Delhi:Shakthipeeta foundation
ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ದೇಶಾದ್ಯಂತ ಜಲಶಕ್ತಿ ಅಭಿಯಾನ ಘೋಷಿಸಿದ್ದಾರೆ .
ಮಳೆ ನೀರನ್ನು ಇಂಗಿಸುವುದು ಅವರ ಗುರಿಯಾಗಿದೆ.ಕರ್ನಾಟಕ ರಾಜ್ಯದಲ್ಲಿ ಬೋರ್ ವೆಲ್ ಗಳ ಹಾವಳಿಯಿಂದ ನಿಂತ ಮಳೆ ನೀರು ಒಂದೆರಡು ದಿವಸಗಳಲ್ಲಿ ಮಂಗ ಮಾಯವಾಗಲಿದೆ .
ಅನೇಕ ವರ್ಷಗಳಿಂದ ಹರಿಯುವ ನೀರನ್ನು ತಡೆಯಿರಿ ತಡೆದ ನೀರನ್ನು ಇಂಗಿಸಿ ಎಂಬ ಮಾತೊಂದಿತ್ತು . ಪ್ರಸ್ತುತ ಕರ್ನಾಟಕದಲ್ಲಿ ಹೊಸ ಪ್ರಯೋಗ ಮಾಡಬೇಕಿದೆ.
ಈ ಬಗ್ಗೆ ಅಧ್ಯಯನ ಮಾಡಿರುವ ಮುಖ್ಯ ಇಂಜಿನಿಯರ್ ಶ್ರೀ ಗುರುಪ್ರಸಾದ್ ರವರ ಸಲಹೆಯಂತೆ ಬೋರ್ ವೆಲ್ ಗಳಿಗೆ ರಜೆ ಘೋಷಿಸ ಬೇಕಂತೆ.
ಸಾಮೂಹಿಕವಾಗಿ ಮಳೆಗಾಲದಲ್ಲಿ ಬೋರ್ ವೆಲ್ ಗಳಿಗೆ ರಜೆ ಘೋಷಿಸಿದರೆ ನಿಂತ ನೀರಿನಿಂದ ಕೆರೆ ಕಟ್ಟೆ ಬಾವಿ ಪಿಕಪ್ ಸಮೃದ್ಧಿ ಆಗಲಿವೆಯಂತೆ .
ರಜೆ ಘೋಷಿಸಿದ ಬೋರ್ ವೆಲ್ ಗಳಿಗೆ ಪರ್ಯಾಯವಾಗಿ ವಾರ್ಷಿಕವಾಗಿ ಇಂತಿಷ್ಟು ಹಣ ಎಂದು ಸರ್ಕಾರ ಅನುದಾನ ನೀಡಬೇಕಂತೆ .
ಯಾವುದಾದರೊಂದು ಜಿಲ್ಲೆಯನ್ನು ಪೈಲೆಟ್ ಯೋಜನೆಯಾಗಿ ತೆಗೆದುಕೊಳ್ಳುವುದು ಸೂಕ್ತವಾಗಿದೆ. ಜಿಲ್ಲೆಯಲ್ಲಿರುವ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸಿ ಮಳೆಗಾಲದಲ್ಲಿ ಮೈಕ್ರೊ ಇರಿಗೇಶನ್ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು .
ಮೋದಿಯವರ ಕನಸಿನ ಯೋಜನೆಯಾದ ಜಲ ಜೀವನ್ ಮಿಷನ್ ಯೋಜನೆಯಿಂದ ಪ್ರತಿಯೊಂದು ಮನೆಗಳಿಗೆ ನಲ್ಲಿ ನೀರು ಸಂಪರ್ಕ ಮಾಡುವ ಯೋಜನೆಯಿಂದ ಕುಡಿಯುವ ನೀರು ನೀಡುವುದು ಅಗತ್ಯವಾಗಿದೆ
ರಾಜಸ್ಥಾನದ ನಂತರ ಎರಡನೆ ಅತ್ಯಂತ ಬರವಿರುವ ರಾಜ್ಯ ಕರ್ನಾಟಕ. ನಮ್ಮ ರಾಜ್ಯದಲ್ಲಿ ಮಳೆ ನೀರಿನ ಸಮೃದ್ಧಿ ಕಾಣಬೇಕಾದರೆ ಬೋರ್ ವೆಲ್ ಗಳು ಮತ್ತು ಫ್ಲಡ್ ಇರಿಗೇಶನ್ ಬ್ಯಾನ್ ಮಾಡಿದರೆ ಮಾತ್ರ ಸಾಧ್ಯ.
ಇವೆರಡೂ ಕೆಲಸ ದಿನಬೆಳಗಾಗುವುದರೊಳಗೆ ಮಾಡಲು ಸಾಧ್ಯವಿಲ್ಲ .ಕೆರೆ ಕಟ್ಟೆಗಳಿಗೆ ನದಿ ನೀರು ವ್ಯವಸಾಯಕ್ಕೆ ಮೈಕ್ರೋ ಇರಿಗೇಷನ್,ಅನುದಾನ ಸಹಿತ ಬೋರ್ ಗಳಿಗೆ ಮಳೆಗಾಲದಲ್ಲಿ ರಜೆ ಮಾಡಿದಲ್ಲಿ ಮತ್ತೆ ಗತಕಾಲದ ವೈಭವ ಬರಲಿದೆ.
ನಮ್ಮ ರಾಜ್ಯದಲ್ಲಿ ಈ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳುವದು ಸರ್ಕಾರದ ಚಿಂತನೆಯಾಗಬೇಕು,ಸಾಧಕ ಬಾಧಕಗಳ ಬಗ್ಗೆ ರೈತರು ಸೇರಿದಂತೆ ಪರಿಣಿತರೊಡನೆ ಸಂವಾದದ ಅಗತ್ಯವಿದೆ ಪ್ರತಿ ಗ್ರಾಮದ ಜನರ ಸಲಹೆಗಳು ಅಗತ್ಯವಾಗಿದೆ.
ಇದು ಆಕಾಶಕ್ಕೆ ಏಣಿ ಹಾಕುವ ಯೋಜನೆ ಯಂತೆ ಕಾಣುತ್ತಿದೆ ಆದರೆ ಅನ್ಯ ಮಾರ್ಗವಿಲ್ಲ.ಪ್ರಾಯೋಗಿಕವಾಗಿ ಮಾಡಲೇಬೇಕಿದೆ