26th July 2024
Share

TUMAKURU:SHAKTHIPEETA FOUNDATION

ತುಮಕೂರಿನ ಶಕ್ತಿಪೀಠ ಫೌಂಡೇಷನ್ ದೆಹಲಿಯಲ್ಲಿ ವಾಸವಿರುವ ಕರ್ನಾಟಕ ರಾಜ್ಯದ ಅಧಿಕಾರಿಗಳು, ನೌಕರರು ಮತ್ತು ಇತರೆ ವರ್ಗದ ಅಭಿವೃದ್ಧಿ ಆಸಕ್ತರನ್ನು ಸೇರಿಸಿ ಒಂದು ಗ್ರೂಪ್ ರಚಿಸಲಾಗಿದೆ. ನನಗೆ ಇದೂವರೆಗೂ ಒಂದಲ್ಲ ಒಂದು ರೀತಿ ಸಂಪರ್ಕವಿರುವವರನ್ನು ಈಗ ಸೇರ್ಪಡೆ ಮಾಡಲಾಗಿದೆ.

ಇತರೆಯವರ ಸಂಪರ್ಕ ನಂಬರ್ ಕೊಟ್ಟಲ್ಲಿ ಅವರನ್ನು ಸಹ ಗ್ರೂಪ್‌ಗೆ ಸೇರ್ಪಡೆ ಮಾಡಲಾಗುವುದು. ನಮ್ಮ ಈ ಗ್ರೂಪ್ ಉದ್ದೇಶ ದೇಶದ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕಿಂತಲೂ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರದಿಂತ ಕರ್ನಾಟಕ ರಾಜ್ಯ ಪಡೆಯಬೇಕು.

ಕಳೆದ 32 ವರ್ಷಗಳ ಸಾರ್ವಜನಿಕ ಜೀವನದ ಅಭಿವೃದ್ಧಿ ಹೋರಾಟದ ಅನುಭವ, ಸುಮಾರು 20 ವರ್ಷಗಳಿಂದ ತುಮಕೂರಿನಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮುಖಾಂತರ ತುಮಕೂರು ನಗರ ಮತ್ತು ತುಮಕೂರು ಜಿಲ್ಲೆಯ ಅಭಿವೃದ್ಧಿಗಾಗಿ ಸವೆಸಿದ ದಾರಿ, ಜೊತೆಗೆ ಕಳೆದ 31 ವರ್ಷಗಳಿಂದ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಭಿವೃದ್ಧಿ ಒಡನಾಟ ನನಗೆ ಸ್ಪೂರ್ತಿ ನೀಡಿದೆ.

 ಪ್ರಸ್ತುತ ರಾಜ್ಯದ 41 ಜನ ಸಂಸದರ ಒಡನಾಟ ಬೆಳೆಸುವ ಮೂಲಕ, ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯ ಒಂದು ಕ್ರಾಂತಿ ಮಾಡುವ ಸದುದ್ದೇಶ ಹೊಂದಲಾಗಿದೆ. ಪ್ರಸ್ತುತ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರಾಗಿ ನನ್ನನ್ನು ಮಾನ್ಯ ಮುಖ್ಯ ಮಂತ್ರಿಯವರು ನೇಮಕ ಮಾಡಿದ್ದಾರೆ.

ಕೇಂದ್ರದಿಂದ ನಮ್ಮ ರಾಜ್ಯ ಹೆಚ್ಚಿನ ಅನುದಾನ ಪಡೆಯಬೇಕು ಎಂಬ ನಮ್ಮ ಸಂಸ್ಥೆಯ ಉದ್ದೇಶಕ್ಕೆ ಇದು ಸಹ ಪೂರಕವಾಗಿದೆ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲರ ಸಹಕಾರದಿಂದ ಮಾತ್ರ ಗುರಿ ತಲುಪಬಹುದಾಗಿದೆ.

ಈ ಒಂದು  ಪ್ರಯತ್ನವನ್ನು 2021 ನೇ ಸಾಲಿನ ಮಹಾಶಿವ ರಾತ್ರಿಯ ದಿವಸ ಅಧಿಕೃತವಾಗಿ ಜಾಗರಣೆಯ ನಂತರ ಕೈಗೊಂಡಿದ್ದೇನೆ.

ದಿನಾಂಕ:01.08.1988 ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನನ್ನ ಹುಟ್ಟುರಾದ ಕುಂದರನಹಳ್ಳಿಯ ಪಕ್ಕದ ಬಿದರೆಹಳ್ಳ ಕಾವಲ್‌ನ ಸುಮಾರು 930 ಎಕರೆ ಸರ್ಕಾರಿ ಜಮೀನಿನಲ್ಲಿ ಯಾವುದಾದರೊಂದು ಸರ್ಕಾರಿ ಉದ್ಯಮ ಆರಂಭಿಸಲು, ಕುಂದರನಹಳ್ಳಿಯ ಗಂಗಮಲ್ಲಮ್ಮ ದೇವಿಗೆ ಹರಕೆ ಹೊತ್ತು ಶ್ರಮಿಸಿದ ನನ್ನ ಪರಿಕಲ್ಪನೆಗೆ, ತುಮಕೂರಿನ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ಆನೇಕರ ಸಹಕಾರದಿಂದ ಸುಮಾರು ರೂ 6400 ಕೋಟಿ ವೆಚ್ಚದಲ್ಲಿ ಹೆಚ್.ಎ.ಎಲ್ ವತಿಯಿಂದ ಹೆಲಿಕ್ಯಾಪ್ಟರ್ ಘಟಕ ಇನ್ನೇನು ಉದ್ಘಾಟನೆಯಾಗಲಿದೆ..

ಪ್ರಸ್ತುತ 108 ಶಕ್ತಿಪೀಠಗಳು, 12 ಜ್ಯೋತಿರ್ಲಿಂಗಗಳು, ಮೂರು ಸಾಯಿಬಾಬಾ, ಹನುಮನ ಜನ್ಮ ಸ್ಥಳಗಳ ಪ್ರಾತ್ಯಕ್ಷಿಕೆಯನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ. ಜಿಜೆ ಹಳ್ಳಿ ಹೋಬಳಿ, ಕೆ.ಆರ್ ಹಳ್ಳಿ ಗ್ರಾಮ ಪಂಚಾಯಿತಿಯ, ವಡ್ಡನಹಳ್ಳಿ ಪಕ್ಕದಲ್ಲಿರುವ ಬಗ್ಗನಡುಕಾವಲ್‌ನಲ್ಲಿ ಶಕ್ತಿಪೀಠ ಫೌಂಡೇಷನ್ ಒಂದು ವಿನೂತನವಾದ ಕ್ಯಾಂಪಸ್ ಅನ್ನು ಸುಮಾರು 12 ಎಕರೆ 15 ಗುಂಟೆಯಲ್ಲಿ ಆರಂಭಿಸಿದೆ.

ಈ ಕ್ಯಾಂಪಸ್‌ನಲ್ಲಿ ಭೂಮಿಯ ಮೇಲೆ ನಿರ್ಮಿಸಿರುವ ಭಾರತದ ನಕ್ಷೆಯಲ್ಲಿ, ಗುರುತು ಮಾಡಿರುವ ಕುಂದರನಹಳ್ಳಿ ಗಂಗಮಲ್ಲಮನ ದೇವಾಲಯದ ಸ್ಥಳದಲ್ಲಿ, ನಮ್ಮ ತಾಯಿಯವರಾದ ಶ್ರೀಮತಿ ಪಾರ್ವತಮ್ಮನವರೊಂದಿಗೆ ನಿಂತುಕೊಂಡು ಎಲ್ಲಾ 108 ಶಕ್ತಿದೇವತೆಗಳಿಗೂ ಮಹಾಶಿವರಾತ್ರಿಯ ದಿವಸದೊಂದು, ನಮ್ಮ ಸಂಸ್ಥೆಯ ಎಲ್ಲಾ ಕನಸುಗಳಿಗೆ ಶಕ್ತಿ ಕೊಡು ತಾಯಿ ಎಂದು ಪ್ರಾರ್ಥಿಸಲಾಗಿದೆ.

ತಾವೂ ಸಹ ಕೈಜೋಡಿಸಲು ಈ ಮೂಲಕ ಮನವಿ ಮಾಡಲಾಗಿದೆ.