16th September 2024
Share

TUMAKURU:SHAKTHI PEETA FOUNDATION

 ತುಮಕೂರು ಜಿಲ್ಲೆಯ, ಕೊರಟಗೆರೆ ತಾಲ್ಲೂಕಿನ, ಸಿದ್ಧರಬೆಟ್ಟದಲ್ಲಿ ಕೃಷ್ಣಾ, ಕಾವೇರಿ ಮತ್ತು ಉತ್ತರ ಪೆನ್ನಾರ್ ಮೀಟಿಂಗ್ ಪಾಯಿಂಟ್‌ನ್ನು ತುಮಕೂರಿನ ಸ್ಪೆಕ್ಟ್ರಾ ಅಸೋಶಿಸಿಯೇಟ್ಸ್ ಗುರುತಿಸಿದೆ. ಜುಂಜರಾಮಹಳ್ಳಿ ಗ್ರಾಮದಲ್ಲಿದೆ. ಇದು ಸರಿಯಾಗಿದ್ದಲ್ಲಿ ಜುಂಜರಾಮನಹಳ್ಳಿಗೆ ಶುಕ್ರದೆಸೆ ಬರಲಿದೆ. ಇದೊಂದು ಜಿಲ್ಲೆಯ ಪ್ರವಾಸಿ ಕೇಂದ್ರವಾಗುವ ಅವಕಾಶಗಳಿವೆ.

  ಈ ಪಾಯಿಂಟ್‌ನ್ನು ಬೆಟ್ಟದ ಮೇಲೆ ಗುರುತಿಸುವ ಕೆಲಸ ಆಗಬೇಕು ಹಾಗೂ ಇದು ಸರಿಯಾಗಿದೆಯೇ ಅಥವಾ ಬದಲಾವಣೆ ಮಾಡಬೇಕೆ ಎಂಬ ಬಗ್ಗೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಕೇಂದ್ರದ ತಾಂತ್ರಿಕ ನಿರ್ದೇಶಕರಾದ  ಶ್ರೀ ಕೆ.ಜೈಪ್ರಕಾಶ್‌ರವರ ತಂಡ ತಪಾಸಣೆ ಮಾಡಲು ಸಮಾಲೋಚನೆ ನಡೆಸಲಾಗಿದೆ.

 ದಿನಾಂಕ:29.09.2020 ನೇ ಮಂಗಳವಾರ ಮದ್ಯಾಹ್ನ 3 ಗಂಟೆಗೆ ಬೆಂಗಳೂರಿನ ಆನಂದ್‌ರಾವ್ ವೃತ್ತದಲ್ಲಿರುವ ಕಾವೇರಿ ನೀರಾವರಿ ನಿಗಮದ ಕಾರ್ಪೋರೇಟ್ ಕಚೇರಿಯಲ್ಲಿ ಸಭೆ ಆಯೋಜಿಸಲಾಗಿದೆ. ಈ ಸಭೆಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಭಾಗವಹಿಸಿಲಿದ್ದಾರೆ.

 ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಜಿಯೋಮೆಟಿಕ್ ಸೆಂಟರ್, ತುಮಕೂರು ಜಿಲ್ಲೆಯ ಅರಣ್ಯ ಅಧಿಕಾರಿಗಳು, ಆಯುಷ್ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಲು ಸಂಸದರು ಸೂಚಿಸಿದ್ದಾರೆ. 

 ‘ಈ ಜಾಗಕ್ಕೆ ಸುಲಭವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಲುಪಬಹುದು ಎಂಬ ಆಶಾಭಾವನೆಯಿದೆ. ಅದಕ್ಕಿಂತ ಮೊದಲು ಟ್ರಕ್ಕಿಂಗ್ ಪ್ರೇಮಿಗಳು ಬಾವುಟ ಹಾರಿಸಿದರೂ ಆಶ್ಚರ್ಯವಿಲ್ಲ, ಜುಂಜರಾಮನಹಳ್ಳಿ ಗ್ರಾಮದ ಜನರೂ ಪತ್ತೆಹಚ್ಚ ಬಹುದು ಕಾದು ನೋಡೋಣ’

 ಕೊರಟಗೆರೆಯ ಶ್ರೀ ಪರ್ವತಯ್ಯನವರು ಕರೆಮಾಡಿ ಸಿದ್ಧರಬೆಟ್ಟದ ಸುಕ್ಷೇತ್ರ  ರಂಭಾಪರಿ ಖಾಸಾ ಶಾಖಾ ಮಠದ ಶ್ರೀ.ಶ್ರೀ.ಷ.ಬ್ರ. ವೀರಭದ್ರಶಿವಾಚಾರ್ಯ ಸ್ವಾಮಿಗಳು ಸಹ ಈ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ  ಹಾಗೂ ಮುಂದಿನ ಸಭೆಯನ್ನು ಮಠದಲ್ಲಿಯೇ ಆಯೋಜಿಸುವುದಾಗಿ ತಿಳಿಸಿದರು. ನಾನು ಈ ಪಾಯಿಂಟ್ ನಲ್ಲಿಯೇ ಮುಂದಿನ ಸಭೆ ಎಂದು ಹಾಸ್ಯಮಾಡಿದ್ದೇನೆ.