24th July 2024
Share

TUMAKURU:SHAKTHI PEETA FOUNDATION

ತುಮಕೂರು ಸ್ಮಾರ್ಟ್ ಸಿಟಿ ಮತ್ತು ತುಮಕೂರು ಮಹಾನಗರ ಪಾಲಿಕೆ ತುಮಕೂರು ನಗರದಲ್ಲಿರುವ ಪ್ರತಿಯೊಂದು ಸ್ವತ್ತಿನ ಪಿಐಡಿ ನಂಬರ್ ಡಿಜಿಟಲ್ ಆಂದೋಲನ ಹಮ್ಮಿಕೊಳ್ಳುವ ಬಗ್ಗೆ ಸುಧೀರ್ಘವಾಗಿ ಸಮಾಲೋಚನೆ ನಡೆಸಲಾಯಿತು.

 ಜಿಐಎಸ್ ಲೇಯರ್ ಮಾಡುತ್ತಿರುವ ಸಂದರ್ಭದಲ್ಲಿ ನಗರದಲ್ಲಿರುವ ಸುಮಾರು 50000 ಕ್ಕೂ ಹೆಚ್ಚು ಖಾಲಿ ನಿವೇಶನದ ಮಾಲೀಕರನ್ನು ಗುರುತಿಸುವುದು ಕಷ್ಟದ ಕೆಲಸವಾಗಿದೆ. ಖಾಲಿ ನಿವೇಶನಗಳಲ್ಲಿ ಬೇಲಿ, ಪೊದೆ ಬೆಳೆದುಕೊಂಡು ಪರಿಸರವೂ ಹಾಳಾಗಿದೆ. ಈ ಸ್ವತ್ತಿನ ಮಾಲೀಕರನ್ನು ಕಂಡುಹಿಡಿಯಲೇ ಬೇಕು ಇಲ್ಲವಾದಲ್ಲಿ ಜಿಐಎಸ್ ಲೇಯರ್ ಅಪೂರ್ಣವಾಗಲಿದೆ.

 ತುಮಕೂರು ನಗರದಲ್ಲಿರುವ ವಾರ್ಡ್, ಬಡವಾಣೆ, ಮುಖ್ಯ ರಸ್ತೆ, ಅಡ್ಡರಸ್ತೆ, ಕ್ರಾಸ್ ರಸ್ತೆಗಳು, ಯಾವ ಗ್ರಾಮಗಳ ಯಾವ ಸರ್ವೆನಂಬರ್‌ನಲ್ಲಿವೆ, ಯಾವ ಲೇಔಟ್ ನಂಬರ್‌ನಲ್ಲಿವೆ, ಎಂಬ ಬಗ್ಗೆ ತಾಳೇಹಾಕುವುದು. ದಾಖಲೆಗಳು ದೊರೆಯುವ ಎಲ್ಲಾ ಸ್ವತ್ತುಗಳನ್ನು ಹೊರತುಪಡಿಸಿ, ಮಾಹಿತಿ ದೊರೆಯದೇ ಇರುವ ಸ್ವತ್ತುಗಳನ್ನು ತಾತ್ಕಾಲಿಕವಾಗಿ ಮಹಾನಗರ ಪಾಲಿಕೆ ಸ್ವತ್ತು’ ಎಂದು ಘೋಶಿಸಲು ಅವಕಾಶವಿದೇಯೇ ಎಂಬ ಬಗ್ಗೆಯೂ ಚರ್ಚೆ ನಡೆಯಿತು.

 ಮಹಾನಗರ ಪಾಲಿಕೆಯಲ್ಲಿನ ಮಾಹಿತಿ, ಡ್ರೋನ್ ಸರ್ವೆ ಮಾಹಿತಿ, ಮಾಲೀಕರ ಬಳಿ ಇರುವ ದಾಖಲೆಗಳ ಪರೀಶಿಲನೆ ಮಾಡಲು ಸ್ವತ್ತಿನ ಮಾಲೀಕರು ಸಹ ಸಕರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಇಲ್ಲಿ ನಗರದ ಜನತೆ, ಬಡಾವಾಣೆಗಳ ನಾಗರೀಕ ಸಮಿತಿಗಳ ಸಹಭಾಗಿತ್ವ ಪಿಐಡಿ ಆಂದೋಲನದಲ್ಲಿ ಬಹುಮುಖ್ಯವಾಗಿದೆ.

 ಪ್ರತಿಯೊಂದು ಖಾಸಗಿ/ ಸರ್ಕಾರಿ ಸ್ವತ್ತಿನ ಮಾಲೀಕರು ಕಟ್ಟಡಗಳ ಬಾಗಿಲ ಮೇಲೆ, ಆವರಣ ಗೋಡೆ ಮೇಲೆ, ಮೀಟರ್ ಬೋರ್ಡ್ ಬಳಿ ಮತ್ತು ಖಾಲಿ ನಿವೇಶನದಲ್ಲಿ ಆಯಾ ಸ್ವತ್ತಿನ ಮಾಲೀಕರೇ ಒಂದು ಬೋರ್ಡ್ ಹಾಕಿ ಪಿಐಡಿ ನಂಬರ್ ಮತ್ತು ಮೊಬೈಲ್ ನಂಬರ್ ಹಾಕುವ ಆಂದೋಲನ ಹಮ್ಮಿಕೊಳ್ಳುವುದು.

 ಒಂದು ಆಪ್ ಮಾಡಿ ಎಲ್ಲಾ ಸ್ವತ್ತಿನ ಖಾಸಗಿ/ಸರ್ಕಾರಿ ಮಾಲೀಕರು ಆಯಾ ಸ್ವತ್ತುಗಳ ಮುಂದೆ ನಿಂತು ಭಾವಚಿತ್ರ ಸಹಿತ, ಡಿಜಿಟಲ್ ಮೂಲಕ ಮಾಹಿತಿ ಪಡೆಯುವ ಬಗ್ಗೆಯೂ ಚಿಂತನೆ ನಡೆಸಲಾಯಿತು. ಕೆರೆ, ರಸ್ತೆ, ಉದ್ಯಾನವನ, ಮನೆ, ನಿವೇಶನ ಸ್ಮಶಾನ ಹೀಗೆ ಪ್ರತಿಯೊಂದು ಸ್ವತ್ತು ಸಹ ಯಾರ ಮಾಲೀಕತ್ವದಲ್ಲಿದೆ ಎಂದು ಸಂಶೋಧನೆ ಮಾಡುವುದು ಅಗತ್ಯವಾಗಿದೆ.

 ಪಿಪಿಪಿ ಮಾದರಿಯಲ್ಲಿ ಯೋಜನೆ ಪೂರ್ಣಗೊಳಿಸಲು ಮತ್ತು ಮುಂದಿನ ಕನಿಷ್ಟ 10 ವರ್ಷಗಳ ಕಾಲ ಒಂದೇ ನಕ್ಷೆಯಲ್ಲಿ ಪ್ರತಿಯೊಂದು ಯೋಜನೆಯಡಿ ನಡೆಯುವ ಕಾಮಗಾರಿಗಳ  ಎಲ್ಲಾ ಮಾಹಿತಿಗಳನ್ನು ಅಫ್ ಲೋಡ್ ಮಾಡಲು ಸಲಹಾ ಸಂಸ್ಥೆಗಳಿಗೆ ಹೊಣೆಗಾರಿಕೆ ನೀಡುವ ಬಗ್ಗೆಯು ಚಿಂತನೆ ನಡೆಸಲಾಯಿತು’

 ವಾರ್ಡ್ ನಂಬರ್ 22 ರಲ್ಲಿ ಸಮಗ್ರವಾಗಿ ತುಮಕೂರು ಸ್ಮಾರ್ಟ್ ಸಿಟಿ ಪ್ರತಿಯೊಂದು ಜಿಐಎಸ್ ಲೇಯರ್ ಮಾಡಿದೆ, ಪಾಲಿಕೆಯಲ್ಲಿರುವ ಮಾಹಿತಿ, ವಿವಿಧ ಇಲಾಖೆಗಳಲ್ಲಿರುವ ಮಾಹಿತಿ ಮತ್ತು ಫಿಸಿಕಲ್ ಆಗಿ ಸ್ಥಳಕ್ಕೆ ಭೇಟಿ ನೀಡಿ ಕ್ರಾಸ್‌ಚೆಕ್ ಮಾಡಬೇಕಾದ ಸಮಗ್ರ ಮಾಹಿತಿ ಮತ್ತು ಇರುವ ತೊಂದರೆಗಳ ಬಗ್ಗೆ ಸೋಶಿಯಲ್ ಆಡಿಟ್ ಮಾಡಿ ಒಂದು ವಾರದಲ್ಲಿ ಅಧ್ಯಯನ ವರದಿ ನೀಡುವುದಾಗಿ ಜಿಐಎಸ್ ಪರಿಣಿತ ಶ್ರೀ ಶಿವಕುಮಾರ್, ಎಜಿಟಿ ಸಂಸ್ಥೆಯ ಶ್ರೀ ಶರತ್ ವಿಜಯ್, ಶ್ರೀ ರಾಜೀವ್‌ಸಿಂಗ್ ಚೌಹಾಣ್  ಭರವಸೆ ನೀಡಿದರು.

  ಸ್ಮಾರ್ಟ್ ಸಿಟಿಯ ಶ್ರೀ ಸ್ವಾಮಿ, ಶ್ರೀ ಅಶ್ವಿನ್, ಪಾಲಿಕೆಯ ಶ್ರೀ ಹನುಮಂತರಾಜು ಇದೂವರೆಗೂ ಜಿಐಎಸ್ ಲೇಯರ್  ಮಾಡುತ್ತಿರುವ ಎಲ್ಲಾ ಕಸರತ್ತುಗಳ, ಅನುಭವಗಳ, ಅಡಚಣೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಹಂಚಿಕೊಂಡರು.

  ಒಂದು ವಾರ್ಡಿನ ಸೋಶಿಯಲ್ ಆಡಿಟ್ ಮಾಡಿ, ಶೇ 100 ರಷ್ಟು ಪಲಿತಾಂಶ ನೀಡಲು ಮಾಡಬೇಕಾದ ವಿವಿಧ ಹಂತಗಳ ವರದಿ ನೀಡಲು,  ಸ್ವತ್ತಿನವಾರು  ಅಥವಾ ಒಟ್ಟಾಗಿ ನೀಡ ಬೇಕಾದ ಮೊತ್ತದ ಬಗ್ಗೆಯೂ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯ ಬಹುದು ಅಥವಾ ಪ್ರಾಯೋಗಿಕವಾಗಿ ಅಧ್ಯಯನ ಮಾಡಲು ಸಂಸ್ಥೆ ಮುಂದೆ ಬಂದಲ್ಲಿ ಪತ್ರ ನೀಡಿ ಅನುಮತಿ ಪಡೆಯುವುದು ಸೂಕ್ತ  ಎಂಬ ಅಭಿಪ್ರಾಯಕ್ಕೆ ಬರಲಾಯಿತು.

ಯಾವುದೇ ಸಂಸ್ಥೆ ಪೀಲ್ಡ್‌ಗೆ ಇಳಿದು ಕೆಲಸ ಮಾಡಲು ಆಸಕ್ತಿ ಇದ್ದಲ್ಲಿ, ಒಂದು ವಾರ್ಡ್ ಪರಿಪೂರ್ಣವಾದ ನಂತರ ಇಡೀ ನಗರದ ಕೆಲಸ ನೀಡಲು ನಿಯಮ ಪ್ರಕಾರ ಅನುಮತಿ ನೀಡಬಹುದು, ಕಲರ್ ಕಲರ್ ಪಿಪಿಟಿ ತೋರಿಸಿ, ಬಣ್ಣದ ಲೋಕ ತೋರಿಸಿ ಟೋಪಿ ಹಾಕುವ ಸಂಸ್ಥೆಗಳೇ ಜಾಸ್ತಿಯಾಗಿವೆ. ಇವುಗಳ ಬಗ್ಗೆ ಎಚ್ಚರ ವಹಿಸುವುದು ಅಗತ್ಯವಾಗಿದೆ’

  ಭಾಗವಹಿಸಿದ್ದ ಸಂಸ್ಥೆಗೆ ನಗರದ ಒಂದು ವಾರ್ಡ್, ಜಿಲ್ಲೆಯ ಒಂದು ಗ್ರಾಮ ಪಂಚಾಯಿತಿ ಮತ್ತು ವಿವಿಧ ಇಲಾಖೆಗಳಲ್ಲಿರುವ ಡೇಟಾಗಳ ಅನಾನಲೀಸಿಸ್ ವರದಿ ನೀಡಲು ತಗಲುವ ವೆಚ್ಚಗಳ ಬಗ್ಗೆ ಜಿಲ್ಲಾಡಳಿತಕ್ಕೆ ಮೂರು ಪ್ರತ್ತೇಕ ಪ್ರಸ್ತಾವನೆ ಸಲ್ಲಿಸಲು ಹಾಗೂ ಕೆಲಸ ಮಾಡುವ ಸಂಸ್ಥೆಗಳಿಗೆ Expression of interest ಮೂಲಕ ಬಹಿರಂಗವಾಗಿ ಆಹ್ವಾನಿಸುವ ಬಗ್ಗೆಯೂ ಕುಂದರನಹಳ್ಳಿ ರಮೇಶ್ ಸಲಹೆ ನೀಡಿದರು.