22nd November 2024
Share

TUMAKURU:SHAKTHIPEETA FOUNDATION

ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಮಾರಶೆಟ್ಟಿಹಳ್ಳಿ ಪೈಲಟ್
ನಮ್ಮ ರಾಜ್ಯ ಸರಕಾರ ಮಹತ್ವದ ಯೋಜನೆ ಜಾರಿಗೊಳಿಸಲು ಸಜ್ಜಾಗಿದೆ. ರಾಜ್ಯದ ನದಿ ಜೋಡಣೆ ಮೂಲಕ, ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿರುವ ಕೆರೆ-ಕಟ್ಟೆ- ಪಿಕ್‌ ಅಫ್-‌ ಭಾಂಧಾರ ಹೀಗೆ ಯಾವುದೇ ಜಲಸಂಗ್ರಹಾಗಾರ ಇರಲಿ, ಅವುಗಳಿಗೆ ನದಿ ನೀರು ತುಂಬಿಸುವ ಮೂಲಕ ರೈತನ ಬಾಳು ಹಸನು ಮಾಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ ರವರ ಮನವಿ ಮೇರೆಗೆ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಆದೇಶ ಮಾಡಿದ್ದಾರೆ.


ಇದು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅವರ ಕನಸಾಗಿತ್ತು. ಈ ಯೋಜನೆ ಡಿಪಿಆರ್‌ ಮಾಡಲು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕರನ್ನು ನೋಡೆಲ್‌ ಅಧಿಕಾರಿಯಾಗಿ ನೇಮಿಸಿದ್ದಾರೆ. ಅವರಿಗೆ ದಿನಾಂಕ:22.02.2021 ರಂದು ಜಲಸಂಪನ್ಮೂಲ ಇಲಾಖೆಯಿಂದ ಈ ಪತ್ರ ಬರೆದಿದ್ದಾರೆ. ನಿನ್ನೆಯಷ್ಟೆ ನನಗೂ ಈ ಪತ್ರ ದೊರೆತಿದೆ. ಮಾರಶೆಟ್ಟಿಹಳ್ಳಿ ಸಂಸದರ ಆದಶ ಗ್ರಾಮ ಯೋಜನೆಗೆ ಆಯ್ಕೆ ಆದಾಗಲೇ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಪೈಲಟ್‌ ಯೋಜನೆ ಮಾಡಬೇಕು ಎಂಬುದಾಗಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕರಾದ ಶ್ರೀ ಕೆ.ಜೈಪ್ರಕಾಶ್‌ ರವರೊಂದಿಗೆ ಸಮಾಲೋಚನೆ ನಡೆಸಲಾಗಿತ್ತು. ಈ ಬಗ್ಗೆ ಇಇ ರವರಾದ ಶ್ರೀ ಮೋಹನ್‌ ಕುಮಾರ್‌ ರವರಿಗೆ ಸೂಚಿಸಿದ್ದಾರೆ. ಇಂದೇ(24.02.2021) ವಿಡಿಪಿ ಪ್ರಗತಿ ಪರಿಶೀಲಾನೆ ಸಭೆ ಇದೆ. ಇಂದಿನಿಂದಲೇ ಈ ಯೋಜನೆ ಬಗ್ಗೆ ವ್ಯಾಪಕ ಜಲಶಕ್ತಿ ಆಂದೋಲನವನ್ನು ಹಮ್ಮಿಕೊಳ್ಳಲು ಚಿಂತನೆ ಮಾಡಲಾಗಿದೆ.


ಪರಮಶಿವಯ್ಯನವರ ಮತ್ತು ಬಸವರಾಜ್‌ ರವರ ಈ ಕನಸನ್ನು ನನಸು ಮಾಡಲು ಕಳೆದ 1997 ರಿಂದ ಅಭಿವೃದ್ಧಿ ರೆವೂಲ್ಯೂಷನ್‌ ಫೋರಂ ಮತ್ತು ಶಕ್ತಿಪೀಠ ಫೌಂಡೇಷನ್‌ ಮೂಲಕ ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದೇನೆ. ಇಂದಿನಿಂದ ಈ ಯೋಜನೆ ದೆಹಲಿಗೆ ತಲುಪವವರೆಗೂ ನಿರಂತರ ಚಟುವಟಿಕೆ ನಡೆಯಲಿದೆ.


ರಾಜ್ಯದ 40 ಜನ ಸಂಸದರು ತಮ್ಮ ಕ್ಷೇತ್ರದಲ್ಲಿ ಸಾಗಿ ಯೋಜನೆಯಡಿಯಲ್ಲಿ ಆಯ್ಕೆಯಾದ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಈ ಯೋಜನೆ ಆರಂಭಿಸಲು ಶ್ರಮಿಸಲು ಸಹ ಸಮಾಲೋಚನೆ ನಡೆದಿದೆ. ಕೇಂದ್ರದಿಂದ ಈ ಯೋಜನೆ ಜಾರಿಯಾಗ ಬೇಕಾದರೆ ಸಂಸದರ ಪಾತ್ರ ಬಹಳ ಮುಖ್ಯವಾಗಿದೆ. ಈಗಾಗಲೇ ಶ್ರೀ ಜಿ.ಎಸ್.ಬಸವರಾಜ್‌ ರವರು ಬರೆದ ಪತ್ರದ ಹಿನ್ನಲೆಯಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್‌ ಶೇಖಾವತ್‌ ರವರು ರಾಜ್ಯಕ್ಕೆ ಪತ್ರ ಬರೆದಿದ್ದಾರೆ. ಅದು ಇದೂವರೆಗೂ ಧೂಳು ತಿನ್ನುತ್ತಿತ್ತು ಇಂದಿನಿಂದ ಆ ಕಡತಕ್ಕೆ ಜೀವ ಬಂದಿದೆ.