15th September 2024
Share

TUMAKURU:SHAKTHI PEETA FOUNDATION

ಸಿದ್ಧರ ಬೆಟ್ಟ ಹಲವಾರು ವಿಷಯಗಳಿಗೆ ಹೆಸರು ಮಾಡಿದೆ, ನನಗೆ ಇದೂವರೆಗೂ ಗೊತ್ತಿಲ್ಲದ ಅಂಶವೊಂದು ಉತ್ತರ ಕರ್ನಾಟಕದ ನೀರಾವರಿ ತಜ್ಞರಾದ ಶ್ರೀ ಸಜ್ಜನ್ ರವರಿಂದ ತಿಳಿಯಿತು. ತುಮಕೂರು ಜಿಲ್ಲಾ ದಿಶಾ ಸಮಿತಿಗೆ ರಾಜ್ಯದ ಆನೇಕ ನೀರಾವರಿ ತಜ್ಞರನ್ನು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಆಹ್ವಾನಿಸಿದ್ದರು.

 ಅಂದಿನ ಸಭೆಗೆ ಹಾಜಾರಾಗಿದ್ದ ಸಜ್ಜನ್‌ರವರು ತುಮಕೂರು ಜಿಲ್ಲೆಯ ಒಂದು ಸ್ಥಳದ ಗುರುತು ತೋರಿಸಿ ಇದು ಕೃಷ್ಣಾ, ಕಾವೇರಿ ಮತ್ತು ಪೆನ್ನಾರ್ ಮೀಟಿಂಗ್ ಪಾಯಿಂಟ್, ಎಂದಾಗ ನನಗಷ್ಟೆ ಅಲ್ಲ ಸಭೆಯಲ್ಲಿದ್ದ ಸಂಸದರು, ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲರಿಗೂ ಆಶ್ಚರ್ಯವಾಯಿತು.

 ನಂತರ ನಾನು ಈ ಜಾಡು ಹಿಡಿದಾಗ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಅಧಿಕಾರಿಗಳು ‘ಸಿದ್ಧರಬೆಟ್ಟದಲ್ಲಿ’ ಈ ಪಾಯಿಂಟ್ ಇದೆ ಎಂದು ತಿಳಿಸಿದರು. ಬಹುತೇಕ ಮುಂದಿನವಾರ ಆ ಜಾಗವನ್ನು ಹುಡುಕುವ ಕೆಲಸ ಮಾಡಬೇಕು ಎಂದು ಕೊಂಡಿದ್ದೇನೆ. ತಾವೂ ಜೊತೆಗೂಡಬಹುದು.

ಸಿದ್ಧರಬೆಟ್ಟ, ಆಯುಷ್ ಪಾರ್ಕ್, ಕೃಷ್ಣಾ, ಕಾವೇರಿ ಮತ್ತು ಪೆನ್ನಾರ್ ಮೀಟಿಂಗ್ ಪಾಯಿಂಟ್, ಕುರುಂಕೋಟೆ ಸಂಸದರ ಆದರ್ಶ ಗ್ರಾಮ ಅಧ್ಯಯನ ಮಾಡಿ ವರದಿ ನೀಡಲು  ಸಿದ್ಧರ ಬೆಟ್ಟ ವಿಷನ್‌ಗ್ರೂಪ್’ ರಚಿಸಲಾಗಿದೆ. ಆಸಕ್ತರು ನೋಂದಾಯಿಸಿಕೊಂಡು ತಮ್ಮ ಸಲಹೆ, ಮಾರ್ಗದರ್ಶನ ನೀಡಬಹುದು.

 ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆಕ್ಟಿವಿಟಿ ಪಾಯಿಂಟ್ಸ್, ಪ್ರಾಜೆಕ್ಟ್ ವರ್ಕ್ಸ್ ಮತ್ತು ಪಿ.ಹೆಚ್.ಡಿ ಮಾಡಲು ಆಸಕ್ತಿ ಇರುವ ಒಂದು ವಿದ್ಯಾರ್ಥಿಗಳ ತಂಡ ಈಗಾಗಲೇ ಮುಂದೆ ಬಂದಿದೆ, ಅವರ ಜೊತೆ ತಾವೂ ಕೈಜೋಡಿಸಬಹುದು. ಜೊತೆಗೆ ಈಗಾಗಲೇ ಇಲ್ಲಿನ ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವವರು, ಇಲ್ಲಿರುವ ಔಷಧಿ ಗಿಡಗಳ ಗುರುತು ಬಲ್ಲವರು ಇದ್ದಲ್ಲಿ ತಿಳಿಸಲು ತಮ್ಮಲ್ಲಿ ಮನವಿ.

ವಿದ್ಯಾರ್ಥಿಗಳ ಅಭಿಪ್ರಾಯ ನೋಡೋಣ.

ಎಸ್.ಎಸ್.ಐ.ಟಿ.ಯ BE CIVIL 4 ನೇ ಸೆಮಿಸ್ಟರ್ ವಿದ್ಯಾರ್ಥಿ ಚಿ. ಎಮ್.ವಿ.ಸುಹಾಸ್ ನನಗೆ ಮೂರು ನದಿಗಳ ಮೀಟಿಂಗ್ ಪಾಯಿಂಟ್  ಬಗ್ಗೆ ವಿಶೇಷ ಆಸಕ್ತಿ ಮೂಡಿಸಿದೆ. ನಮ್ಮ ತಂಡ ಸಹಕರಿಸಲಿದೆ. ಪರಿಪೂರ್ಣವಾದ ಅಧ್ಯಯನ ಮಾಡುತ್ತೇವೆ. ನಮಗೆ ಮಾರ್ಗದರ್ಶನ ನೀಡಿ.

ಎಸ್.ಐ.ಟಿ.ಯ BE COMPUTER SCIENCE 4 ನೇ ಸೆಮಿಸ್ಟರ್ ವಿದ್ಯಾರ್ಥಿನಿ ಕು.ಶ್ರಾವ್ಯ ನಮ್ಮ ಭಾಗದ ನಿರುದ್ಯೋಗಿಗಳಿಗೆ ಮತ್ತು ರೈತರಿಗೆ ಉದ್ಯೋಗ ಸಿಗುವುದಾದರೆ, ನಮ್ಮ ತಂಡವೂ ಸಹಕರಿಸಲಿದೆ. ನಾವು ಯಾವ ರೀತಿ ಅಧ್ಯಯನ ಮಾಡಬೇಕು ಎಂಬ ಬಗ್ಗೆ ಸಲಹೆ ನೀಡಿದರೆ ನಾವೂ ಶ್ರಮಿಸುತ್ತೇವೆ. 

ಸಿದ್ಧಗಂಗಾ ಸಂಸ್ಥೆಯಲ್ಲಿ  ಎರಡನೇ ವರ್ಷದ ಬಿಸಿಎ ಮಾಡುತ್ತಿರುವ ಚಿ.ಶ್ರೇಯಸ್ ನಮ್ಮ ಭಾಗದ ರೈತರ ಆದಾಯ ದುಪ್ಪಟ್ಟು ಮಾಡುವುದಾದರೆ ಖಂಡಿತ ನಮ್ಮ ತಂಡವೂ ಶ್ರಮಿಸಲಿದೆ.

ವಿದ್ಯಾವಾಹಿನಿ ಕಾಲೇಜಿನಲ್ಲಿ ಪಿಯುಸಿ ಎರಡನೇ ವರ್ಷದ ವಾಣಿಜ್ಯ ವಿಭಾಗದ ಚಿ.ಸುಪ್ರೀತ್ ತಮ್ಮ ಜಮೀನಿನನಲ್ಲಿನ ಸೋಗೆ ಕಡ್ಡಿ, ಅಡಿಕೆ ಪಟ್ಟೆಗೆ ಬೆಲೆ ದೊರಕುವಂತೆ  ರೈತರ ಜಮೀನನಲ್ಲಿ ಬೆಳೆಯುವ ಔಷಧಿ ಸಸ್ಯಗಳಿಗೆ ಬೆಲೆ ಬರುವುದಾದರೆ ಇದಕ್ಕಿಂತ ಉತ್ತಮ ಕೆಲಸ ಇನ್ನೇನಿದೆ. ನಮ್ಮ ತಂಡವೂ ಸಹಕರಿಸಲಿದೆ.

 ಪ್ರೂಡೆಂಟ್ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಕು.ಶಿರಿ ಲೋಕೇಶ್ ನಮ್ಮ ಊರಿನ ಪಕ್ಕವಿರುವ ಸಿದ್ಧರಬೆಟ್ಟದ ಮಹತ್ವದ ಬಗ್ಗೆ ನಮಗೂ ಖುಷಿ ಇದೆ. ನಮ್ಮ ತಂಡವೂ ಸಹಕರಿಸಿಲಿದೆ.