25th April 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ ಉತ್ತರ ಪ್ರದೇಶ ರಾಜ್ಯದ ದಿಶಾ ಸಮಿತಿ ಸದಸ್ಯರಾಗಿ ಶ್ರೀ ಮತಿ ಸೋನಿಯಾಗಾಂಧಿರವರು, ಶ್ರೀ ಮತಿ ಮನೇಕಾ ಗಾಂದಿರವರು, ಶ್ರೀ ಮಲಯಾಂ ಸಿಂಗ್ ಯಾದವ್ ರವರು ಸೇರಿದಂತೆ ಸುಮಾರು 16 ಜನ ಸಂಸದರು ಮತ್ತು ರಾಜ್ಯ ಸಭಾ ಸದಸ್ಯರುಗಳನ್ನು ನೇಮಕ ಮಾಡಿದೆ.

ಪ್ರತಿಯೊಂದು ರಾಜ್ಯದ ದಿಶಾ ಸಮಿತಿಗೆ ಎಲ್ಲಾ ಪಕ್ಷಗಳ ದಿಗ್ಗಜರುಗಳನ್ನು ನೇಮಕ ಮಾಡಿದೆ. ಆಯಾ ರಾಜ್ಯದ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಇವರೆಲ್ಲಾ ಸಭೆ ಸೇರಿ, ಪಕ್ಷಗಳನ್ನು ಹೊರತುಪಡಿಸಿ, ರಾಜ್ಯದ ಅಭಿವೃದ್ಧಿಗೆ, ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದರೇ ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲವೇ.

ಆದರೇ ಕೆಲವು ರಾಜ್ಯಗಳ ಮುಖ್ಯ ಮಂತ್ರಿಗಳು 2016 ರಿಂದಲೂ ರಾಜ್ಯ ಮಟ್ಟದ ದಿಶಾ ಸಮಿತಿಗಳನ್ನೇ ರಚಿಸಿಲ್ಲ. ಬಿಜೆಪಿ ಪಕ್ಷದ ಮುಖ್ಯ ಮಂತ್ರಿಗಳಿದ್ದರೂ ರಾಜ್ಯ ಮಟ್ಟದ ದಿಶಾ ಸಮಿತಿ ಸಭೆ ನಡೆಸಿಲ್ಲ, ಇದು ಕೇಂದ್ರ ಸರ್ಕಾರಕ್ಕೆ ಮಾಡಿದ ಅಪಮಾನವಾಗುವುದಿಲ್ಲವೇ, ಕೇಂದ್ರದ ಉನ್ನತ ಮಟ್ಟದ ಅಧಿಕಾರಿಯೊಬ್ಬರೂ ನನಗೆ ಕೇಳಿದ ಪ್ರಶ್ನೆ?

ದೇಶದ್ಯಾಂತ ಇದಕ್ಕೊಂದು ತಾರ್ಕಿಕ ಅಂತ್ಯವನ್ನು ಶಕ್ತಿಪೀಠ ಫೌಂಡೇಷನ್ ಮಾಡಲಿದೆ, ಕಾದು ನೋಡಿ ಸಾರ್ ಎಂಬ ಉತ್ತರ ನೀಡಿದ್ದೇನೆ.