22nd November 2024
Share

TUMAKURU:SHAKTHIPEETA FOUNDATION

 ತುಮಕೂರು ನಗರದಲ್ಲಿನ ಪ್ರತಿಯೊಂದು  ಇಂಚು ಜಮೀನಿನನಲ್ಲಿ ಎಲ್ಲೆಲ್ಲಿ ಏನೇನು ಇದೆ ಎಂಬ ಸ್ಪಷ್ಟ   ಕರಾರುವಕ್ಕಾದ ತಾಜಾ ಮಾಹಿತಿಯನ್ನು ಇತಿಹಾಸದೊಂದಿಗೆ ಡಿಜಿಟಲ್ ದಾಖಲೆ ಮಾಡುವ ಜಿಐಎಸ್ ಲೇಯರ್ ಬಗ್ಗೆ ತುಮಕೂರು ಸ್ಮಾರ್ಟ್ ಸಿಟಿಯವರು ಮಾಡುತ್ತಿರುವ, ತುಮಕೂರು ಮಹಾನಗರ ಪಾಲಿಕೆಯವರು ಮಾಡುತ್ತಿರುವ ಮತ್ತು ತುಮಕೂರು ಸೆಕ್ಟ್ರಾ ಅಸೋಶಿಯೇಷನ್ ಅಧ್ಯಯನ ಮಾಡಿರುವ ಲೇಯರ್‌ಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

  ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕಮ್ಮನವರು ತುಮಕೂರು ಮಹಾನಗರ ನಗರಪಾಲಿಕೆ ಆಯುಕ್ತರಾದ ಶ್ರೀ ಯೋಗಾನಂದ್‌ರವರು ಮತ್ತು ಇತರ ಅಧಿಕಾರಿಗಳು ಹಾಜರಿದ್ದರು. ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀ ರಂಗಸ್ವಾಮಿರವರ ಗೈರಾಜರಿ ಎದ್ದು ಕಾಣುತಿತ್ತು.

  ತುಮಕೂರು ಸ್ಮಾರ್ಟ್ ಸಿಟಿಯ ಐಟಿ ಮೇಲ್ವಿಚಾರಕರಾದ ಶ್ರೀ ಅಶ್ವಿನ್‌ರವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಿನಾಂಕ:24.07.2020  ರಂದು ನಡೆದ ನಡೆದ ಸಭೆಯಲ್ಲಿ ಇಂಟರ್ ನೆಟ್ ಸರಿಯಾಗಿ ಬರುತ್ತಿಲ್ಲ ಎಂದು ಪ್ರದರ್ಶಿಸಲು ಸಾಧ್ಯವಾಗಿರಲಿಲ್ಲ.

  ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು, ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿ ಗಣೇಶ್‌ರವರು ಮತ್ತು ಜಿಲ್ಲಾಧಿಕಾರಿಗಳಾದ ಶ್ರೀ ರಾಕೇಶ್ ಕುಮಾರ್‌ರವರು ಪಾಲಿಕೆ ಆಯುಕ್ತರಿಗೆ ಐಸಿಸಿಯಲ್ಲಿಯೇ ತಪಾಸಣೆ ನಡೆಸಲು ಸೂಚಿಸಿದ್ದ ಹಿನ್ನೆಲೆಯಲ್ಲಿ ಈ ಸಭೆ ನಡೆಯಿತು.

  ಈ ಸಭೆಯಲ್ಲಿ ಆಯುಕ್ತರು ದಿಶಾ ಸಮಿತಿಯ ಸದಸ್ಯರಾದ ಕುಂದರನಹಳ್ಳಿ ರಮೇಶ್‌ರವರು ಕೇಳುವ ಪ್ರಶ್ನೆಗಳಿಗೆ ನಕ್ಷೆ ಸಹಿತ ಮಾಹಿತಿಯನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ತುಮಕೂರು ಸ್ಮಾರ್ಟ್ ಸಿಟಿ ಆಶ್ವಿನ್ ಎಷ್ಟೆ ಪ್ರಯತ್ನಿಸಿದರು ಪ್ರದರ್ಶಿಸಿಸಲು ಸಾಧ್ಯವಾಗಲಿಲ್ಲ. ಪ್ರದರ್ಶಿಸಿದ ಕೆಲವು ಮಾಹಿತಿಗಳು ಅಪೂರ್ಣವಾಗಿದ್ದವು ಕೊನೆಗೆ ಅವರು ಮುಂದಿನ ಸಭೆ ವೇಳೆಗೆ ಸರಿಮಾಡುವುದಾಗಿ ಒಪ್ಪಿಕೊಂಡಿದ್ದಾರೆ.

 ಆಯುಕ್ತರು ಸ್ವತ್ತಿನ ದಾಖಲೆಗಳನ್ನು ರೆವಿನ್ಯೂ ವಿಭಾಗದವರು, ಮೂಲಭೂತ ಸೌಕರ್ಯಗಳ ಮಾಹಿತಿಯನ್ನು ಇಂಜನಿಯರ್‌ಗಳು, ಘನತ್ಯಾಜ್ಯ ವಸ್ತು ವಿಲೇವಾರಿಗೆ ಸಂಬಂಧಿಸಿದ ಮಾಹಿತಿಗಳನ್ನು ಪರಿಸರ ವಿಭಾಗದವರು  ಹಾಗೂ ಪಾಲಿಕೆಯಲ್ಲಿನ ಪ್ರತಿಯೊಬ್ಬ ಅಧಿಕಾರಿ, ಇಂಜನಿಯರ್ ಮತ್ತು ನೌಕರರು ಸಹ ಅವರವರು ಕಾರ್ಯನಿರ್ವಹಿಸುವ ಮಾಹಿತಿಗಳನ್ನು  ಅಫ್‌ಡೇಟ್ ಮಾಡಲು ಸೂಚನೆ ನೀಡಿದರು.

  ಇನ್ನೊಂದು ತಮಾಷೆಯೆಂದರೆ ಕೇಂದ್ರ ಸರ್ಕಾರ ನಡೆಸಿರುವ ಜಿಐಎಸ್ ಸಮೀಕ್ಷೆ, ತುಮಕೂರು ಸ್ಮಾರ್ಟ್ ಸಿಟಿ ನಡೆಸಿರುವ ಜಿಐಎಸ್ ಸಮೀಕ್ಷೆ ಮತ್ತು ಟೂಡಾದವರು ನಡೆಸುತ್ತಿರುವ ಜಿಐಎಸ್ ಆಧಾರಿತ ಸಮೀಕ್ಷೆಗಳ ಮೂರು ಎಂಓಯುಗಳನ್ನು ಯಾರಾದರೂ ಗಮನಿಸಿದ್ದೀರಾ ಎಂದು ಕೇಳಿದಾಗ ಒಬ್ಬರು ಸಹ ಉತ್ತರಿಸಲು ಸಾಧ್ಯಾಗಲಿಲ್ಲ, ಹೋಗಲಿ ಇವೆಲ್ಲಾ ಸರ್ಕಾರದ ಗಮನಕ್ಕೆ ಇದೆಯೇ ಎಂದರು ಉತ್ತರವಿಲ್ಲ, ನಂತರ ಸರ್ಕಾರದ ಹಂತದಲ್ಲಿನ ಅಧಿಕಾರಿಗಳಿಗೆ ಆಯುಕ್ತರು ಕೇಳಿದಾಗ ಇದೇ ಕೆಲಸ ಮಾಡಲು ನಾವು ಸಹ ಮತ್ತೊಂದು ಟೆಂಡರ್ ಕರೆದಿದ್ದೇವೆ ಎಂದು ತಿಳಿಸಿದ್ದು ಎಲ್ಲರೂ ನಗುವಂತೆ ಮಾಡಿತು. ಆಯುಕ್ತರು ಮೂರು ಎಂಓಯುಗಳ ಪ್ರತಿಯನ್ನು ಪಡೆದು ಜೆರಾಕ್ಸ್ ಮಾಡಿಸಿಕೊಂಡು ಗಮನಹರಿಸುವುದಾಗಿ ತಿಳಿಸಿದರು.

 ಮುಂದಿನ ಸಭೆಗೆ ಈ ಮೂರು ಸಂಸ್ಥೆಗಳ ಸಲಹಾಗಾರರ ಸಂಸ್ಥೆಗಳ ಪ್ರತಿನಿಧಿಗಳು, ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಪ್ರತಿನಿಧಿ ಮತ್ತು ಎನ್‌ಐಸಿ ಪ್ರತಿನಿಧಿಗಳನ್ನು ಆಹ್ವಾನಿಸಿ ಯಾರು ಯಾರು ಏನೇನು ಮಾಡಬೇಕು ಎಂಬ ಬಗ್ಗೆ ವರದಿ ಸಂಗ್ರಹಿಸುವುದಾಗಿ ಪ್ರಕಟಿಸಿದರು.

  ಜಿಲ್ಲಾಧಿಕಾರಿಗಳಾದ ಶ್ರೀ ರಾಕೇಶ್‌ಕುಮಾರ್‌ರವರು ಸೂಚಿಸಿದ ಸಲಹೆಯಂತೆ ಸಭೆಗೆ ಭಾಗವಹಿಸಿದ್ದ ಕುಂದರನಹಳ್ಳಿ ರಮೇಶ್‌ರವರು, ತುಮಕೂರು ಜಿಲ್ಲಾ ದಿಶಾ ಸಮಿತಿ ಸದಸ್ಯರು ಮತ್ತು ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸದಸ್ಯನಾದ ನಾನು ಕೇಳುವ ಮಾಹಿತಿಗಳಿಗೆ ಯಾವ ಅಧಿಕಾರಿ ಏನು ಉತ್ತರ ಹೇಳಿದರು, ಅದಕ್ಕೆ ಪ್ರತಿಯಾಗಿ ಆಯುಕ್ತರು ಸೂಚಿಸುವ ಸಲಹೆಗಳನ್ನು ಸಭೆ ನಡವಳಿಕೆ ಮಾಡಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ತಿಳಿಸಿದ್ದರಿಂದ ಅದೇ ರೀತಿ ಪ್ರತಿಯೊಂದು ಅಂಶಗಳ ಬಗ್ಗೆ ದಾಖಲಿಸಲು ಸೂಚಿಸಿದರು.

 ಕೇಂದ್ರ ಸರ್ಕಾರದಿಂದ ತುಮಕೂರು ಜಿಲ್ಲೆಯಲ್ಲಿ ನಡೆಯುವ ಪ್ರತಿಯೊಂದು ಯೋಜನೆಗಳ ಮಾಹಿತಿ ಪಡೆಯಲು ದಿಶಾ ಸಮಿತಿಗೆ ಅಧಿಕಾರವಿದೆ, ಪ್ರಧಾನ ಮಂತ್ರಿಯವರಾದ ಶ್ರೀ ನರೇಂದರಮೋದಿಯವರು ಘೋಶಿಸಿರುವ ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿ ಯೋಜನೆ, ಅಮೃತ್ ಯೋಜನೆ ಮತ್ತು ನಗರಗಳಿಗೆ ಸಂಭಂಧಿಸಿದ ಎಲ್ಲಾ ಮಾಹಿತಿ ಐಸಿಸಿಯಲ್ಲಿ ಒಂದೇ ಕಡೇ ಲಭ್ಯವಾಗ ಬೇಕು.  

 ಎಂಓಯು ಪ್ರತಿಯಲ್ಲಿರುವ ಅಂಶಗಳನ್ನು ಸಹ ತೆಗೆದು ಪ್ರದರ್ಶನ ಮಾಡಿದ ದಿಶಾ ಸಮಿತಿ ಸದಸ್ಯರು ಭಾರತ ದೇಶದಲ್ಲಿಯೇ ಅತ್ಯುತ್ತಮವಾದ ಈ ಯೋಜನೆ ಜಾರಿಗೊಳಿಸ ಬೇಕಾದಲ್ಲಿ ಪ್ರತಿಯೊಬ್ಬರೂ ಶ್ರಮಿಸಲೇ ಬೇಕು ಇದು ಕೇಂದ್ರ ಮತ್ತು ರಾಜ್ಯಸರ್ಕಾರಗಳ ಆದೇಶವೂ ಆಗಿದೆ ಎಂದರು.

 ಪಾಲಿಕೆ ಆಯುಕ್ತೆಯವರು ನಾನು ರಾಜ್ಯಮಟ್ಟದ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಸುತ್ತೋಲೆಗಳ ಮಾಹಿತಿ ಇದೆ, ಯಾವುದೇ ವಿಭಾಗದ ಯೋಜನೆಗಳಾಗಲಿ ಮುಂದಿನ  ಆರು ತಿಂಗಳೊಳಗೆ ಬೆರಳ ತುದಿಯಲ್ಲಿ ಡಿಜಿಟಲ್ ಮಾಹಿತಿ ಒಂದೇ ಲಭ್ಯವಾಗುವಂತೆ ಮಾಡಲೇ ಬೇಕು ಆದ್ದರಿಂದ ಪ್ರತಿ ಶನಿವಾರವೂ ಜಿಐಸ್ ಸಭೆ ನಡೆಸಿ ಪಾಲಿಕೆಯ ಪ್ರಾಪರ್ಟಿ ರಿಜಿಸ್ಟಾರ್ ಅಫ್ ಡೇಟ್ ಮಾಡುವುದಾಗಿ ತಿಳಿಸಿದರು.

 ಜೊತೆಗೆ ಹಿರಿಯ ಅಧಿಕಾರಿಗಳು, Minister,District Minister, ಮೇಯರ್, ಸಂಸದರು, ಶಾಸಕರು ಮತ್ತು ಜಿಲ್ಲಾಧಿಕಾರಿಯವರು ನನಗೆ ಈಗಾಗಲೇ ಸೂಚಿಸಿದ್ದಾರೆ, ಅವರ ಸಲಹೆಗಳನ್ನು ಜಾರಿ ಮಾಡುವುದು ನನ್ನ ಕರ್ತವ್ಯವೂ ಆಗಿದೆ, ತುಮಕೂರು ನಗರದ ಯಾವುದೇ ವ್ಯಕ್ತಿಯಾಗಲಿ, ಸಂಘ ಸಂಸ್ಥೆಗಳಾಗಲಿ ನೀಡುವ ಸಲಹೆಗಳನ್ನು ಪಡೆದು ಕೊಂಡು ಮಾದರಿ ಯೋಜನೆ ರೂಪಿಸುವುದಾಗಿ ತುಮಕೂರು ಸ್ಮಾರ್ಟ್ ಸಿಟಿ ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ದಿನಾಂಕ:25.07.2020 ರಂದು ಜಿಐಎಸ್ ಬಗ್ಗೆ ನಡೆದ ವಿವರವಾದ ಚರ್ಚೆಯಲ್ಲಿ ಘೋಶಿಸಿದರು.