22nd December 2024
Share
JALASHAKTHI MEETING AT DELLHI

TUMAKURU:SHAKTHIPEETA FOUNDATION

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಜಾರಿ ಕನಸು ಕಂಡವರು. ಇಡೀ ಜೀವಮಾನವೇ ರಾಜ್ಯದ ನದಿ ಜೋಡಣೆ ಬಗ್ಗೆ ಸಂಶೋಧನೆ ಮಾಡಿದವರು.

 ದಿನಾಂಕ:12.02.2021 ರಂದು ಅವರ ಜನ್ಮದಿನದಂದೇ, ಕಾಕತಾಳೀಯ ಎಂಬಂತೆ ಕರ್ನಾಟಕ ರಾಜ್ಯದ ನದಿ ಜೋಡಣೆ ಮೂಲಕ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಜಾರಿ ಕಡತಕ್ಕೆ ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ ಡಿಪಿಆರ್ ಮಾಡಲು ರಾಜ್ಯದ ಜಲಸಂಪನ್ಮೂಲ ಇಲಾಖೆ ಕೈಗೊಂಡಿದ್ದ ಸಭೆ ನಡವಳಿಕೆಗೆ ಅಂದೇ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಅನುಮೋದಿಸಿದ್ದಾರೆ. ವಿಷಯ ತಿಳಿಸಿದ ಶ್ರೀ ಶಿವಶಂಕರ್‌ರವರಿಗೆ ಸಂಸದರು ಅಭಿನಂದಿಸಿದರು.

  ಅಂದೇ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರಸಿಂಗ್‌ರವರಿಗೆ  ದೆಹಲಿಯಲ್ಲಿ ನಡೆದ ಜಲಶಕ್ತಿ ಸಮಿತಿ ಸಭೆಯಲ್ಲಿ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಹಾವೇರಿ ಲೋಕಸಭಾ ಸದಸ್ಯರಾದ ಶ್ರೀ ಶಿವಕುಮಾರ್ ಉದಾಸಿರವರು ನೀಡಿದ ಮನವಿಗೆ ಸ್ಪಂಧಿಸಿ, ಮನವಿಯಲ್ಲಿನ ಎಲ್ಲಾ ಅಂಶಗಳ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

 ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ನಾನು ಅಂದು ದೆಹಲಿಯ ರೈಲ್ವೇ ಬೋರ್ಡ್ ಚೇರ್‍ಮನ್ ಕಂ ಸಿಇಓ ರವರ ಭೇಟಿಗಾಗಿ ಲಿಪ್ಟ್‌ನಲ್ಲಿದ್ದಾಗ ನನಗೆ ಹೇಳಿದ ಮಾತು, ನೋಡಯ್ಯ ಮುದಕಪ್ಪ ಇದ್ದರೆ ಅದೆಷ್ಟು ಖುಷಿ ಪಡುತ್ತಿದ್ದರು ಅಲ್ವ. ಅವರು ಹುಟ್ಟಿದ ದಿನವೇ ನನಗೂ ಸಂತೋಷವಾಗಿದೆ. ಸ್ವರ್ಗದಲ್ಲಿ ಅವರು ಬಡ್ಡಿ ಮಕ್ಕಳು ಇವರಿಬ್ಬರು ಈಗಲೂ ಒದ್ದಾಡುತ್ತಿದ್ದಾರೆ ಅಂತ ನಗುತ್ತಿರ ಬಹುದು ಅಲ್ವ ಎಂದವರ ಕಣ್ಣಲ್ಲಿ ನೀರು ಹರಿಯಿತು.

 ನೋಡಪ್ಪ ಜೀವಮಾನದಲ್ಲಿ ನಾವು ಈ ಯೋಜನೆ ಮಂಜೂರು ಮಾಡಿಸಲೇ ಬೇಕು. ಅಂದೇ ಪರಮಶಿವಯ್ಯನವರ ಆತ್ಮಕ್ಕೆ ತೃಪ್ತಿ. ರಾಜ್ಯದ ಉನ್ನತ ಮಟ್ಟದಲ್ಲಿರುವ ಅಧಿಕಾರಿಗಳು ನಿಜಕ್ಕೂ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಶ್ರೀ ಬಿ.ಎಸ್.ಯಡಿಯೂರಪ್ಪನವರು ಮತ್ತು ಶ್ರೀ ರಮೇಶ್ ಜಾರಕಿಹೊಳೆರವರು ಹಸಿರು ನಿಶಾನೆ ನೀಡಿದ್ದಾರೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಪುಣ್ಯಾತ್ಮರ ಆಶೀರ್ವಾದ ಇರಬೇಕಷ್ಟೆ, ಸಾಯಿಬಾಬಾ ಏನು ಮಾಡುತ್ತಾರೆ ನೋಡೊಣ ಎಂದರು.

108 ಶಕ್ತಿದೇವತೆಗಳ ಆಶೀರ್ವಾದ ನಮ್ಮ ರಾಜ್ಯದ ಜನತೆ ಮೇಲಿದೆ. ನದಿ ಜೋಡಣೆಯಲ್ಲಿ ನಮ್ಮ ರಾಜ್ಯ ದಾಖಲೆ ಸೃಷ್ಠಿಸಲಿದೆ. ಎಷ್ಟೇ ಅಸಮಾಧಾನ ಇದ್ದರೂ ಉನ್ನತ ಮಟ್ಟದಲ್ಲಿರುವ ಅಧಿಕಾರಿಗಳು ಸಹ ನಮ್ಮ ಅವಧಿಯಲ್ಲಿ ಈ ಯೋಜನೆ ಜಾರಿಯಾಗಲೇ ಬೇಕು ಎಂಬ ಪಣ ತೊಟ್ಟಿದ್ದಾರೆ. ಎಂಬ ಮಾತಿಗೆ ಒಂದು ದಿವಸವೂ ನಮಗೆ ಒಂದೊಂದು ವರ್ಷ ಎಂಬಂತೆ ಶ್ರಮಿಸಿದರೇ ಮಾತ್ರ ಪಲಿತಾಂಶ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದು ಕೊಳ್ಳಲು  ಬಸವರಾಜ್‌ರವರು ಇಂಗಿತ ವ್ಯಕ್ತ ಪಡಿಸಿದರು.