TUMAKURU:SHAKTHI PEETA FOUNDATION
ತುಮಕೂರು ಸ್ಮಾರ್ಟ್ ಸಿಟಿಯನ್ನು ದೇಶದಲ್ಲಿಯೇ ನಂಬರ್ -1 ಮಾಡಲೇ ಬೇಕು ಎಂಬ ಪಣ ತೊಟ್ಟಿರುವವರ ಅನಿಸಿಕೆಗಳಂತೆ ’ತುಮಕೂರು ಸ್ಮಾರ್ಟ್ ಸಿಟಿ : ಟ್ರೋಫಿ ಗಿ/S ಟೋಪಿ’ ಎಂಬ ಘೋಷಣೆಯಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರ ಗಮನಕ್ಕೆ ಕೆಲವು ಅಂಶಗಳನ್ನು ತರಲು ಚಿಂತನೆ ನಡೆಸಲಾಗಿದೆ.
ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು 2022 ರೊಳಗೆ ದೇಶದ ಪ್ರತಿಯೊಬ್ಬರಿಗೂ ಸೂರು ಕೊಟ್ಟೇ ಕೊಡುತ್ತೇವೆ ಎಂದು ಕಾಲಮಿತಿ ಘೋಷಣೆ ಮಾಡಿದ್ದಾರೆ. ದೇಶದ ಮಹಾನಗರ ಪಾಲಿಕೆಗಳ ಸುತ್ತ-ಮುತ್ತ 10 ಕೀಮೀ ವ್ಯಾಪ್ತಿಯ ಸರ್ಕಾರಿ ಜಮೀನನ್ನು ಬಗರ್ ಹುಕುಂ ಸೇರಿದಂತೆ ಯಾರಿಗೂ ನೀಡಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 19000 ಜನ ನಿವೇಶನ/ವಸತಿ ಇಲ್ಲ ಎಂದು ಕೇಂದ್ರ ಸರ್ಕಾರದ ಪೋರ್ಟಲ್‌ನಲ್ಲಿ ನೋಂದಾಯಿಸಿ ಕೊಂಡಿದ್ದಾರೆ. ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಶಾಸಕರಾದ ನಂತರ ಮತ್ತು ಶ್ರೀ ಜಿ.ಎಸ್.ಬಸವರಾಜ್ ಲೋಕಸಭಾ ಸದಸ್ಯರಾದ ನಂತರ ಸುಮಾರು 8 ಸಭೆಗಳನ್ನು ಮಾಡಿ ಅಧಿಕಾರಿಗಳಿಗೆ ಮಹಾನಗರ ಪಾಲಿಕೆ ಸುತ್ತ-ಮುತ್ತ 10 ಕೀಮೀ ವ್ಯಾಪ್ತಿಯ ’ಸರ್ಕಾರಿ ಜಮೀನುಗಳ ಜಿಐಎಸ್ ಲೇಯರ್’ ಮಾಡಲು ನಾಚಿಕೆ ಪಡುವಷ್ಟು, ಅಧಿಕಾರಿಗಳ ಸಭೆ ಕರೆದು ಸಮಾಲೋಚನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಶ್ರೀ ಡಾ.ರಾಕೇಶ್ ಕುಮಾರ್, ಉಪವಿಭಾಗಾಧಿಕಾರಿ ಶ್ರೀ ಅಜಯ್, ತಹಶೀಲ್ಧಾರ್ ಶ್ರೀ ಮೋಹನ್, ಎಡಿಎಲ್‌ಎಲ್‌ಆರ್ ಶ್ರೀ ಹನುಮೇಗೌಡರು ಸೇರಿದಂತೆ ಎಲ್ಲಾ ಅಧಿಕಾರಿಗಳ ತಂಡ ಜಮೀನು ಗುರುತಿಸುವ ಕಾರ್ಯ ನಡೆಸಿದ್ದಾರೆ. ಇದು ’ಟ್ರೋಫಿ’ ನೀಡುವ ಕೆಲಸವಾಗ ಬಹುದು. ಆದರೆ ’ಟೋಪಿ’ ಹಾಕುವ ಒಂದು ಪತ್ರವನ್ನು ಸರ್ಕಾರಿ ಜಮೀನು ಉಳಿಸಲು ಶ್ರಮಿಸುತ್ತಿರುವ ಶ್ರೀ ಇಮ್ರಾನ್ ಪಾಷಾಗೆ ಅಧಿಕಾರಿಗಳು ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಒಂದು ಎಕರೆ ಸರ್ಕಾರಿ ಜಮೀನು ಹುಡುಕಿ, ದಾಖಲೆ ಪರಿಶೀಲಿಸಿ ನೀಡಲು ಒಂದು ಎಕರೆಗೆ ಕೇವಲ ರೂ 800 ನೀಡಿ, ಅಧ್ಯಯನ ವರದಿ ನೀಡುತ್ತೇವೆ ಎಂದು ಸಲಹಾಗಾರ ಸಂಸ್ಥೆಯ ಶ್ರೀ ರಾಜಶೇಖರ್ ತುಮಕೂರು ಸ್ಮಾರ್ಟ್ ಸಿಟಿಗೆ ಪತ್ರ ನೀಡಿದ್ದರು, 7 ಗ್ರಾಮಗಳಲ್ಲಿ ಸರ್ಕಾರಿ ಜಮೀನು ಗುರುತಿಸಿ ವರದಿ ನೀಡಿದರು. ಉಳಿದ ಕೆಲಸವನ್ನು ಮಾಡಿಸಲು ಇಲ್ಲ, ಅವರಿಗೆ ಹಣವನ್ನು ನೀಡಲಿಲ್ಲ. ಇದು ಯಾವುದು ಬ್ಯಾಡ ಸರ್ಕಾರಿ ಅಧಿಕಾರಿಗಳೇ ಮಾಡಲಿ ಎಂದರೆ ನೌಕರರಿಲ್ಲ.
ಇಲ್ಲಿ ಪ್ರಧಾನಿ, ಎಂಪಿ, ಎಂಎಲ್‌ಎ, ಡಿಸಿ, ಎಸಿ, ತಹಶೀಲ್ಧಾರ್ ಯಾರ ಮಾತಿಗೂ ಡೋಂಟ್ ಕೇರ್, ಕಾರಣ ನೌಕರರ ಕೊರತೆ ಇದಕ್ಕೆ ಪರಿಹಾರವನ್ನು ಇಂದು (05.09.2020)ನಡೆಯುವ ತುಮಕೂರು ಸ್ಮಾರ್ಟ್ ಸಿಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರಿಹಾರ ನೀಡುವಿರಾ ಸ್ವಾಮಿ. ಅಧಿಕಾರಿಗಳೇ ನೀಡಿರುವ ಲಿಖಿತ ದಾಖಲೆಯನ್ನು ಪ್ರಕಟಿಸಲಾಗಿದೆ.