22nd December 2024
Share

TUMAKURU:SHAKTHIPEETA FOUNDATION

ತಹಶೀಲ್ಧಾರ್ ಶ್ರೀ ಮೋಹನ್‌ರವರು : ತುಮಕೂರು ನಗರದ ಸುತ್ತ 10 ಕೀಮೀ ವ್ಯಾಪ್ತಿಯಲ್ಲಿನ ಗ್ರಾಮಗಳ ಪಟ್ಟಿ,  ಗ್ರಾಮವಾರು ವಿಲೇಜ್ ಅಕೌಂಟೆಂಟ್ ಹಾಗೂ ರೆವಿನ್ಯೂ ಇನ್‌ಸ್ಪೆಕ್ಟರ್ ಹೆಸರು ಮೊಬೈಲ್ ನಂ ಸಹಿತ ಜಿಐಎಸ್ ಲೇಯರ್‌ನಲ್ಲಿ ಪ್ರಕಟಿಸಿ. ಅವರುಗಳು ಗ್ರಾಮವಾರು ಸರ್ಕಾರಿ ಜಮೀನುಗಳ ವಿವಿರಗಳನ್ನು ಗ್ರಾಮ ನಕ್ಷೆವಾರು ಇತಿಹಾಸ ಸಹಿತ ಪ್ರಕಟಿಸಲಿ.

  ಜಿಐಎಸ್ ಲೇಯರ್‌ನಲ್ಲಿ ಯಾವ ರೀತಿಯ ಸರ್ಕಾರಿ ಜಮೀನು, ಯಾರು ಸ್ವಾಧೀನದಲ್ಲಿದ್ದಾರೆ, ವಿಸ್ತೀರ್ಣ, ಚಕ್‌ಬಂದಿ, ನ್ಯಾಯಾಲಯದಲ್ಲಿ ಇದೆಯೇ? ಯಾರಾದರೂ ಬಗರ್ ಹುಕುಂ ಅರ್ಜಿ ಹಾಕಿದ್ದಾರೆಯೇ, ವಿಎ, ಆರ್ ಐ ಮತ್ತು ಸರ್ವೇಯರ್  ಇತ್ಯಾದಿ ಮಾಹಿತಿ ಕ್ಲಿಕ್ ಮಾಡಿದ ತಕ್ಷಣ ಬರುವಂತಿರಲಿ.  

 ಮಾದರಿಯಾಗಿ ತುಮಕೂರಿನ ಸ್ಪೆಕ್ಟ್ರಾ ಅಸೋಯೇಷಿನ್ ಶ್ರೀ ಸತ್ಯಾನಂದ್  ಸ್ವಾಂದೇನಹಳ್ಳಿ ಗ್ರಾಮದ ಜಲಗ್ರಾಮ ಕ್ಯಾಲೆಂಡರ್‌ನಲ್ಲಿ ಸರ್ಕಾರಿ ಜಮೀನುಗಳನ್ನು ಗುರುತಿಸಿದ್ದಾರೆ. ಆ ರೀತಿ ದಯವಿಟ್ಟು ಮಾಡಿಸಿ

ತುಮಕೂರಿನ ಎ1 ಸರ್ವೇ ರವರು ತುಮಕೂರು ನಗರದ ಶ್ರೀ ರಾಜಶೇಖರ್‌ರವರು ತುಮಕೂರು ತಾಲ್ಲೂಕಿನ ಅಮಲಾಪುರ, ಅರಕೆರೆ, ಎಲ್ಲಾಪುರ, ಅಜ್ಜಪ್ಪನಹಳ್ಳಿ, ಸ್ವಾಂದೇನಹಳ್ಳಿ, ಬೀರನಕಲ್ಲು ಮತ್ತು ಮುತ್ಸಂದ್ರ ಸೇರಿದಂತೆ 7 ಗ್ರಾಮಗಳ ಸರ್ಕಾರಿ ಜಮೀನುಗಳನ್ನು ಗುರುತಿಸಿದ್ದಾರೆ, ಈ ಗ್ರಾಮಗಳಲ್ಲಿಯೂ ನಕ್ಷೆಯಲ್ಲಿ ಸರ್ವೇ ನಂಬರ್ ಸಹಿತ ಪ್ರಕಟಿಸಿ.

ತುಮಕೂರು ಸ್ಮಾರ್ಟ್ ಸಿಟಿ ಎಂಡಿ ಶ್ರೀ ರಂಗಸ್ವಾಮಿರವರು: ಇವೆರಡು ಮಾದರಿಯಲ್ಲಿ 10 ಕೀಮೀ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿಯೂ ನಕ್ಷೆ ಸಹಿತ ಜಿಐಎಸ್ ಲೇಯರ್ ಮಾಡಿಸುವ ಕೆಲಸ ಮಾಡಿಸಿ, ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್‌ನವರೊಂದಿಗೆ ಮಾತನಾಡಿ.  ವಿವರವಾದ ಮಾಹಿತಿ ಸಂಗ್ರಹಿಸಲು ಖಾಸಗಿಯವರಿಗೆ ನೀಡಲು ಅಗತ್ಯವಿರುವ ಅನುದಾನವನ್ನು ನೀಡಲು ಕ್ರಮಕೈಗೊಳ್ಳಿ, ಇವರಿಬ್ಬರೂ ಕೆಲಸ ಬಿಟ್ಟು ಉಚಿತವಾಗಿ ಮಾಡಿ ತೋರಿಸಿದ್ದಾರೆ. 

ಟೂಡಾ ಆಯುಕ್ತರಾದ ಶ್ರೀ ಯೋಗಾನಂದ್‌ರವರು: ತುಮಕೂರು ಲೋಕಲ್ ಪ್ಲಾನಿಂಗ್ ಏರಿಯಾವನ್ನು ಅಂತಿಮಗೊಳಿಸುವಾಗ ನಗರದಿಂದ ಹೊಸದಾಗಿ ರಾಷ್ಟ್ರೀಯ ಹೆದ್ಧಾರಿ ಅಥಾರಿಟಿಯವರು ಮಾಡುವ ರಿಂಗ್ ರಸ್ತೆಯನ್ನು ಗಮನದಲ್ಲಿಟ್ಟುಕೊಂಡು ತುಮಕೂರು ನಗರದ ಸುತ್ತ 10 ಕೀಮೀ ವ್ಯಾಪ್ತಿಗೆ ಮಾಡಿಸುವ ಬಗ್ಗೆ ಸಾಧಕ-ಭಾದಕಗಳ ಬಗ್ಗೆ ಪರಿಶೀಲಿಸಿ. ನಂತರ ನಗರದ ಬಸ್‌ಸ್ಟ್ಯಾಂಡಿನಿಂದ 10 ಕೀಮೀ ವ್ಯಾಪ್ತಿಯವರಿಗೂ ರೇಡಿಯಲ್ ರೋಡ್ ಗುರುತಿಸಿ ಸುಮಾರು 100 ಅಡಿಗಿಂತಲೂ ವಿಸ್ಥೀರ್ಣದ ರಸ್ತೆಯನ್ನು ಮಾಸ್ಟರ್ ಪ್ಲಾನ್ ನಲ್ಲಿ ಸೇರ್ಪಡೆ ಮಾಡಲು ಮಾಹಿತಿ ಸಂಗ್ರಹಿಸಿ.

ಲೋಕೋಪಯೋಗಿ ಇಇ ಶ್ರೀ ಸಂಜೀವರಾಜುರವರು: ಕಳೆದ ದಿಶಾ ಸಮಿತಿಯಲ್ಲಿ ನಿರ್ಣಯಮಾಡಿರುವಂತೆ ತುಮಕೂರು ನಗರದ ಸುತ್ತ 10 ಕೀಮೀ ವ್ಯಾಪ್ತಿಗೆ ರೇಡಿಯಲ್ ರೋಡ್ ಮಾಡಲು ರಸ್ತೆಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಸೇರಿ ಟೂಡಾಕ್ಕೆ ಸಹಕರಿಸಿ.

ಹೌಸಿಂಗ್ ಬೋರ್ಡ್ ಎಇಇ: ಮುಂದಿನ 5 ವರ್ಷಗಳಲ್ಲಿ ಈ ವ್ಯಾಪ್ತಿಯಲ್ಲಿ ಕೈಗೊಳ್ಳುವ ನಿವೇಶನ/ವಸತಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿ.

ಸ್ಲಮ್ ಬೋರ್ಡ್ ಎಇಇ: ಮುಂದಿನ 5 ವರ್ಷಗಳಲ್ಲಿ ಈ ವ್ಯಾಪ್ತಿಯಲ್ಲಿ ಕೈಗೊಳ್ಳುವ ನಿವೇಶನ/ವಸತಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿ.

ಟೂಡಾ ಎಇಇ: ಮುಂದಿನ 5 ವರ್ಷಗಳಲ್ಲಿ ಈ ವ್ಯಾಪ್ತಿಯಲ್ಲಿ ಕೈಗೊಳ್ಳುವ ನಿವೇಶನ/ವಸತಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿ.

ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು:  ಮುಂದಿನ 5 ವರ್ಷಗಳಲ್ಲಿ ಈ ವ್ಯಾಪ್ತಿಯಲ್ಲಿ ಕೈಗೊಳ್ಳುವ ನಿವೇಶನ/ವಸತಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿ.

ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕರವರು: ಮೇಲ್ಕಂಡ ಎಲ್ಲಾ ಮಾಹಿತಿಗಳನ್ನು ಕ್ರೋಢಿಕರಿಸಿ ದಿನಾಂಕ:24.07.2020 ನೇ ಶುಕ್ರವಾರ ಸಂಜೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಭೆಯಲ್ಲಿ ನಡವಳಿಕೆ ಮಾಡಿಸಲು ಕಡತದೊಂದಿಗೆ ಸಭೆಗೆ ಬರುವುದು ಸೂಕ್ತ, ಕಾಗದ ಬರೆದು ಸುಮ್ಮನೇ ಕೂತರೇ ಕೆಲಸ ಆಗಲ್ಲ.

ನಿವೇಶನ ಮತ್ತು ವಸತಿ ರಹಿತರ ಪಟ್ಟಿಯನ್ನು ಬೂತ್‌ವಾರು ವಿಂಗಡಿಸಿ ತಪಾಸಣೆ ನಡೆಸಲು ಜಿಐಎಸ್ ಲೇಯರ್ ಮಾಡಿ ಬೂತ್‌ವಾರು ಇರುವ ಅರ್ಜಿಗಳ ಪಟ್ಟಿಯನ್ನು ಪ್ರಕಟಿಸಲು ಕ್ರಮಕೈಗೊಳ್ಳುವುದು ಸೂಕ್ತವಾಗಿದೆ.

ಇನ್ನೂ ಅಗತ್ಯವಿರುವ ಇಲಾಖೆ, ಯೋಜನೆಗಳ ಬಗ್ಗೆ ಟೀಮ್ ವರ್ಕ್ ಆದರೇ ಮಾತ್ರ ಗುರಿ ತಲುಪಲು ಸಾಧ್ಯಾ ಇಲ್ಲಾವಾದಲ್ಲಿ ಬರೀ ಭಾಷಣಕ್ಕೆ ಮಾತ್ರ ಹೌಸಿಂಗ್ ಫಾರ್ ಆಲ್ – 2022 ಸೀಮೀತವಾಗಲಿದೆ.