27th July 2024
Share

TUMAKURU:SHAKTHI PEETA FOUNDATION

ನಿವೇಶನ ರಹಿತರು ಎಂದರೆ ಯಾರು? ಕರ್ನಾಟಕದ ಯಾವುದೇ ಭಾಗದಲ್ಲಿ ಒಂದು ಮನೆ ಅಥವಾ ನಿವೇಶನ ಅಥವಾ ಪಲಾನುಭವಿ ಹೆಸರಿಗೆ ಅಥವಾ ಅವರ ತಂದೆ, ತಾಯಿ ಅಥವಾ ಅವಿಭಾಜ್ಯ ಕುಟುಂಬದ ಯಾರದೇ ಹೆಸರಿನಲ್ಲಿ ಯಾವುದೇ ಕೃಷಿ ಜಮೀನು ಇಲ್ಲದವರು ನಿವೇಶನ ರಹಿತರು.

 ಕೃಷಿ ಜಮೀನು ಇದ್ದರೂ ಅದರಲ್ಲಿ ಮನೆ ನಿರ್ಮಾಣ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಕೃಷಿ ಜಮೀನು ಇದ್ದು ಆ ಜಮೀನಿಗೆ ದಾರಿ ಇಲ್ಲದಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

 ಗ್ರಾಮ ಪಂಚಾಯಿತಿ ಪ್ರತಿ ವರ್ಷ ಏಫ್ರಿಲ್ ತಿಂಗಳಿನಲ್ಲಿ ನಿವೇಶನ ರಹಿತರ ಪಟ್ಟಿ ತಯಾರಿಸಿ, ತಾಲ್ಲೂಕು ಪಂಚಾಯಿತಿಗೆ ಸಲ್ಲಿಸಬೇಕು. ಅಂದರೆ ಈಗಾಗಲೇ ಕಳೆದ ಏಫ್ರಿಲ್ ತಿಂಗಳಿನಲ್ಲಿ ಸಿದ್ಧವಾಗಿರುವ ಪಟ್ಟಿಯನ್ನು ಎಲ್ಲಾ ಗ್ರಾಮ ಲೆಕ್ಕಿಗರು, ರೆವಿನ್ಯೂ ಇನ್‌ಸ್ಪೆಕ್ಟರ್ ಮತ್ತು ತಹಶೀಲ್ಧಾರ್ ಪರಿಶೀಲಿಸಿ ಇವರ ಕುಟುಂಬದವರ ಹೆಸರಿನಲ್ಲಿ ಯಾವುದೇ ಕೃಷಿ ಜಮೀನು ಇಲ್ಲ ಎಂದು ದೃಢೀಕರಿಸಬೇಕು. ಇದೇ ರೀತಿ ನಗರ ಸ್ಥಳೀಯ ಸಂಸ್ಥೆಗಳು ಪಟ್ಟಿ ಸಿದ್ಧಪಡಿಸಬೇಕು.

 ಈ ಪಟ್ಟಿಯನ್ನು ಪ್ರತಿ ಗ್ರಾಮಗಳಲ್ಲೂ ಗ್ರಾಮ ಸಭೆಗಳಲ್ಲಿ ಪ್ರಕಟಿಸಿ ಅನುಮೋದನೆ ಪಡೆಯಬೇಕು. ನಿಜವಾದ ನಿವೇಶನ ರಹಿತರ ಪಲಾನುಭವಿಗಳ ಪಟ್ಟಿ ದೊರೆಯಲಿದೆ. ನಿವೇಶನ ರಹಿತರಿಗೆ ಆಯಾ ಗ್ರಾಮದಲ್ಲಿ ಇರುವ ಸರ್ಕಾರಿ ಜಮೀನಿನಲ್ಲಿ ನಿವೇಶನ ನೀಡುವುದು. ಒಂದು ವೇಳೆ ಸರ್ಕಾರಿ ಜಮೀನು ಇಲ್ಲದಿದ್ದಲ್ಲಿ ಮಾತ್ರ ಅಗತ್ಯವಿರುವ ನಿವೇಶನಗಳಿಗೆ ಭೂ ಸ್ವಾಧೀನ ಪಡಿಸಿಕೊಳ್ಳಲು ಪ್ರಸ್ತಾವನೆ ಸಲ್ಲಿಸಬೇಕು.

 ಈ ರೀತಿ ಮಾಡದೇ ಬೋಗಸ್ ಪಲಾನುಭವಿಗಳ ಪಟ್ಟಿ ನೀಡಿದಲ್ಲಿ, ಅಂತಹ ಅಧಿಕಾರಿಗಳಿಗೆ  ನಿಯಮ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲೇ ಬೇಕು. ಒಂದು ವೇಳೆ ಇದು ಯಾವುದನ್ನು ಮಾಡದೇ ಸಲ್ಲಿಸಿದ ಪಟ್ಟಿಯನ್ನು ತಪಾಸಣೆ ಮಾಡಿಸಿ ವರದಿ ಪಡೆಯಬೇಕು. ಎರಡನ್ನೂ ಮಾಡದೇ ಮೌನವಾಗಿರುವ ಅಧಿಕಾರಿಗಳ ವಿರುದ್ಧ ನಿಯಮ ಪ್ರಕಾರ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡುವ ಅಧಿಕಾರ ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗಿದೆ.

  ತುಮಕೂರು ಜಿಲ್ಲಾ ದಿಶಾ ಸಮಿತಿಯ ಮುಂದಿನ ಸಭೆಯಲ್ಲಿ ಇದೇ ವಿಷಯ ಪ್ರಮುಖವಾಗಿರಲಿದೆ. ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವುದು ಸೂಕ್ತ. ತುಮಕೂರು ಜಿಐಎಸ್ ನಿವೇಶನ ರಹಿತರ ಪಟ್ಟಿಯ ಜಿಐಎಸ್ ಲೇಯರ್ ಮಾಡಲು ಕ್ರಮ ಕೈಗೊಳ್ಳಬೇಕು.