೀನ ಮಾಡಲು ಕ್ರಮ ಕೈಗೊಂಡು ರಾಜ್ಯ ಸರ್ಕಾರಕ್ಕೆ ಸಲ್ಲಿಸುವುದು ನಿಯಮವಾಗಿದೆ.

 ಹೊಸದಾಗಿ ಬಂದಿರುವ ಪಾಲಿಕೆ ಆಯುಕ್ತರು, ಎಸಿಯವರು ಮತ್ತು ತಹಶೀಲ್ಧಾರ್ ಸೇರಿದಂತೆ ಮೂರು ಜನರು ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರಿಗೆ ಸುಮಾರು ಆರು ತಿಂಗಳಲ್ಲಿ ನಿವೇಶನ ಮತ್ತು ವಸತಿ ರಹಿತರಿಲ್ಲ ಎಂಬ ಘೋಷಣೆಗೆ ಜಮೀನು ಗುರುತಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದ್ದಾರಂತೆ, ಪಾಲಿಕೆ ಆಯುಕ್ತರು ಈಗಾಗಲೇ ರೆವಿನ್ಯೂ ಇಲಾಖೆಗೆ ಪತ್ರ ಬರೆಯುವ ಮೂಲಕ ಚಾಲನೇ ನೀಡಿದ್ದಾರೆ.

 ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮತ್ತು ವಸತಿ ಸಚಿವರಾದ ಶ್ರೀ ವಿ.ಸೋಮಣ್ಣನವರು ಭರವಸೆ ನೀಡಿದ್ದಾರಂತೆ. ತುಮಕೂರು ಜಿಲ್ಲಾ ದಿಶಾ ಸಮಿತಿಯೂ ಗಂಭೀರವಾಗಿ ಯೋಜನೆ ಪರಿಗಣಿಸಿದೆ ಕಾದು ನೋಡೋಣ.

  ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಂತಿಮ ಗುರಿ ತಲುಪುವರರೆಗೂ ಕಡತದ ಅನುಸರಣೆ ಮಾಡಲಿದೆ. ಇದರಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಪಾತ್ರವೇನು? ಎಂಡಿಯವರು ಸ್ಪಷ್ಟ ಪಡಿಸಲಿ.