12th September 2024
Share
ತುಮಕೂರು ತಾಲ್ಲೂಕು ತಹಶೀಲ್ಧಾರ್ ಶ್ರೀ ಮೋಹನ್ ಮತ್ತು ಅವರ ತಂಡ ಸರ್ಕಾರಿ ಜಮೀನು ಹುಡುಕುವ ದೃಷ್ಯ. ನಮ್ಮ ಡ್ಯೂಟಿ ನಾವು ಮಾಡಲೇ ಬೇಕು, ಮಾಡುತ್ತೇವೆ ಎಂದು ಬೀದಿಗೆ ಇಳಿದಿದ್ದಾರೆ.

TUMAKURU:SHAKTHIPEETA FOUNDATION

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ದಿನಾಂಕ:06.09.2020 ರಂದು ಮುಂದಿನ 100 ದಿವಸಗಳ ಆಂದೋಲನ ಹಮ್ಮಿಕೊಂಡು ನಿವೇಶನ ರಹಿತರಿಗೆ ನಿವೇಶನ ನೀಡಲು ಸರ್ಕಾರಿ ಜಮೀನು ಅಥವಾ ಭೂ ಸ್ವಾಧೀನ ಮಾಡಿಕೊಳ್ಳುವ ಜಮೀನು ಹುಡುಕಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕರೆ ನೀಡಿದ್ದಾರೆ.

HOUSING FORR ALL 2022 ಯೋಜನೆ ಅಗತ್ಯವಿರುವ ಸರ್ಕಾರಿ ಜಮೀನು ಹುಡುಕುವಾಗ ಮಾಹಿತಿ ಹಕ್ಕು ಅಧಿನಿಯಮದ ಕಾರ್ಯಕರ್ತರ ಮನವಿಗಳ ಬಗ್ಗೆ ವಿಶೇಷ ಗಮನ ಹರಿಸಲು ಉಪವಿಭಾಗಾಧಿಕಾರಿಗಳು ಹಾಗೂ ಒತ್ತುವರಿ ಟಾಸ್ಕ್ ಪೋರ್ಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಅಜಯ್ ರವರಿಗೆ ಸೂಚಿಸಿದ್ದಾರೆ.

 ತುಮಕೂರು ತಾಲ್ಲೂಕು ತಹಶೀಲ್ಧಾರ್ ಶ್ರೀ ಮೋಹನ್ ಮತ್ತು ಅವರ ತಂಡ ಸರ್ಕಾರಿ ಜಮೀನು ಹುಡುಕುವ ಭೇಟೆ ಆರಂಭಿಸಿದ್ದಾರೆ. ಜಮೀನು ಬಳಿ ಇದು ಸರ್ಕಾರಿ ಆಸ್ತಿ ಎಂದು ನಾಮಫಲಕ ಹಾಕಲು ಚಿಂತನೆ ನಡೆಸಿದ್ದಾರೆ.

ಇದು ತುಮಕೂರು ನಗರದಿಂದ ಆರಂಭಿಸಿ ಜಿಲ್ಲೆಯ ಎಲ್ಲಾ 11 ನಗರ ಸ್ಥಳೀಯ ಸಂಸ್ಥೆ ಮತ್ತು 330 ಗ್ರಾಮಪಂಚಾಯಿತಿಗಳಿಗೂ ವಿಸ್ತರಣೆಯಾಗ ಬೇಕು ಎಂಬುದು ಸಂಸದರ ಖಡಕ್ ಸೂಚನೆ.

ಪೂರಕವಾಗಿ ತುಮಕೂರು ನಗರದ ಮಾಹಿತಿ ಹಕ್ಕು ಕಾರ್ಯಕರ್ತರು ಏನಂತಾರೆ?

 ಹಿಂದೂ ಮಾಹಾಸಭದ ಶ್ರೀ ಜಿ.ಎಸ್.ಬಸವರಾಜ್‌ರವರು ಸಂಸದರ ಈ ಆಂದೋಲನ ನಿಜಕ್ಕೂ ಮೆಚ್ಚುವಂತದ್ದು, ಆದರೇ ಈ ಅಧಿಕಾರಿಗಳು ಎಷ್ಟು ಸ್ಪಂಧಿಸುತ್ತಾರೆ ಕಾದು ನೋಡೋಣ. ನಾವಂತೂ ಸರ್ಕಾರಿ ಜಮೀನುಗಳ ಬಗ್ಗೆ ಎಸಿ ಯವರಿಗೆ ದಾಖಲೆ ಸಹಿತ ಮನವಿ ಸಲ್ಲಿಸುತ್ತೇವೆ.

 ಆರ್.ಎಸ್.ಎಸ್. ಮುಖಂಡರಾದ ಶ್ರೀ ಜಿ.ಕೆ.ಶ್ರೀನಿವಾಸ್‌ರವರು ನಮ್ಮನ್ನು ರಾಮನಿಗೆ ವಸತಿ ಹುಡುಕಾಟ ಮಾಡಲು ಆರ್.ಎಸ್.ಎಸ್. ಹೋರಾಟ ಮಾಡಿದೆ, ಬಡವರಿಗೆ ವಸತಿ ನೀಡಲು ಏಕೆ ಶ್ರಮಿಸುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಆರಂಭವಾಗಿವೆ. ನಾವು ಜಿಲ್ಲೆಯ ಪ್ರತಿಯೊಬ್ಬ ನಿವೇಶನ ರಹಿತರಿಗೂ ನಿವೇಶನ ನೀಡಲು ಆಯಾ ಗ್ರಾಮಗಳಲ್ಲಿ ಇರುವ ಸರ್ಕಾರಿ ಜಮೀನು ಗುರುತಿಸಲು ಜಿಲ್ಲಾಧ್ಯಾಂತ ನಮ್ಮ ಕಾರ್ಯಕರ್ತರು ಶ್ರಮಿಸುವ ಮೂಲಕ ದಾಖಲೆ ಸೃಷ್ಠಿಸುತ್ತೇವೆ. ಸಂಸದರ ಈ ಆಂದೋಲನಕ್ಕೆ ಸಾವಿರಾರು ಜನರು ಕೈಜೋಡಿಸುತ್ತೇವೆ.

IMRAN PASHA, RTI ACTIVIST

 ನಾನು ಪ್ರಧಾನಿ ಶ್ರೀ ನರೇಂದ್ರಮೋದಿಯವರ ಹೌಸಿಂಗ್ ಫಾರ್ ಆಲ್ – 2022 ಯೋಜನೆಯ ಬೆಂಬಲಿಗ, ಅವರ ಕಾಲಮಿತಿ ನಿಗದಿಯೊಳಗೆ ನಿವೇಶನವನ್ನಾದರೂ ಕೊಡಲು ಸರ್ಕಾರ ಮುಂದಾಗಬೇಕು. ಇದೂವರೆಗೂ ಆ ಕೆಲಸ ಪರಿಪೂರ್ಣವಾಗಿಲ್ಲ. ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಈ ಆಂದೋಲನದಲ್ಲಿ  ನಾನು ಸಕ್ರೀಯವಾಗಿ ತೊಡಗಿಸಿ, ಇಡೀ ಜಿಲೆಯ ಸರ್ಕಾರಿ ಜಮೀನು ಹುಡಕಲು ಶ್ರಮಿಸಿಸುತ್ತೇನೆ. ಈಗಾಗಲೇ ಎಸಿಯವರಿಗೆ ಮನವಿ ಸಲ್ಲಿಸಲು ಮುಂದಾಗಿದ್ದೇನೆ.

SRI NARASHIMA MURTHY

ನಾವು ಹತ್ತಾರು ವರ್ಷಗಳಿಂದ ಆಂದೋಲನ ಮಾಡಿಕೊಂಡು ನಿರಂತರ ಹೋರಾಟ ಮಾಡುವ ಈ ಯೋಜನೆಗೆ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರ ಈ ಆಂದೋಲನ ನಿಜಕ್ಕೂ ಸ್ವಾಗತ, ಇಡೀ ಜಿಲ್ಲೆಯ ಕೊಳಗೇರಿಗಳ ನಿವೇಶನ ಸಮಸ್ಯೆಗೆ ನಾವೂ ಸಹಕರಿಸುತ್ತೇವೆ. ಸರ್ಕಾರಿ ಜಮೀನು ಗುರುತಿಸುವ ಕಾರ್ಯ ಆರಂಬಿಸಿದ್ದೇವೆ.

 ‘HOUSING FORR ALL 2022 ವಿಷನ್ ಗ್ರೂಪ್’ ರಚಿಸಿದ್ದೇವೆ, ಇದರಲ್ಲಿ ಸದಸ್ಯರಾಗಲು ಕನಿಷ್ಟ ಒಂದು ಗುಂಟೆ ಸರ್ಕಾರಿ ಜಮೀನು ಬಗ್ಗೆ ಮಾಹಿತಿ ನೀಡುವವರು ಸದಸ್ಯರಾಗ ಬಹುದು. ವಿಷನ್ ಗ್ರೂಪ್ ಸದಸ್ಯರು, ಅವರು ಗುರುತಿಸಿರುವ ಜಮೀನು, ಅಧಿಕಾರಿಗಳೂ ಕೈಗೊಂಡ ಕ್ರಮಗಳ ಮಾಹಿತಿಯೂ ಸೇರಿದಂತೆ ಪ್ರಧಾನಿ ಶ್ರೀ ನರೇಂದ್ರಮೋದಿಯವರಿಗೆ ರವಾನೆಯಾಗಲಿದೆ.

 2022 ರೊಳಗೆ ನಿವೇಶನ ರಹಿತರು ತುಮಕೂರು ಜಿಲ್ಲೆಯಲ್ಲಿ ಒಬ್ಬರೂ ಇರಲೇ ಬಾರದು ಇದೇ ನಮ್ಮ ಘೋಷವಾಕ್ಯ. ವಸತಿ ನೀಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಗೆ ಅವಲಂಬಿಸಿದೆ.