1st October 2023
Share

TUMAKURU: SHAKTHIPEETA FOUNDATION

ಊರಿಗೊಂದು ಕೆರೆ- ಕೆರೆಗೆ ನದಿ ನೀರು’

ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020 ಇಂದಿಗೆ 93 ದಿವಸ.

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-30 ದಿನಾಂಕ:12.02.2021

 ಕೇಂದ್ರ ಸರ್ಕಾರದ ನದಿಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಡಿಪಿಆರ್ ಮಾಡಲು ಅಗತ್ಯಕ್ರಮಕೈಗೊಳ್ಳಲು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ದಿನಾಂಕ:09.09.2020   ರಂದು ಆದೇಶ ನೀಡಿದ್ದರು. 

ಶ್ರೀ ಜಿ.ಎಸ್.ಬಸವರಾಜ್‌ರವರ ಮನವಿ ಮೇರೆಗೆ ಬಿ.ಎಸ್.ವೈ ಆದೇಶ ನೀಡಿದ್ದ ಪತ್ರದ ಆಧಾರದ ಮೇಲೆ ದಿನಾಂಕ:12.02.2021 ರಂದು ಕಡತದಲ್ಲಿ ಅನುಮೋದನೆ ಪಡೆಯಲು 93 ದಿವಸಗಳು ಆಗಿವೆ. ಬಹುತೇಕ ಮುಂದಿನ 4 ತಿಂಗಳು ಮುಗಿಯುವುದರೊಳಗೆ ಡಿಪಿಆರ್ ಪೂರ್ಣಗೊಳಿಸುವುದಾಗಿ ಉನ್ನತ ಮಟ್ಟದ ಅಧಿಕಾರಿಗಳು ದೃಢ ನಿರ್ಧಾರ ಮಾಡಿದ್ದಾರೆ. ಕಾದು ನೋಡೋಣ.

ನಿಜಕ್ಕೂ ಈ ಡಿಪಿಆರ್ ಧಾರ್ಮಿಕವಾಗಿ ಭಗವದ್ಗೀತೆ, ಬೈಬಲ್, ಖುರಾನ ಗಳಂತೆ ಕರ್ನಾಟಕದ ದೃಷ್ಠಿಯಲ್ಲಿ ಜಲಗ್ರಂಥ’ ಆಗಲಿದೆ. ರಾಜ್ಯದ ಒಂದೊಂದು ಹನಿ ನದಿ ನೀರು ಯಾವ ಗ್ರಾಮದಲ್ಲಿ ಬಳಕೆಯಾಗುತ್ತಿದೆ. ಹಾಗೂ ಉಳಿದ ನದಿ ನೀರನ್ನು ಯಾವ ಗ್ರಾಮಕ್ಕೆ ಹೇಗೆ ಬಳಸ ಬಹುದು ಎಂಬ ಸರ್ಕಾರಿ ಗೆಜೆಟ್ ಆಗಲಿದೆ.

ಆದರೇ ಯಾವಾಗ ಬಳಸ ಬಹುದು ಎಂಬುದು ವಿಟಮಿನ್ ಎಂ’ ಸ್ಥಿತಿಗೆ ಅನುಗುಣವಾಗಲಿದೆ.

About The Author