16th September 2024
Share

TUMAKURU:SHAKTHIPEETA FOUNDATION

  ದಿನಾಂಕ:31.07.2020 ನೇ ಶುಕ್ರವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಗೆ ತುಮಕೂರು ನಗರದ, 1 ನೇಹಂತದ ಒಳಚರಂಡಿ, ಎರಡನೇ ಹಂತದ ಒಳಚರಂಡಿ, ಒಳಚರಂಡಿ ಮಿಸ್ಸಿಂಗ್ ಲಿಂಕ್ಸ್, ಮಳೆ ನೀರಿನ ಬೃಹತ್ ಚರಂಡಿಗಳು, ರಸ್ತೆ ಬದಿಯ ಚರಂಡಿಗಳು, ಚರಂಡಿವಾರು ಯಾವ ಚೈನೇಜ್‌ನಲ್ಲಿ ಎಷ್ಟೆಷ್ಟು ಕುಸೆಕ್ಸ್ ನೀರು ಹರಿಯಲಿದೆ. ಸೇತುವೆಗಳು, ಸೇತುವೆಗಳ ಡಿಸ್ಚಾರ್‍ಜ್, ಎಲಿವೇಷನ್ ಮಾಹಿತಿ( ಹೇಮಾವತಿ/ಎತ್ತಿನಹೊಳೆ ಕಾಲುವೆ(ಟೂಡಾ ಎಲ್.ಪಿ.ಎ ಪ್ರಕಾರ), ನಗರದ ಸತ್ತು ಹೋಗಿರುವ ಹಾಗೂ ಬದುಕಿರುವ ಜಲಸಂಗ್ರಹಾಗಾರಗಳ ಮತ್ತು ಮಳೆ ಬಿದ್ದಾಗ ಚರಂಡಿ ನೀರಿನಿಂದ ಎಲ್ಲೆಲ್ಲಿ ಯಾವಕಾರಣದಿಂದ ತೊಂದರೆ ಆಗಲಿದೆ,  ಎಂಬ ಬ್ಲಾಕ್‌ಸ್ಪಾಟ್‌ಗಳ ಕರಾರು ವಕ್ಕಾದ ಜಿಐಎಸ್ ಆಧಾರಿತ ನಕ್ಷೆಯೊಂದಿಗೆ ವಿವರವಾದ ಮಾಹಿತಿಗಳನ್ನು ಅಫ್‌ಡೇಟ್ ಮಾಡಿ ಮಾಲೀಕತ್ವದ ಎಲ್ಲಾ ಇಲಾಖೆಗಳ ಮುಖ್ಯಸ್ಥರು  ಮಾಹಿತಿಯೊಂದಿಗೆ ಸಭೆಗೆ ಬನ್ನಿ ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

 ಪ್ರಾಯೋಗಿಕವಾಗಿ ನಗರದ ಸೋಮೇಶ್ವರ ಪುರಂ ಬೃಹತ್ ಚರಂಡಿಯ ಮಾಹಿತಿಯನ್ನು ಅಫ್ ಲೋಡ್ ಮಾಡಿ ನಂತರ ಉಳಿದ ಎಲ್ಲಾಭಾಗಗಳಿಗೂ ಅದೇ ರೀತಿ ಅಫ್‌ಲೋಡ್ ಮಾಡಲು ಕ್ರಮಕೈಗೊಳ್ಳಲು ಸಲಹೆ ನೀಡಿದ್ದಾರೆ.

ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಮತ್ತು ತುಮಕೂರು ಜಿಲ್ಲಾ ದಿಶಾ ಸಮಿತಿಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್‌ರವರ ಪ್ರಕಾರ

  1. ತುಮಕೂರು ನಗರದ ಅಮಾನಿಕೆರೆ ಯೋಜನೆಯ ಅಭಿವೃದ್ಧಿ ಮಾಡುವಾಗ ಟೂಡಾ  ಮೊದಲ ಸಲ ಮತ್ತು ಎರಡನೇ ಸಲ ತುಮಕೂರು ಸ್ಮಾರ್ಟ್ ಸಿಟಿ ಕ್ಯಾಚ್‌ಮೆಂಟ್ ಏರಿಯಾದ  ಎಲ್ಲಾ ಮಳೆನೀರಿನ ರಾಜಕಾಲುವೆಗಳ ಮಾಹಿತಿ ಮತ್ತು ಅಮಾನಿಕೆರೆ ಕೋಡಿಹಳ್ಳದ ಮಾಹಿತಿಗಳನ್ನು ಸಂಗ್ರಹ ಮಾಡಲಾಗಿದೆ. ಟೂಡಾ ಅಮಾನಿಕೆರೆ ಹಿಂಬಾಗ ಲೇ ಔಟ್ ಮಾಡಲು ಉದ್ದೇಶಿದ್ದಾಗ ಕೋಡಿಹಳ್ಳದ ಮಾಹಿತಿಯನ್ನು ಲೇಔಟ್ ನಲ್ಲಿ ಗುತಿಸಲಾಗಿದೆ, ಈ ಕಡತ ಟೂಡಾದ ಬಳಿ ಇದೆ.
  2. ತುಮಕೂರು ಸ್ಮಾರ್ಟ್ ಸಿಟಿವತಿಯಿಂದ ಎರಡು ಭಾರಿ ಅಮಾನಿಕೆರೆ ರಾಜಕಾಲುವೆಗಳ ಒತ್ತುವರಿ ಸಮೀಕ್ಷೆ ಮಾಡಿ ಗಡಿ ಗುರುತಿಸಿ ಅಭಿವೃದ್ಧಿ ಪಡಿಸಲಾಗಿದೆ. ಪ್ರತಿಯೊಂದು ರಾಜಕಾಲುವೆ ಎಷ್ಟು ಕಿಮೀ ಉದ್ದವಿದೆ, ಕರಾಬು ಪ್ರಕಾರ ಎಷ್ಟು ಗುಂಟೆ ವಿಸ್ಥೀರ್ಣ ಜಮೀನು ಇದೆ. ಇದರಲ್ಲಿ ಎಷ್ಟು ವಿಸ್ಥೀರ್ಣ ಒತ್ತುವರಿ ಆಗಿದೆ ಅಥವಾ ಒತ್ತುವರಿ ಆಗಿಲ್ಲ ಎಂಬ ಮಾಹಿತಿ ಇರಲೇ ಬೇಕು.
  3. ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಶಾಸಕರಾದ ಮೇಲೆ ಮೊಟ್ಟಮೊದಲ ಸ್ಥಳ ಪರೀಶೀಲನೆ ಮಾಡಿದ್ದು ನಗರದ ಸೋಮೇಶ್ವರ ಪುರಂ ಬೃಹತ್ ಚರಂಡಿಯ ಯೋಜನೆ ಅಂದೇ ಸೂಚನೆ ನೀಡಿ ಕಾಮಗಾರಿ ಕೈಗೊಳ್ಳಲು ಸೂಚಿಸಿದ್ದರು ಈ ಸೂಚನೆ ಮೇಲೆ ಕೈಗೊಂಡಿರುವ ಮಾಹಿತಿ.
  4. ತುಮಕೂರು ಮಹಾನಗರ ಪಾಲಿಕೆ ಅಮೃತ್ ಯೋಜನೆಯಡಿ ಚರಂಡಿಗಳ ಕಾಮಗಾರಿ ಕೈಗೊಳ್ಳಲು  ತುಮಕೂರಿನ ಖಾಸಗಿ ಸಲಹಾಗಾರರಾದ ಶ್ರೀ ಶಶಿಯವರಿಗೆ ನೀಡಿ ವರದಿ ತಯಾರಿಸಿಲಾಗಿದೆ.  ಈ ಬಗ್ಗೆ ಇಇ ಶ್ರೀಮತಿ ಆಶಾರವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
  5. ಈಗಾಗಲೇ ನಗರದ ಎಲ್ಲಾ ಜಲಸಂಗ್ರಹಾಗಾರಗಳ ಮತ್ತು ಚರಂಡಿಗಳ ಸಮೀಕ್ಷೆಯನ್ನು ಕಂದಾಯ ಇಲಾಖೆಯಿಂದ ಮಾಡಿಸಿ ಒತ್ತುವರಿ ಗುರುತಿಸಲಾಗಿದೆ ಮತ್ತು ಒತ್ತುವರಿ ತೆರವುಗೊಳಿಸಲು ಒತ್ತುವರಿ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರಾದ ತುಮಕೂರು ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಲಾಗಿರಬಹುದು.
  6. ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಈಗಾಗಲೇ ತುಮಕೂರು ನಗರದ ಜಿಐಎಸ್ ಆಧಾರಿತ ಬೇಸ್‌ಮ್ಯಾಪ್ ಮಾಡಿ ಟೂಡಾಕ್ಕೆ ನೀಡಿದೆ. ಇದರಲ್ಲಿ ಎಲ್ಲಾ ರೀತಿಯ ಚರಂಡಿಗಳ ಮತ್ತು ಜಲಸಂಗ್ರಹಾಗಾರಗಳ ಜಿಐಎಸ್ ಲೇಯರ್ ಗುರುತು ಮಾಡಿ, ನಾವು ಮಾಡಿರುವುದು ಸರಿಯಾಗಿದೆಯೇ ಎಂಬ ಮಾಹಿತಿ ನೀಡಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಜಲಸಂಗ್ರಹಾಗಾರಗಳ ಮಾಲೀಕತ್ವದ ಎಲ್ಲಾ ಇಲಾಖೆಗಳ ಮುಖಾಂತರ ಜಿಐಎಸ್ ಆಧಾರಿತ ಮಾಹಿತಿ ಸಂಗ್ರಹಿಲೇಬೇಕಿದೆ.
  7. ತುಮಕೂರು ಸ್ಮಾರ್ಟ್ ಸಿಟಿ ಮಾಡಿಸಿರುವ ಡ್ರೋನ್ ಸಮೀಕ್ಷೆಯಲ್ಲೂ ಈ ಮಾಹಿತಿಗಳ ಜಿಐಎಸ್ ಲೇಯರ್ ಮಾಡಲಾಗಿದೆ. ಇದರಲ್ಲಿ ಒತ್ತುವರಿ ಮಾಹಿತಿಯನ್ನು ಕರಾರುವಕ್ಕಾಗಿ ನೀಡಲು ಎಂಓಯು ನಲ್ಲಿದೆ.
  8. ಜಲಸಂಗ್ರಹಾರಗಳ ಮತ್ತು ರಾಜಕಾಲುವೆಗಳ ಅಭಿವೃದ್ಧಿ ಮಾಡುವಾಗ ಹದ್ದುಬಸ್ತು ನಿಗದಿ ಪಡಿಸದೇ ಕಾಮಗಾರಿ ಮಾಡಬಾರದು.  ಈಗಾಗಲೇ ಕೋಟಿಗಟ್ಟಲೇ ಹಣ ಸುರಿದು ಗುತ್ತಿಗೆದಾರರು ಬೇಕಾದ ಕಡೆ ಯೋಜನೆ ಕೈಗೊಳ್ಳಲಾಗಿದೆ. ಈ ಕೆಲಸ ಮಾಡಿಸಿರುವ ಅವಧಿಯ ಇಂಜಿನಿಯರ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲೇ ಬೇಕು, ಇದಕ್ಕಿಂತ ದೇಶ ದ್ರೋಹ ಬೇರೊಂದಿಲ್ಲ.
  9. ರಾಜಕಾಲುವೆಗಳ ಒತ್ತುವರಿ ಗುರುತಿಸುವಾಗ ಈ ಕೆಳಕಂಡ ಮಾಹಿತಿ ಅಗತ್ಯವಾಗಿದೆ, ಮೂಲ ವಿಲೇಜ್ ಮ್ಯಾಪ್, ಪರೀಷ್ಕೃತ ವಿಲೇಜ್ ಮ್ಯಾಪ್, ದಾಖಲೆಗಳಲ್ಲಿ ಕರಾಬು ಮಾಹಿತಿ, ಗೂಗಲ್ ಇಮೇಜ್,  ಈಗಾಗಲೇ ರೆವಿನ್ಯೂ ಇಲಾಖೆ ಸಮೀಕ್ಷೆ ಹದ್ದುಬಸ್ತು ನಿಗದಿ ಮಾಡಿರುವ ನಕ್ಷೆ ಮತ್ತು ತುಮಕೂರು ಸ್ಮಾರ್ಟ್ ಸಿಟಿ ಮಾಡಿಸಿರುವ ಡ್ರೋನ್ ಸಮೀಕ್ಷೆ ಎಲ್ಲವುಗಳನ್ನೂ ಲೇಯರ್ ಮಾಡಿ ಒಂದಕ್ಕೊಂದು ಓವರ್ ಲ್ಯಾಪ್ ಮಾಡಿ ಅಂತಿಮ ನಕ್ಷೆ ಮತ್ತು ವರದಿ ತಯಾರಿಸಬೇಕು.

   ಆದ್ದರಿಂದ ಒಬ್ಬರ ಮೇಲೆ ಒಬ್ಬರು ತೋರದಂತೆ ಕ್ಲಿಕ್ ಮಾಡಿದ ತಕ್ಷಣ ಮಾಹಿತಿ ಕಾಣುವ ರೀತಿಯಲ್ಲಿ ಸಭೆಗೆ ಹಾಜರಾಗಿ, ಏನೇ ಕಾರಣಗಳಿದ್ದರು ಲಿಖಿತವಾಗಿರಲಿ ಸಭೆಗೆ ಮುಂಚಿನ ದಿವಸ ಸದಸ್ಯರಿಗೆ ಎಲ್ಲಾ ಮಾಹಿತಿ ನೀಡಲು ಸೂಚಿಸಿದ್ದಾರೆ. ಚರಂಡಿಗಳ ಲೆವೆಲ್ ಮತ್ತು ಚೈನೇಜ್ ಕೇಳಿದ ಕಡೆ ತೋರಿಸಲು ನಮೂದಿಸಿ, ಕಳೆದ ಸಭೆಯಲ್ಲಿ ಮಾಹಿತಿ ಕೇಳಿದಾಗ ಯಾರ ಬಳಿಯೂ ಉತ್ತರವಿರಲಿಲ್ಲ ಎಂಬುದನ್ನು ನೆನಪಿಸಿದ್ದಾರೆ.