22nd December 2024
Share

TUMAKURU:SHAKTHIPEETA FOUNDATION

 ತುಮಕೂರು ನಗರಕ್ಕೆ ಅಮೃತ್ ಸಿಟಿ ಮತ್ತು ಸ್ಮಾರ್ಟ್ ಸಿಟಿ ಎರಡು ಯೋಜನೆಗಳು ಮಂಜೂರಾಗಿವೆ, ಇಡೀ ನಗರವನ್ನು ಜಿಐಎಸ್ ಆಧಾರಿತ ಲೇಯರ್ ಮಾಡಲು ಕೋಟಿಗಟ್ಟಲೆ ಹಣ ವ್ಯಯ ಮಾಡಲಾಗುತ್ತಿದೆ. ಇದೂವರೆಗೂ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಉದ್ದ ಎಷ್ಟು ಎಂದು ನಿಖರವಾಗಿ ಹೇಳುವವರು ಯಾರು ಇಲ್ಲ.

 ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ರಸ್ತೆಗಳ ಬಗ್ಗೆ ಒಂದು ಸಭೆ ಮಾಡಿ, ನಗರದಲ್ಲಿ ಯಾವ ಇಲಾಖೆ ಮಾಲೀಕತ್ವದಲ್ಲಿ, ಯಾವ ವಿಧದ ರಸ್ತೆ, ಎಷ್ಟೆಷ್ಟು ಕೀಮೀ ಇದೆ ಜಿಐಎಸ್ ನಕ್ಷೆ ಸಹಿತ ತಿಳಿಸಿ ಎಂದು ಸೂಚನೆ ನೀಡಿದ್ದರು ಇದೂವರೆಗೂ ಮಾಹಿತಿ ಇಲ್ಲ.

 ತುಮಕೂರು ಸ್ಮಾರ್ಟ್ ಸಿಟಿ ಪ್ರಸ್ತಾವನೆಯ ಪ್ರಕಾರ 575ಕೀಮೀ ರಸ್ತೆ ಇದೆ. ತುಮಕೂರು ಮಹಾನಗರ ಪಾಲಿಕೆಯ ದಾಖಲೆಗಳ ಪ್ರಕಾರ 630 ಕೀಮೀ ರಸ್ತೆ ಇದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತುಮಕೂರು ನಗರದ 24/7 ಕುಡಿಯುವ ನೀರಿನ ಯೋಜನೆ ರೂಪಿಸುವಾಗ 819 ಕೀಮೀ ರಸ್ತೆ ಇದೆ. ತುಮಕೂರು ಸ್ಮಾರ್ಟ್ ಸಿಟಿ ಡ್ರೋನ್ ಸಮೀಕ್ಷೆ ಪ್ರಕಾರ 860 ಕೀಮೀ ಇರಬಹುದು ಎಂಬ ಅಂದಾಜು ಇದೆ.

ರಸ್ತೆಗಳ ಉದ್ದದ ಅಳತೆ ಇಲ್ಲದೆ ಕೆಳಕಂಡ ಯೋಜನೆಗಳನ್ನು ಮಾಡಲು ಸಾಧ್ಯವೇ ಇಲ್ಲ?

  1. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಗರದ ಒಂದನೇ ಹಂತದ ಯುಜಿಡಿ, ಎರಡನೇ ಹಂತದ ಯುಜಿಡಿ ಮತ್ತು ಮಿಸ್ಸಿಂಗ್ ಲಿಂಕ್ ಯುಜಿಡಿ ಮಾಡಿ ಶೇ 100 ರಷ್ಟು ಜಾರಿಗೊಳಿಸಬೇಕಾದರೆ  ರಸ್ತೆಯ ಉದ್ದದ ಮಾಹಿತಿ ಇರಲೇಬೇಕಲ್ಲವೆ?
  2. ಅಮೃತ್ ಸಿಟಿ ಯೋಜನೆಯ ಪ್ರಕಾರ ತುಮಕೂರು ನಗರದ ಶೇ100 ರಷ್ಟು ಮನೆಗಳಿಗೆ ಕುಡಿಯುವ ನೀರು ಒದಗಿಸಬೇಕು, ಈ ಯೋಜನೆ ರೂಪಿಸಲು ನಗರದ ಪ್ರತಿಯೊಂದು ರಸ್ತೆಯ ಉದ್ದದ ಮಾಹಿತಿ ಇರಲೇಬೇಕಲ್ಲವೆ?
  3. ತುಮಕೂರು ಸ್ಮಾರ್ಟ್ ಸಿಟಿ ನಗರದ ತುಂಬ ಲೈಟ್‌ಗಳನ್ನು ಹಾಕಲು ಕೋಟಿಗಟ್ಟಲೆ ಹಣ ವ್ಯಯಮಾಡಿದೆ, ಇವರು ಲೈಟ್ ಮತ್ತು ಕಂಬ ಹಾಕುವಾಗ ನಗರದ ಪ್ರತಿಯೊಂದು ರಸ್ತೆವಾರು ಸಮೀಕ್ಷೆ ಮಾಡಿ, ಯಾವ ರಸ್ತೆಯಲ್ಲಿ ಯಾವ ಕಂಬ ಸರಿಯಾಗಿದೆ, ಎಷ್ಟು ಕಂಬ ಮತ್ತು ಲೈಟ್ ಹಾಕಬೇಕು ಎಂಬ ಮಾಹಿತಿ ಸಂಗ್ರಹಿಸಲು ರಸ್ತೆಯ ಉದ್ದದ ಮಾಹಿತಿ ಇರಲೇಬೇಕಲ್ಲವೆ?
  4. ತುಮಕೂರು ನಗರಾಭಿವೃದ್ಧಿ ಪ್ರಕಾರ ಮಾಸ್ಟರ್ ಪ್ಲಾನ್ ಮಾಡುವಾಗ ನಗರದ ರಸ್ತೆಗಳ ಉದ್ದ ಮತ್ತು ಅಗಲದ ಮಾಹಿತಿ ಲೆಕ್ಕ ಹಾಕಿ ಭೂ ಬಳಕೆಯ ಶೇಕಡವಾರು ಲೆಕ್ಕಹಾಕಬೇಕಾದರೆ ಇವರ ಬಳಿ ರಸ್ತೆಯ ಉದ್ದದ ಮಾಹಿತಿ ಇರಲೇಬೇಕಲ್ಲವೆ?
  5. ಪಾಲಿಕೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ಎಷ್ಟೆಷ್ಟು ಕೀಮೀ ರಸ್ತೆ ಯಾರ್‍ಯಾರಿಗೆ ಎಂದು ಹಂಚಿಕೆ/ವಿಭಾಗ ಮಾಡಬೇಕಾದರೆ ರಸ್ತೆಯ ಉದ್ದದ ಮಾಹಿತಿ ಇರಲೇಬೇಕಲ್ಲವೆ?
  6. ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಸ್ತು ಸಂಗ್ರಹ ಆಟೋಗಳು ಸಂಚರಿಸಲು ಎಷ್ಟೆಷ್ಟು ಕೀಮೀ ರಸ್ತೆ ಯಾರ್‍ಯಾರಿಗೆ ಎಂದು ಹಂಚಿಕೆ/ವಿಭಾಗ ಮಾಡಬೇಕಾದರೆ ರಸ್ತೆಯ ಉದ್ದದ ಮಾಹಿತಿ ಇರಲೇಬೇಕಲ್ಲವೆ?
  7. ಪಾಲಿಕೆ ವ್ಯಾಪ್ತಿಯಲ್ಲಿ ವೃಕ್ಷಪ್ರಾಧಿಕಾರ ಗಿಡಗಳ ಡಿಜಿಟಲ್ ಗಣತಿ ಮಾಡಬೇಕಾದರೆ, ಗಿಡ ಹಾಕಬೇಕಾದರೆ ಎಷ್ಟೆಷ್ಟು ಕೀಮೀ ರಸ್ತೆಯಲ್ಲಿ ಯಾವ ಜಾತಿಯ ಮರಗಳು ಇವೆ, ಯಾವ ರಸ್ತೆಯಲ್ಲಿ ಯಾವ ಗಿಡಹಾಕಬೇಕು ಎಂಬ ಮಾಹಿತಿ ಸಂಗ್ರಹಬೇಕಾದರೆ ರಸ್ತೆಯ ಉದ್ದದ ಮಾಹಿತಿ ಇರಲೇಬೇಕಲ್ಲವೆ?
  8. ಪಾಲಿಕೆ ವ್ಯಾಪ್ತಿಯಲ್ಲಿ ವಾಟರ್ ಮ್ಯಾನ್‌ಗಳು ನೀರು ಬಿಡಲು ಎಷ್ಟೆಷ್ಟು ಕೀಮೀ ರಸ್ತೆ ಯಾರ್‍ಯಾರಿಗೆ ಎಂದು ಹಂಚಿಕೆ/ವಿಭಾಗ ಮಾಡಬೇಕಾದರೆ ರಸ್ತೆಯ ಉದ್ದದ ಮಾಹಿತಿ ಇರಲೇಬೇಕಲ್ಲವೆ?
  9. ಪಾಲಿಕೆ ವ್ಯಾಪ್ತಿಯಲ್ಲಿ ಆಶಾಕಾರ್ಯಕರ್ತೆಯರಿಗೆ ಎಷ್ಟೆಷ್ಟು ಕೀಮೀ ರಸ್ತೆ ಯಾರ್‍ಯಾರಿಗೆ ಎಂದು ಹಂಚಿಕೆ/ವಿಭಾಗ ಮಾಡಬೇಕಾದರೆ ರಸ್ತೆಯ ಉದ್ದದ ಮಾಹಿತಿ ಇರಲೇಬೇಕಲ್ಲವೆ?
  10. ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಪರ್ಟಿ ಸಮೀಕ್ಷೆ ಮಾಡುವಾಗ ಯಾವ ರಸ್ತೆಯಲ್ಲಿ ಎಷ್ಟೆಷ್ಟು ಪ್ರಾಪರ್ಟಿ ಇದೆ ಎಂದು ಗುರುತಿಸುವಾಗ ರಸ್ತೆಯ ಉದ್ದದ ಮಾಹಿತಿ ಇರಲೇಬೇಕಲ್ಲವೆ?
  11. ಪೋಲೀಸ್ ಬೀಟ್ ಎಷ್ಟೆಷ್ಟು ಕೀಮೀ ರಸ್ತೆ ಯಾರ್‍ಯಾರಿಗೆ ಎಂದು ಹಂಚಿಕೆ/ವಿಭಾಗ ಮಾಡಬೇಕಾದರೆ ರಸ್ತೆಯ ಉದ್ದದ ಮಾಹಿತಿ ಇರಲೇಬೇಕಲ್ಲವೆ?
  12. ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಟೂಡಾಕ್ಕೆ ಜಿಐಎಸ್ ಆಧಾರಿತ ಬೇಸ್ ಮ್ಯಾಪ್ ಮಾಡಿ ನೀಡಿದೆ ಇದರಲ್ಲಿ  ರಸ್ತೆಯ ಉದ್ದದ ಮಾಹಿತಿ ಇರಲೇಬೇಕಲ್ಲವೆ?
  13. ತುಮಕೂರು ಸ್ಮಾರ್ಟ್ ಸಿಟಿ ಡ್ರೋನ್ ಸಮೀಕ್ಷೆ ಮಾಡಿದೆ ಇದರಲ್ಲಿ ಕರಾರುವಕ್ಕಾದ ರಸ್ತೆಯ ಉದ್ದದ ಮಾಹಿತಿ ಇರಲೇಬೇಕಲ್ಲವೆ?
  14. ನಗರದಲ್ಲಿ ವೋಟರ್ ಲಿಸ್ಟ್ ಮಾಡುವಾಗ ಬೂತ್‌ವಾರು ಒಂದು ನಕ್ಷೆಯನ್ನು ಮಾಡಲಾಗುತ್ತಿದೆ, ಇದರಲ್ಲಿ ನಗರದ ಪ್ರತಿಯೊಂದು ರಸ್ತೆಯ ನಕ್ಷೆ ಇರುತ್ತದೆ ಇದರಲ್ಲಿ ರಸ್ತೆಯ ಉದ್ದದ ಮಾಹಿತಿ ಇರಲೇಬೇಕಲ್ಲವೆ?
  15. ಪಾಲಿಕೆ ಎಸ್ಟೆಟ್ ಆಫೀಸರ್ ಅಧಿಕೃತವಾಗಿ ರಸ್ತೆಯ ದಾಖಲೆ ಘೋಷಣೆ ಮಾಡಬೇಕು ಇದರಲ್ಲಿ ರಸ್ತೆಯ ಉದ್ದದ ಮಾಹಿತಿ ಇರಲೇಬೇಕಲ್ಲವೆ?
  16. ಪಾಲಿಕೆಯ ವಾರ್ಡ್‌ವಾರು ಇಂಜಿನಿಯರ್‌ಗಳು ಅವರವರ ವ್ಯಾಪ್ತಿಯಲ್ಲಿ ಎಷ್ಟೆಷ್ಟು ಉದ್ದದ ರಸ್ತೆ ಇದೆ ಎಂಬ ಮಾಹಿತಿ ಇರಲೇಬೇಕಲ್ಲವೆ?
  17. ಪಾಲಿಕೆ ವ್ಯಾಪ್ತಿಯಲ್ಲಿ ಎಷೆಷ್ಟು ಉದ್ದದ, ಯಾವ ವಿಧವಾದ ಚರಂಡಿಗಳು ಇವೆ ಎಂದು ದಾಖಲೆ ಮಾಡಬೇಕಾದರೇ ರಸ್ತೆಯ ಉದ್ದದ ಮಾಹಿತಿ ಇರಲೇಬೇಕಲ್ಲವೆ?
  18. ಪಾಲಿಕೆ ವ್ಯಾಪ್ತಿಯಲ್ಲಿ ಯಾವ ವಿಧವಾದ ಚರಂಡಿಗಳಲ್ಲಿ ಕೊಳಚೆ ನೀರು ನಿಂತು ರೋಗಗಳು ಬರುತ್ತವೆ ಎಂದು ದಾಖಲೆ ಮಾಬೇಕಾದರೆ ಪರಿಸರ ವಿಭಾಗದವರ ಬಳಿ  ರಸ್ತೆಯ ಉದ್ದದ ಮಾಹಿತಿ ಇರಲೇಬೇಕಲ್ಲವೆ?

   ಇನ್ನೂ ಅನೇಕ ಇಲಾಖೆಯ ಯೋಜನೆಗಳನ್ನು ಮಾಡುವಾಗ ರಸ್ತೆಯ ಉದ್ದದ ಅವಶ್ಯಕತೆ ಇರಬಹುದು, ನನಗೆ ನೆನಪಿಗೆ ಬಂದಿದ್ದು ಹಾಕಿದ್ದೇನೆ. ಇವೆಲ್ಲಾ ಯೋಜನೆಗಳನ್ನು ಮಾಡುವಾಗ ಎಷ್ಟೆಷ್ಟು ಕೀಮೀ ರಸ್ತೆ ಎಂದು ಅಂದಾಜಿಸಲೇ ಬೇಕು ಇದೆಲ್ಲವೂ ಬೋಗಸ್ ಡೇಟಾವೇ?

 ಆಯಿತು ಇಲ್ಲಿಯವರಿಗೂ ಮಾಡಿರುವುದು ಹೋಗಲಿ, ಈಗಾಲಾದರೂ ಎಲ್ಲಾ ಯೋಜನೆಗಳ ಜಿಐಎಸ್ ಲೇಯರ್ ಮಾಡಿ ಪ್ರದರ್ಶಿಸಿ?  ಇದನ್ನೂ ಕೇಳುವುದು ತಪ್ಪೇ?