12th September 2024
Share

TUMAKURU:SHAKTHIPEETA FOUNDATION

  ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ ನಾಮನಿರ್ದೇಶಿತ ಸದಸ್ಯರ ಕಾರ್ಯಾಗಾರ ನಡೆಸಲು ರಾಜ್ಯ ದಿಶಾ ಸಮಿತಿಗೆ ಸಲಹೆ ನೀಡಲಾಗಿದೆ. ಆರಂಭದಲ್ಲಿ ಎಲ್ಲರನ್ನು ವಿಸಿ ಮೂಲಕ ನಿಕಟ ಸಂಪರ್ಕ ಇಟ್ಟುಕೊಂಡು ಕೊರೊನಾ ತಿಳಿಯಾದ ನಂತರ ಕಾರ್ಯಾಗಾರ ನಡೆಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

 ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ರಾಜ್ಯ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅನುಮತಿ ಪಡೆದು ಸದಸ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿರಜನೀಶ್‌ರವರು ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಪ್ರಧಾನಕಾರ್ಯದರ್ಶಿಯವರಾದ ಶ್ರೀ ಅತೀಕ್‌ರವರು  ಜಂಟಿಯಾಗಿ ಚಾಲನೆ ನೀಡಲು ಚರ್ಚಿಸಲಾಗುವುದು.

  ರಾಜ್ಯ ಮಟ್ಟದ ದಿಶಾ ಮಾನಿಟರಿಂಗ್ ಸೆಲ್ ರಚಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಸದಸ್ಯರ ಅಭಿಪ್ರಾಯ ಸಂಗ್ರಹಣೆಯೂ ಬಹಳ ಪ್ರಮುಖವಾಗಿದೆ. ದಿಶಾ ಸಮಿತಿಯ ಸದಸ್ಯರು ಆಯಾ ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ಕೇಂದ್ರ ಸರ್ಕಾರದ ತಾಜಾ ಮಾಹಿತಿಗಳನ್ನು ಬೆರಳ ತುದಿಯಲ್ಲಿ ಇಟ್ಟುಕೊಳ್ಳುವುದು ಇದರ ಉದ್ದೇಶವಾಗಿದೆ.

 ಕೇಂದ್ರ ಸರ್ಕಾರದ ದಿಶಾ ಮಾರ್ಗದರ್ಶಿ ಸೂತ್ರಗಳ ಜಾರಿ ಶೇ 100 ರಷ್ಟು ಆಗಬೇಕಾದರೇ ಯಾವ ತಂತ್ರಗಳನ್ನು ಅನುಸರಿಸ ಬೇಕು ಎಂಬ ಬಗ್ಗೆ ಒಂದು ಟೆಂಪ್ಲೆಟ್ ಸಿದ್ಧಪಡಿಸ ಬೇಕು. ಜಿಲ್ಲಾ ಮಟ್ಟದ ದಿಶಾ ಸಮಿತಿಗಳಲ್ಲಿ ನಿರಂತರವಾಗಿ ಚಟುವಟಿಕೆ ಇದ್ದಲ್ಲಿ ಮಾತ್ರ ರಾಜ್ಯ ಕೇಂದ್ರದಿಂದ ಹೆಚ್ಚಿಗೆ ಅನುದಾನ ಪಡೆಯಲು ಅನೂಕೂಲವಾಗಲಿದೆ.

 ರಾಜ್ಯದ 40 ಜನ ಸಂಸದರ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಜೊತೆ ಯಾವ ರೀತಿ ಸಮಾಲೋಚನೆ ನಡೆಸಬೇಕು ಎಂಬ ಬಗ್ಗೆ  ಒಂದೇ ಮಾದರಿಯ ಸಿದ್ಧತೆ ನಡೆಸುವುದು ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆ ಮತ್ತು ಜಲಗ್ರಾಮ ಕ್ಯಾಲೆಂಡರ್‌ಗಳ ಯಶಸ್ವೀ ಅನುಷ್ಠಾನಕ್ಕೆ ರೂಪುರೇಷೆ ಸಿದ್ಧಪಡಿಸಲಾಗುವುದು.

ಆಸಕ್ತರು ಸಲಹೆ ಸೂಚನೆ ನೀಡಬಹುದಾಗಿದೆ.