TUMAKURU:SHAKTHIPEETA FOUNDATION
ಸುಮಾರು 1999 ರಿಂದ 2020 ರವರೆಗೂ ಸುಮಾರು 21 ವರ್ಷಗಳ ಕಾಲ ನನಗೆ ತುಮಕೂರು ನಗರಸಭೆ ಮತ್ತು ತುಮಕೂರು ಮಹಾನಗರ ಪಾಲಿಕೆ ನಿಕಟ ಸಂಪರ್ಕದಲ್ಲಿದ್ದೇನೆ. ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಆರಂಭವಾಗಲೂ ಪ್ರಮುಖ ಕಾರಣ ತುಮಕೂರು ನಗರದ ಉಪ್ಪಾರಹಳ್ಳಿ ಮೇಲುಸೇತುವೆ ಕಾಮಗಾರಿ ವಿಳಂಭ ಧೋರಣೆ ಎಂದರೆ ತಪ್ಪಾಗಲಾರದು.
ಅಂದು ಶ್ರೀ ಎಸ್.ಎಂ.ಕೃಷ್ಣರವರ ಕಾಲ ತುಮಕೂರಿಗೆ ಬಂಪರ್‌ಕಾಲ. ಶ್ರೀ ಸೊಗಡು ಶಿವಣ್ಣನವರು ಶಾಸಕರು, ಶ್ರೀ ಜಿ.ಎಸ್.ಬಸವರಾಜ್‌ರವರು ಲೋಕ ಸಭಾಸದಸ್ಯರು, ಶ್ರೀ ಟಿ.ಪಿ.ಮಂಜುನಾಥ್‌ರವರು ನಗರಸಭೆ ಅಧ್ಯಕ್ಷರು ಮತ್ತು ಶ್ರೀ ಚಿನ್ನಯಲ್ಲಪ್ಪ ರೆಡ್ಡಿರವರು ಟೂಡಾ ಅಧ್ಯಕ್ಷರಾಗಿದ್ದರು.
ಉಪ್ಪಾರಹಳ್ಳಿ ರೈಲ್ವೆ ಮೇಲುಸೇತುವೆ ಆಗಬೇಕು ಎಂದು ನಗರಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ್ದು ಮಾಜಿನಗರಸಭೆ ಅಧ್ಯಕ್ಷರಾದ ದಿ.ರವೀಶ್ ಮತ್ತು ಕುಟುಂಬ ಎಂಬ ಮಾಹಿತಿಯನ್ನು ನನಗೆ ನೀಡಿದ ರವೀಶ್ ರವರು ಏನಾದರೂ ಮಾಡಿ ಈ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಗುರುತರವಾದ ಜವಾಬ್ಧಾರಿಯನ್ನು ನೀಡಿದರು.
ನಗರಸಭೆಯಲ್ಲಿ ಆಯುಕ್ತರಾಗಿದ್ದ ಅಂದಿನ ಪಬ್ಲಿಕ್ ಹೀರೋ ಶ್ರೀ ಮಣಿವಣ್ಣನ್‌ರವರು ಆ ಕಾಲದಲ್ಲಿ ರೈಲ್ವೇ ಇಲಾಖೆಗೆ ಪಾವತಿಸಲು ಸುಮಾರು ರೂ 12 ಲಕ್ಷ ಸಂಗ್ರಹಿಸಿಟ್ಟುಕೊಂಡಿದ್ದರು, ರಾಜಕಾರಣದಿಂದ ಶೀಘ್ರವಾಗಿ ಚಾಲನೆ ದೊರಕಲಿಲ್ಲ. ಆ ಸಂದರ್ಭದಲ್ಲಿ ಜನರ ಧ್ವನಿಯೂ ಬೇಕು ಎಂಬ ಅನಿಸಿಕೆಯಿಂದ ಅಭಿವೃದ್ಧಿ ಯೋಜನೆಗಳಿಗಾಗಿ ಒಂದು ಸಂಸ್ಥೆಯನ್ನು ಆರಂಭಿಸಬೇಕು ಎಂಬ ಚಿಂತನೆ ನನ್ನಲ್ಲಿ ಮೂಡಿತು.
ಅದೇ ಸಂದರ್ಭದಲ್ಲಿ ಶ್ರೀ ಜಿ.ಎಸ್.ಬಸವರಾಜ್‌ರವರಿಗೆ 60 ವರ್ಷದ ಜನ್ಮ ದಿನಾಚರಾಣೆ, ಕಾಂಗ್ರೆಸ್ ಪಾರ್ಲಿಮೆಂಟ್ ಬೋರ್ಡ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಕ್ಕೆ ಸನ್ಮಾನ ಹೀಗೆ ಹಲವಾರು ಚಿಂತನೆಗಳು ಉದ್ಭವವಾದವೂ, ಆಗಿನ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ.ಜನಾರ್ಧನಪೂಜಾರಿರವರ ಬಳಿ ಕೊರಟಗೆರೆ ಮಾಜಿ ಶಾಸಕರಾದ ದಿ.ಸಿ. ವೀರಭಧ್ರಯ್ಯನವರು ಮತ್ತು ನಾನು ಹೋದಾಗ ಅವರು ನಮಗೆ ಮಂಗಳಾರತಿ ಮಾಡಿ ಬರಗಾಲದಲ್ಲಿ ಇವೆಲ್ಲಾ ಏಕೆ ಬೇಕು ಎಂದು ಅಬ್ಬರಿಸಿದ್ದರಿಂದ ಎಲ್ಲಾ ನೆನೆಗುದಿಗೆ ಬಿದ್ದವು.
ನಾನು ಮೌನವಾಗಿ ದಿನಾಂಕ:04.05.2001 ರಂದು ಶ್ರೀ ಜಿ.ಎಸ್.ಬಸವರಾಜ್‌ರವರ 60 ನೇ ಜನ್ಮದಿನದಂದು ಸದ್ದು ಗದ್ದಲವಿಲ್ಲದೆ ತುಮಕೂರು ನಗರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಲು ’ಅಭಿವೃದ್ಧಿ ರೆವೂಲ್ಯೂಷನ್ ಫೋರಂ’ ಸ್ಥಾಪನೆ ಮಾಡಿದ್ದು ಇತಿಹಾಸ.
ಈ ಮಧ್ಯೆ ತುಮಕೂರು ನಗರದ ಅಭಿವೃದ್ಧಿಗಾಗಿ ಜಿಲ್ಲಾಡಳಿತ ’ತುಮಕೂರು ಅಜೆಂಡಾ ಟಾಸ್ಕ್ ಪೋರ್ಸ್’ ಸ್ಥಾಪಿಸಲು ನಿರಂತರವಾಗಿ ಹೋರಾಟಮಾಡಿದೆ. ನನ್ನ ಜೊತೆ ಸಾವಿರಾರು ಜನ ಮತ್ತು ಹಲವಾರು ಸಂಘ ಸಂಸ್ಥೆಗಳು ಕೈಜೊಡಿಸಿದವು. ಮಾಧ್ಯಮಗಳ ಬೆಂಬಲ ನಿಜಕ್ಕೂ ಅದ್ಭುತ.
ಕೊನೆಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀ ಎಸ್.ಸುರೇಶ್‌ಕುಮಾರ್ ರವರ ಸೂಚನೆ ಮೇರೆಗೆ ’ತುಮಕೂರು ಅಜೆಂಡಾ ಟಾಸ್ಕ್ ಪೋರ್ಸ್’ ಅನ್ನು ಅಂದಿನ ಜಿಲ್ಲಾಧಿಕಾರಿ ಶ್ರೀ ಡಾ.ಸಿ.ಸೋಮಶೇಖರ್ ರವರು ರಚಿಸಿದರು, ನನ್ನನ್ನು ಸದಸ್ಯನಾಗಿ ನೇಮಕ ಮಾಡಿದರು.
ನಾನು ಮತ್ತು ದಿ.ಎಂ.ಎನ್.ಕೋಟೆನಾಭೂಷಣ್ ಇವರಿಬ್ಬರನ್ನು ಕಮಿಟಿಯ ಸದಸ್ಯತ್ವದಿಂದ ತೆಗೆದು ಹಾಕುವವರೆಗೂ ಒಂದು ಸಭೆ ಮಾಡಕೂಡದು ಎಂಬ ನಮ್ಮ ಸೊಗಡು ಪ್ರಭಾವದಿಂದಾಗಿ ಒಂದೇ ಒಂದು ಸಭೆ ನಡೆಯಲಿಲ್ಲ, ಜಿಲ್ಲಾಧಿಕಾರಿ ಸಮಿತಿ ಇಲ್ಲಿಗೆ ಕೊನೆಯಾದರೂ ಪರವಾಗಿಲ್ಲ ಕುಂದರನಹಳ್ಳಿ ರಮೇಶ್‌ರವರನ್ನು ತೆಗೆಯುವುದಿಲ್ಲ ಎಂಬ ಪಟ್ಟು ಹಿಡಿದರ ಪರಿಣಾಮ ಇತಿಶ್ರೀ ಆಡಲಾಯಿತು.
ತುಮಕೂರಿನ ಜನತೆಯ ಸಹಕಾರದಿಂದ ತುಮಕೂರು ನಗರದ ಅಭಿವೃದ್ಧಿಗಾಗಿ ಆರಂಭಿಸಿದ ನಮ್ಮ ಸಂಸ್ಥೆ ಇಂದು ಕೇಂದ್ರ ಸರ್ಕಾರದವರೆಗೂ ಗುರುತಿಸಿಕೊಂಡಿದೆ. ತುಮಕೂರು ಸ್ಮಾರ್ಟ್ ಸಿಟಿ ಪ್ರಸ್ತಾವನೆ ಸಲ್ಲಿಸುವಾಗ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂನಲ್ಲಿಯೂ ನನ್ನನ್ನು ಸದಸ್ಯನಾಗಿ ನೇಮಕಮಾಡಿದಾಗ ನನಗೆ ಅಕ್ಷರಶಃ ಖುಷಿಯಾಗಿತ್ತು.
ಆದರೇ ಈ ಸಮಿತಿ ನಾನು ಅಂದುಕೊಂಡಂತೆ ಕಾರ್ಯನಿರ್ವಹಿಸಲಿಲ್ಲ. ಇದರ ವೈಫಲ್ಯ ನಮ್ಮ ಮಾಜಿ ಸಂಸದರಾದ ಶ್ರೀ ಎಸ್.ಪಿ.ಮುದ್ದುಹನುಮೇಗೌಡರವರು ಮತ್ತು ಮಾಜಿ ಶಾಸಕರಾದ ಶ್ರೀ ಡಾ.ರಫೀಕ್ ಅಹಮ್ಮದ್‌ರವರಿಗೆ ಸಲ್ಲಬೇಕು. ಇವರಿಗೆ ಸಮಯ ಇರಲಿಲ್ಲವೋ ಅಥವಾ ಸ್ಮಾರ್ಟ್ ಅಧಿಕಾರಿಗಳು ಇವರನ್ನು ದೂರ ಇಟ್ಟಿದ್ದರೋ ನನಗೆ ತಿಳಿದಿರಲಿಲ್ಲ.
ಮಾಜಿ ಶಾಸಕರಾದ ಶ್ರೀ ಡಾ.ರಫೀಕ್ ಅಹಮ್ಮದ್‌ರವರು ಮಾಜಿಯಾದ ನಂತರ ಶ್ರೀ ಜಿ.ಎಸ್.ಬಸವರಾಜ್ ರವರ ಸಮ್ಮುಖದಲ್ಲಿಯೇ ತುಮಕೂರು ಸ್ಮಾರ್ಟ್ ಸಿಟಿ ಅಧಿಕಾರಿಗಳು ನಮ್ಮನ್ನು ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ. ಮೋದಿಯವರು ಚುನಾಯಿತ ಜನಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಿಲ್ಲ ಎಂಬ ಭಾವನೆ ವ್ಯಕ್ತಪಡಿಸಿದಾಗ ನನಗೆ ನಿಜಕ್ಕೂ ಆಶ್ಚರ್ಯವಾಯಿತು. ನಂತರ ಪರಿಶೀಲಿಸಿದಾಗ ರಾಜ್ಯಾದ್ಯಾಂತ 7 ಸ್ಮಾರ್ಟ್ ಸಿಟಿಗಳ ಹಣೆಬರಹ ಇದೇ ಆಗಿತ್ತು. ಎಲ್ಲರೂ ಇದೇ ಭಾವನೆ ವ್ಯಕ್ತಪಡಿಸುತ್ತಿದ್ದರು.
ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಶಾಸಕರಾದ ನಂತರ ಮೊದಲು ಮಾಡಿದ್ದು ರಾಜ್ಯದ 7 ಸ್ಮಾರ್ಟ್ ಸಿಟಿಗಳಲ್ಲಿ ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಎಷ್ಟೆಷ್ಟು ಸಭೆಗಳು ನಡೆದಿವೆ ಎಂಬ ಒಂದು ಎಲ್.ಎ. ಪ್ರಶ್ನೆಗೆ, ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಮಯದಲ್ಲಿ ಆಗಿನ ನಗರಾಭಿವೃದ್ಧಿ ಸಚಿವರಾಗಿದ್ದ ಶ್ರೀ ಖಾಧರ್‌ರವರು ೭ ಸ್ಮಾರ್ಟ್ ಸಿಟಿಗಳ ಸಭೆ ಕರೆದು ಖಡಕ್ ಸೂಚನೆ ನೀಡಿದ್ದು ಇತಿಹಾಸ.
ಪ್ರಸ್ತುತ ಶ್ರೀ ಜಿ.ಎಸ್.ಬಸವರಾಜ್‌ರವರು 5 ನೇ ಭಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ನಂತರ ತುಮಕೂರು ಜಿಲ್ಲಾ ದಿಶಾ ಸಮಿತಿ ರಚಿಸುವಾಗ ನನ್ನನ್ನು ಸದಸ್ಯನಾಗಿ ನೇಮಿಸಿದರು. ನಂತರ ನಾನು ದಿಶಾ ಗೈಡ್‌ಲೈನ್ ಅಧ್ಯಯನ ಮಾಡಿದಾಗ ನನಗೆ ನಿಜವಾಗಿಯೂ ಒಂದು ’ಬ್ರಹ್ಮಾಸ್ತ್ರ’ ಸಿಕ್ಕಿದಂತಹ ಖುಷಿಯಾಯಿತು.
ನನ್ನ ಆನೇಕ ವರ್ಷಗಳ ಬೇಡಿಕೆಯಾದಂತಹ ಕನಸಿನ ಒಂದು ಸಮಿತಿಯನ್ನು ಕೇಂದ್ರ ಸರ್ಕಾರವೇ ರಚಿಸಿ ಒಳ್ಳೆಯ ಅವಕಾಶ ಕಲ್ಪಿಸಿತು. ತುಮಕೂರು ಜಿಲ್ಲಾ ದಿಶಾ ಸಮಿತಿಯ ಕಾರ್ಯವೈಖರಿ ನೋಡಿ. ತುಮಕೂರು ಸ್ಮಾರ್ಟ್ ಸಿಟಿ ಕಂಪನಿ ಛೇರ್‍ಮನ್ ಆಗಿದ್ದ ಶ್ರೀಮತಿ ಶಾಲಿನಿ ರಜನೀಶ್ ಅವರು ಸಹ ಗೈಡ್‌ಲೈನ್ ಓದಿ ದಿಶಾ ಸಮಿತಿಗೆ ಇಷ್ಟು ಅಧಿಕಾರವಿದಿಯೇ ಎಂಬ ವಿಷಯವನ್ನು ನನ್ನೊಂದಿಗೆ ಹಂಚಿಕೊಂಡಿದ್ದರು
’ನಿಜಕ್ಕೂ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಲೇ ಬೇಕು. ದೇಶದಲ್ಲಿ ದಿಶಾ ಸಮಿತಿಗಳು ಹೇಗೆ ನಡೆಯತ್ತವೋ ಗೊತ್ತಿಲ್ಲ, ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಗಳು ಹೇಗೆ ನಡೆಯುತ್ತವೋ ಗೊತ್ತಿಲ್ಲ. ತುಮಕೂರು ಜಿಲ್ಲಾ ದಿಶಾ ಸಮಿತಿ ಮತ್ತು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಮಿತಿಗಳ ಸಭೆಗಳು ದೇಶಕ್ಕೆ ಮಾದರಿಯಾಗಿ ನಡೆಯುತ್ತಿವೆ. ಇದರ ಮಹತ್ವ ದೇಶದ ಪ್ರಧಾನಿಗಳಿಗೆ ಅರ್ಥವಾಗಲು ಸ್ವಲ್ಪ ಸಮಯ ಬೇಕು.’
ಜಿಲ್ಲಾಧಿಕಾರಿ ಶ್ರೀ ಡಾ.ರಾಕೇಶ್‌ಕುಮಾರ್‌ರವರು, ಜಿಪಂ ಸಿಇಓ ಶ್ರೀಮತಿ ಶುಭಕಲ್ಯಾಣ್‌ರವರಿಗೆ ಬಹಳ ಬೇಗ ಅರ್ಥವಾದರೆ ಜಿಲ್ಲೆಯ ಬಹುತೇಕ ಇಲಾಖಾ ಅಧಿಕಾರಿಗಳಿಗೆ ಬಹಳ ನಿಧಾನವಾಗಿ ಅರ್ಥವಾಗುತ್ತಿದೆ. ದಿಶಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ’ತುಮಕೂರು ಡೇಟಾ ಡಿಸ್ಟ್ರಿಕ್’ ಆಗಿ ಘೋಷಣೆ ಮಾಡಲು ಪಣ ತೊಟ್ಟಿದ್ದರೆ. ತುಮಕೂರು ನಗರದ ಶಾಸಕರು ’ತುಮಕೂರು ಡೇಟಾ ಸ್ಮಾರ್ಟ್ ಸಿಟಿ’ ಯಾಗಿ ಘೋಷಣೆ ಮಾಡಲು ಪಣತೊಟ್ಟಿದ್ದಾರೆ. ಇದರ ಮಹತ್ವ ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕರವರಿಗೆ ಬಹಳ ಕಡಿಮೆ ಅವಧಿಯಲ್ಲಿಯೇ ಅರ್ಥವಾಗಿದೆ.
ಬಹುತೇಕ ಎಲ್ಲಾ ಇಲಾಖಾ ಅಧಿಕಾರಿಗಳು ಸಹ ಮಂದಗತಿಯಲ್ಲಿ ಬೆಂಬಲ ನೀಡುತ್ತಿದ್ದಾರೆ, ನನ್ನ ಪ್ರಕಾರ ಇನ್ನೂ ಚುರುಕಾಗಬೇಕು. 40 ವರ್ಷಗಳ ನನ್ನ ಸಾರ್ವಜನಿಕ ಅನುಭವ, ಅಭಿವೃದ್ಧಿ ರೆವೂಲ್ಯೂಷನ್ ಫೋರಂನ 20 ವರ್ಷಗಳ ಅನುಭವ ಮತ್ತು ಶಕ್ತಿಪೀಠ ಫೌಂಡೇಷನ್‌ನ ಒಂದು ವರ್ಷದ ಅನುಭವವನ್ನು ಸಂಪೂರ್ಣವಾಗಿ ಸಂಸದರ ’ತುಮಕೂರು ಜಿಐಎಸ್ ಡೇಟಾ ಡಿಸ್ಟ್ರಿಕ್’ ಮತ್ತು ಶಾಸಕರ ’ತುಮಕೂರು ಜಿಐಎಸ್ ಡೇಟಾ ಸ್ಮಾರ್ಟ್ ಸಿಟಿ’ ಯೋಜನೆಗೆ ಮೀಸಲಿಟ್ಟು 2022 ರ ವೇಳೆಗೆ ಮೋದಿಯವರ ಡಿಜಿಟಲ್ ಡೇಟಾ ಯುಗದ ಕನಸಿಗೆ ’ತುಮಕೂರು ಜಿಲ್ಲೆ ಅಂತರರಾಷ್ಟ್ರಿಯ ಮಟ್ಟದಲ್ಲಿ ಖ್ಯಾತಿ’ ಪಡೆಯಲೇಬೇಕು ಎಂಬ ಛಲ ನಮ್ಮ ಸಂಸ್ಥೆಯದ್ದಾಗಿದೆ. ಇದಕ್ಕೆ ಜಿಲ್ಲೆಯ ಜನರ ಬೆಂಬಲವೂ ಅಗತ್ಯವಿದೆ.
ತುಮಕೂರು ನಗರ ಸಭೆ ಮತ್ತು ಟೂಡಾದ ಮಾಜಿ ಅಧ್ಯಕ್ಷರಾದ ಶ್ರೀ ಚಿನ್ನಯಲ್ಲಪ್ಪ ರೆಡ್ಡಿರವರು ಇತ್ತಿಚೇಗೆ ಸಾಯಿಬಾಬಾ ದೇವಾಯಲದಲ್ಲಿ ಸಂಸದ ಜಿಎಸ್‌ಬಿ ರವರ ಸಮ್ಮುಖದಲ್ಲಿಯೇ ನೋಡಿ ರಮೇಶ್ ಇವತ್ತು ತುಮಕೂರು ಸ್ಮಾರ್ಟ್ ಸಿಟಿ ಏನಾದರೂ ಅಧ್ವಾನ ಆದ್ರೆ ಜನ ಎಂಪಿ ಮತ್ತು ಎಂಎಲ್‌ಎ ಬೈದರೆ ನಾನು ಮಾತ್ರ ನಿನ್ನೇ ಬೈಯುವುದು.
ಮೊದಲ ಸ್ಮಾರ್ಟ್ ಸಿಟಿ ಸಭೆ ಗುಬ್ಬಿ ವೀರಣ್ಣ ಮಂದಿರದಲ್ಲಿ ನಡೆದಾಗ ನನಗೂ ಪಾಲಿಕೆಯಿಂದ ಸಭೆಗೆ ಬರಲು ಫೋನ್ ಮಾಡಿ ಕರೆದಾಗ, ಯಾರಮ್ಮ ನನ್ನ ಕರೆಯೋಕೆ ಹೇಳಿದ್ದು ಅಂದಾಗ ಸಾರ್ ಕುಂದರನಹಳ್ಳಿ ರಮೇಶ್ ಅವರು ಸುಮಾರು 600 ಜನರ ನಂಬರ್ ಕೊಟ್ಟು ಇವರೆಲ್ಲರನ್ನೂ ಕರೆಯಿರಿ, ಇಲ್ಲಿ ಪಕ್ಷ, ಜಾತಿ ಬರಬಾರದು ಎಂಬ ಸಲಹೆ ನೀಡಿದ್ದಾರೆ ಎಂದರು.
ನಾನು ಸಭೆಗೆ ಬಂದು ನೋಡಿದಾಗ ನಿಜಕ್ಕೂ ಇಡೀ ತುಮಕೂರಿನ ಎಲ್ಲಾ ಪಕ್ಷದ ನಾಯಕರುಗಳು, ಸಂಘ ಸಂಸ್ಥೆಗಳ ಪ್ರಮುಖರೂ ಇದ್ದರು. ಇದು ನಿನ್ನ ಚಿಂತನೆಯೇ, ನಾನು ನೀನು ತುಮಕೂರಿಗೆ ಬಂದಾಗಿನಿಂದ ಗಮನಿಸಿದ್ದೇನೆ, ಅಭಿವೃದ್ಧಿ ಬಗ್ಗೆ ವಿಶೇಷ ಗಮನ ಹರಿಸಿದ್ದೀಯಾ. ಈಗ ಎಂಪಿ ಮತ್ತು ಎಂಎಲ್‌ಎ ಇಬ್ಬರೂ ನಿಮ್ಮವರೇ ಇದ್ದಾರೆ ಎಂದು ಸುಮ್ಮನಿದ್ದೀಯಾ ಇದು ಸರಿಯಲ್ಲ ಎಂದು ಛೇಢಿಸಿದರು.
ಮಾಜಿ ಶಾಸಕರಾದ ಶ್ರೀ ಡಾ.ರಫೀಕ್ ಅಹಮ್ಮದ್‌ರವರು ಸಹ ಮಾನ್ಯ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರ ಸಮ್ಮುಖದಲ್ಲಿಯೇ ನಾನು ಮತ್ತು ಶಿವಣ್ಣನವರು ಶಾಸಕರಾಗಿದ್ದಾಗ ಪ್ರತಿ ದಿನ ಪೇಪರ್‌ನಲ್ಲಿ ಒಂದಲ್ಲ ಒಂದು ಸುದ್ದಿ ಇರುತಿತ್ತು, ಈಗ ಮೌನವೇಕೆ? ತುಮಕೂರಿನಲ್ಲಿ ಏನೂ ಸಮಸ್ಯೆಗಳೇ ಇಲ್ಲವೇ ಎಂದು ನಯವಾಗಿ ಛೇಡಿಸಿದರು.
ಹೀಗೆ ಹಲವಾರು ಜನರು ನನಗೆ ಚುಚ್ಚಿದ್ದಾರೆ, ನಾನು ಒಂದು ದೃಢ ನಿರ್ಧಾರಕ್ಕೆ ಬಂದಿದ್ದೇನೆ, ಜಿಲ್ಲಾಡಳಿತ ಮತ್ತು ನಗರಾಡಳಿತದ ಜೊತೆಗೆ ಸಂಸದರ ಮತ್ತು ಶಾಸಕರ ಸಹಕಾರ ಪಡೆದರೆ, ತುಮಕೂರಿನಿಂದ ಸ್ಪರ್ಧೆ ಮಾಡಿದ್ದ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ.ದೇವೇಗೌಡರವರು ಸೇರಿದಂತೆ ಜಿಲ್ಲೆಯ ಸರ್ವಪಕ್ಷಗಳ ಮಾಜಿ ಚುನಾಯಿತ ಜನಪ್ರತಿನಿಧಿಗಳ ಮತ್ತು ನಾಯಕರ ಸಹಕಾರ ಪಡೆಯಲೇ ಬೇಕಾಗಿದೆ. ಇಲ್ಲವಾದಲ್ಲಿ ನಿಗದಿತ ಅವಧಿಯಲ್ಲಿ ಗುರಿಮುಟ್ಟಲು ಸಾಧ್ಯವಾಗುವುದಿಲ್ಲ.
ಪ್ರಸ್ತುತ ಎಲ್ಲಾ ಪಕ್ಷಗಳ ಸಲಹೆ ಮೇರೆಗೆ ತುಮಕೂರು ಜಿಲ್ಲೆಯ ವಿಷನ್ ಡಾಕ್ಯುಮೆಂಟ್ ಅನ್ನು ಜಿಐಎಸ್ ಆಧಾರದಲ್ಲಿ ಮಾಡುವ ಮಹತ್ಕಾರ್ಯಕ್ಕೆ ಪೂರಕವಾಗಿ ಮೊಟ್ಟಮೊದಲ ದಿಶಾ ಸಮಿತಿಯಲ್ಲಿ ಮಾಜಿ ಚುನಾಯಿತ ಜನಪ್ರತಿನಿಧಿಗಳ ಸಲಹೆ ಪಡೆಯಲು ಸಂಸದರು ಸಭೆಯಲ್ಲಿಯೇ ನಿರ್ಣಯ ಮಾಡಿಸಿದ್ದಾರೆ. ಇದು ಒಂದು ವರದಾನವಾಗಲಿದೆ.
ಮಾಜಿ ಪ್ರಧಾನಿಗಳಾದ ದಿ.ರಾಜೀವ್‌ಗಾಂಧಿ, ಶ್ರೀ ಮನೋಮೋಹನ್‌ಸಿಂಗ್ ಕಾಲದಿಂದಲೂ ಮೊಬೈಲ್, ಇಂಟರ್‌ನೆಟ್, ಡಿಜಿಟಲ್‌ಯುಗ ಆರಂಭವಾಯಿತು. ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಕೇಂದ್ರ ಸರ್ಕಾರದಲ್ಲಿ ಪ್ರಧಾನಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದ ತಕ್ಷಣ ಯೋಜನೆ ವೇಗವಾಗಿ ಚಾಲನೆಗೆ ಬಂತು. ಅದ್ದರಿಂದ ಎಲ್ಲರ ಸಹಕಾರ ಬಹಳ ಮುಖ್ಯ.
ತಾವು ಸಲಹೆ ನೀಡಬಹುದು.