12th September 2024
Share

TUMAKURU:SHAKTHIPEETA FOUNDATION

ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಅಂತರ್ಜಲ ಅಭಿವೃದ್ದಿಗಾಗಿ ಕೈಗೊಳ್ಳ ಬೇಕಾದ ಅಂಶಗಳ ಬಗ್ಗೆ. ಡಾಟಾ ಸಂಗ್ರಹಣೆ ಬಗ್ಗೆ ಅಧಿಕಾರಿಗಳು ಏನೇನು ಮಾಡಬೇಕು, ಎನ್‌ಜಿಓಗಳು ಏನು ಮಾಡಬೇಕು, ರೈತರು ಏನೇನು ಮಾಡಬೇಕು ಎಂಬ ಬಗ್ಗೆ ವಿಜ್ಞಾನಿಗಳಂತೆ ವಿಷಯ ಮಂಡಿಸಿದ್ದು ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಎಲ್ಲರಿಗೂ ಮೆಚ್ಚುಗೆ ಯಾಗಿತ್ತು.

ಆದರೇ ತಾಂತ್ರಿಕ ಘೋಷ್ಠಿಯಲ್ಲಿಯಲ್ಲಿ ಉಪನ್ಯಾಸ ಮಾಡಲು ಬಂದ ವಿಜ್ಞಾನಿಗಳನ್ನು ಅಧಿಕಾರಿಗಳು, ರೈತರು ಮತ್ತು ಸಂಘಸಂಸ್ಥೆಗಳ ಪದಾಧಿಕಾರಿಗಳು ಕೇಳಿದ ಪ್ರಶ್ನೆಗೆ ವಿಜ್ಞಾನಿಗಳು ತಡಬಡಿಸಿದ ಪ್ರಸಂಗ ನಡೆಯಿತು.

ಜಲಶಕ್ತಿ ಮಂತ್ರಾಲಯ, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಇಲಾಖೆ, ಕೇಂದ್ರೀಯ ಅಂತರ್ಜಲ ಮಂಡಳಿ,ಸಣ್ಣ ನೀರಾವರಿ ಇಲಾಖೆ, ರಾಜ್ಯ ಅಂತರ್ಜಲ ಅಭಿವೃದ್ಧಿ ವಿಭಾಗ ಮತ್ತು ತುಮಕೂರು ಜಿಲ್ಲಾ ಪಂಚಾಯತ್ ವತಿಯಿಂದ ಸ್ವತಂತ್ರ್ಯ ಭಾರತದ 75 ನೇ ವರ್ಷದ ನೆನಪಿಗಾಗಿ ತುಮಕೂರು ಜಿಲ್ಲಾ ಮಟ್ಟದ ಜಲಧರಗಳ ನಕಾಶೆ ಮತ್ತು ಅಂತರ್ಜಲ ನಿರ್ವಹಣೆ ಬಗ್ಗೆ ಸಂವಹನ ಕಾರ್ಯಕ್ರಮ ದಿನಾಂಕ:29.03.2021 ನೇ ಸೋಮವಾರ ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಡೆದ ತಾಂತ್ರಿಕ ಘೋಷ್ಠಿಯ ಪ್ರಮುಖ ಅಂಶಗಳು.

  1. ತುಮಕೂರು ಜಿಲ್ಲೆಯಲ್ಲಿ ಉಗಮವಾಗುವ ನದಿಗಳ ಉದ್ದ, ಅಗಲ ಸ್ಥಿತಿಗತಿ, ಪುನಶ್ಚೇತನ  ಹಾಗೂ ಅಭಿವೃದ್ಧಿ ಬಗ್ಗೆ ಯಾವ ಇಲಾಖೆಯ ಬಳಿ ಮಾಹಿತಿ ಇದೆ, ಯಾರು ಹೇಳುತ್ತಿರಿ?  ಅಥವಾ ಯಾರು ಯಾವಾಗ ಮಾಡುತ್ತೀರಿ?
  2. ತುಮಕೂರು ಜಿಲ್ಲೆಯ ಜೆಸಿ ಪುರ ಗ್ರಾಮ ಪಂಚಾಯಿತಿಯಲ್ಲಿ ವಾಟರ್ ಆಡಿಟ್, ವಾಟರ್ ಬಡ್ಜೆಟ್ ಮತ್ತು ವಾಟರ್ ಸ್ಟ್ರಾಟಜಿ ಮಾಡಿದ್ದೀರಿ, ಈ ಗ್ರಾಮ ಪಂಚಾಯಿತಿಯಲ್ಲಿ ಎಷ್ಟು ಕಿಮೀ ಕರಾಬು ಹಳ್ಳಗಳು, ರಾಜ ಕಾಲುವೆಗಳು, ಇವೆ ಇವುಗಳಲ್ಲಿ ಎಷ್ಟು ಎಕರೆ ಒತ್ತುವರಿಯಾಗಿದೆ. ಎಷ್ಟು ಎಕರೆ ಹಳ್ಳಗಳು ಹಾಲಿ ಇದೆ, ಇವುಗಳ ಅಬಿವೃದ್ಧಿ ಮತ್ತು ಒತ್ತುವರಿ ತೆರವು ಮಾಹಿತಿ ಯಾವ ಇಲಾಖೆ ಬಳಿ ಇದೆ? ಅಥವಾ ಯಾರು ಮಾಡಬೇಕು?
  3. ತುಮಕೂರು ಜಿಲ್ಲೆಯ ಜೆಸಿ ಪುರ ಗ್ರಾಮ ಪಂಚಾಯಿತಿಯಲ್ಲಿ ಹಾಲಿ ಇರುವ ಪಿಕ್‌ಅಫ್‌ಗಳು ಎಷ್ಟು? ಇವುಗಳಲ್ಲಿ ಅಪೂರ್ಣ ವಾಗಿರುವ ಪಿಕ್‌ಅಪ್‌ಗಳು ಎಷ್ಟು, ನೀರು ನಿಲ್ಲದೇ ಇರುವ ಪಿಕ್‌ಅಪ್‌ಗಳು ಎಷ್ಟು? ನೀರು ಸಂಗ್ರಹವಾಗುತ್ತಿರುವ ಪಿಕ್‌ಅಫ್‌ಗಳು ಎಷ್ಟು? ಮಾಹಿತಿ ಯಾರ ಬಳಿ ಇದೆ? ಅಥವಾ ಯಾರು ಮಾಡಬೇಕು?
  4. ತುಮಕೂರು ಜಿಲ್ಲೆಯಲ್ಲಿ  ಇರುವ ಹಳ್ಳಗಳಿಗೆ ಇದೂವರೆಗೂ ಎಷ್ಟು ಪಿಕ್‌ಅಪ್‌ಗಳನ್ನು ನಿರ್ಮಾಣ ಮಾಡಲಾಗಿದೆ ಮತ್ತು ಎಷ್ಟು ಮಾಡಲು ಉದ್ದೇಶಿಸಲಾಗಿದೆ ಜಿಐಎಸ್ ಲೇಯರ್ ಸಹಿತ ಮಾಹಿತಿ ಯಾರಬಳಿ ಇದೆ? ಅಥವಾ ಯಾರು ಮಾಡುತ್ತೀರಿ? 
  5. ತುಮಕೂರು ಜಿಲ್ಲೆಯಲ್ಲಿರುವ ಕೆರೆ- ಕಟ್ಟೆಗಳು ಯಾವ ಯಾವ ವರ್ಷ, ಎಷ್ಟೆಷ್ಟು ಪ್ರಮಾಣದಲ್ಲಿ ತುಂಬಿವೆ, ಈ ಮಾಹಿತಿ ಯಾರ ಬಳಿ ಇದೆ? ಎಷ್ಟು ವರ್ಷದ ಮಾಹಿತಿ ಇದೆ? ಅಥವಾ ಯಾರು ಮಾಡಬೇಕು?
  6. ಅಧ್ಯಯನಕ್ಕಾಗಿ ಗ್ರಾಮ ಪಂಚಾಯಿತಿಗೊಂದು ಬೋರೆವೆಲ್ ಕೊರೆಸುತ್ತೀವೆ ಎಂದು ಹೇಳಿದಿರಿ, ಒಂದು ಗ್ರಾಮ ಪಂಚಾಯಿತಿಯಲ್ಲಿ ಎರಡು ಮೂರು ಬಂಡೆಗಳ ಪದರ ಇದ್ದಾಗ ಏನು ಮಾಡುತ್ತೀರಿ? ಇದರಿಂದ ಆಗುವ ಪರಿಣಾಮಗಳ ಬಗ್ಗೆ  ಏನಾದರೂ ಅಧ್ಯಯನ ಮಾಡಿದ್ದೀರಾ? ಅಥವಾ ಯಾರು ಅಧ್ಯಯನ ಮಾಡಬೇಕು?
  7. ತುಮಕೂರು ಜಿಲ್ಲೆಯಲ್ಲಿ ರೈತರು ಮತ್ತು ಸರ್ಕಾರಗಳು ಇದೂವರೆಗೂ ಕೊರೆಸಿರುವ ಬೋರ್‌ವೆಲ್‌ಗಳಲ್ಲಿ ಎಷ್ಟು ಬೋರ್ ವೆಲ್‌ಗಳು ಒಣಗಿವೆ? ಏಕೆ ಒಣಗಿವೆ? ಹಾಲಿ ಇರುವ ಬೋರ್ ವೆಲ್ ಗಳು ಸೇರಿದಂತೆ ಖಾಸಗಿ ಮತ್ತು ಸರ್ಕಾರಿ ಬೋರ್ ವೆಲ್‌ಗಳಿಗೆ ಎಷ್ಟು ಹಣ ಹೂಡಿಕೆಯಾಗಿದೆ, ಎಷ್ಟು ಪ್ರಮಾಣದ ಅಂತರ್ಜಲ ನೀರನ್ನು ಎತ್ತಿವೆ, ಎಂಬ ಬಗ್ಗೆ ಯಾವ ಇಲಾಖೆಯಾದರೂ ಮಾಹಿತಿ ಸಂಗ್ರಹ ಮಾಡಲಾಗಿದೇಯೇ? ಅಥವಾ ಯಾರು ಮಾಡ ಬೇಕು? ಈ ಮಾಹಿತಿ ಬೇಕೆ? ಬೇಡವೇ?
  8. ಇದೂವರೆಗೂ ವಿವಿಧ ಇಲಾಖೆಗಳಿಂದ ಜಲಾನಯನ ಅಭಿವೃದ್ಧಿ ಇಲಾಖೆಯೂ ಸೇರಿದಂತೆ ಎಷ್ಟು ಜಲಸಂಗ್ರಹಾಗಾರಗಳನ್ನು (ಇಂಗು ಗುಂಡಿ, ಪಿಕ್ ಅಫ್, ಗೋಕಟ್ಟೆ, ಕೆರೆ-ಕಟ್ಟೆ ಭಾಂದಾರ ಹೀಗೆ ಯಾವುದೇ ಹೆಸರಿನ) ಎಲ್ಲೆಲ್ಲಿ ನಿರ್ಮಾಣ ಮಾಡಲಾಗಿದೆ, ಇವುಗಳಿಂದ ಎಷ್ಟು ಪ್ರಯೋಜನೆ ಆಗಿದೆ. ಇವುಗಳಲ್ಲಿ ಜೀವಂತವಾಗಿರುವವು ಎಷ್ಟು? ಮುಚ್ಚಿರುವವು ಎಷ್ಟು? ಎಷ್ಟು ವರ್ಷ ಇವು ಮಳೆ ನೀರಿನಿಂದ ತುಂಬಿವೆ, ಎಷ್ಟು ಪ್ರಮಾಣದಲ್ಲಿ ಅಂತರ್ಜಲ ಅಭಿವೃದ್ಧಿ ಆಗಿದೆ. ಯಾರ ಬಳಿ ಮಾಹಿತಿ ಇದೆ? ಅಥವಾ ಯಾರು ಮಾಡಬೇಕು?
  9. ಅಡಿಕೆ ಬೆಳೆಗೆ ಹನಿನೀರಾವರಿಗೆ ಕೇಂದ್ರ ಸರ್ಕಾರ ಅನುದಾನ ನಿಲ್ಲಿಸಿದೆ, ನರೇಗಾ ಯೋಜನೆಯಡಿ ಅಡಿಕೆ ಬೆಳೆಗೆ ಕೂಲಿ ನಿಷೇದಿಸಿದೆಯಂತೆ ಯಾವ ಕಾರಣಕ್ಕಾಗಿ ನಿಷೇದಿಸಿದೆ? ಇದರಿಂದ ಅತರ್ಜಲ ಅಭಿವೃದ್ಧಿಗೆ ಅಡಚಣೆಯಾಗಿದೆಯೇ? ಆಗಿದ್ದರೆ ಅಧ್ಯಯನ ವರದಿ ಯಾರ ಬಳಿ ಇದೆ? ಅಥವಾ ಇನ್ನೂ ಯಾವುದಾದರು ಕಾರಣಕ್ಕೆ ನಿಲ್ಲಿಸಲಾಗಿದೆಯೇ? ಮಾಹಿತಿ ಯಾರ ಬಳಿ ಇದೆ? ಅಥವಾ ಯಾರು ಮಾಡಬೇಕು?
  10. ತುಮಕೂರು ಜಿಲ್ಲೆಯಲ್ಲಿ ಬೆಳೆ ಪದ್ಧತಿಯಿಂದ ಆಗಿರುವ ಅಂತರ್ಜಲ ದುರ್ಬಳಕೆ ಮಾಹಿತಿ ಯಾರ ಬಳಿ ಇದೆ? ಯಾವ ಬೆಳೆಯಿಂದ ಎಷ್ಟು ಪ್ರಮಾಣದ ಅಂತರ್ಜಲ ಹೆಚ್ಚಿಗೆ ಬಳಸಲಾಗಿದೆ? ಯಾವ ಬೆಳೆ ಬೆಳೆದಿದ್ದರೆ ಅಂತರ್ಜಲ ದುರ್ಬಳಕೆ ಆಗುತ್ತಿರಲಿಲ್ಲ? ಮಾಹಿತಿ ಯಾರ ಬಳಿ ಇದೆ? ಅಥವಾ ಯಾರು ಮಾಡಬೇಕು?
  11. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ವರದಿ ಪ್ರಕಾರ ಮಾಡಿರುವ ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್ ಪ್ರಕಾರ ಮಾಡಿರುವ ವರದಿ ಸರಿಯಾಗಿದೇಯೇ? ಅಥವಾ ಸರಿಯಾಗಿಲ್ಲವೇ? ಯಾರು ಮಾಹಿತಿ ನೀಡುತ್ತೀರಿ?
  12. ಗ್ರಾಮವಾರು/ ಗ್ರಾಮಪಂಚಾಯತಿವಾರು ವಾಟರ್ ಆಡಿಟ್, ವಾಟರ್ ಬಡ್ಜೆಟ್ ಮತ್ತು ವಾಟರ್ ಸ್ಟ್ರಾಟಜಿ ಮಾಡುವಾಗ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ವರದಿ ಗಮನಿಸಿದ್ದೀರಾ? ಅಥವಾ ಇಲ್ಲವಾ ಯಾರ ಬಳಿ ಮಾಹಿತಿ ಇದೆ? ಅಥವಾ ಯಾರ ನೀಡುತ್ತೀರಿ?
  13. ಜಲಾಮೃತ ಯೋಜನೆ, ಅಟಲ್ ಭೂಜಲ್ ಯೋಜನೆ, ಶ್ರೀ ರವಿಶಂಕರ್ ಗುರೂಜಿಯ ಆಶ್ರಮದವರು ಅಂತರ್ಜಲ ಪುಶ್ಚೇತನ ಯೋಜನೆ ಬಗ್ಗೆ ಮೂರು ಉದ್ಠಟನಾ ಸಭೆಗಳನ್ನು ಇದೇ ಜಾಗದಲ್ಲಿ ಮಾಡಿದ್ದೀರಿ? ಇದೂವರೆಗೂ ಯಾರು, ಯಾರು ಎಷ್ಟೆಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಏನೇನು ಮಾಡಿದ್ದೀರಿ? ಅಥವಾ ಮಾಡಲು ಉದ್ದೇಶಿಸಿದ್ದೀರಿ? ಜಿಐಎಸ್ ಲೇಯರ್ ಸಹಿತ ಮಾಹಿತಿ ಯಾರ ಬಳಿ ಇದೆ? ಅಥವಾ ಯಾರು ನೀಡುತ್ತೀರಿ?
  14. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ವರದಿ ಜಾರಿಯಾದ ಯಾವ ವರ್ಷ ಎಷ್ಟೆಷ್ಟು ಹಣವನ್ನು ಯಾವ ಇಲಾಖೆ ಖರ್ಚು ಮಾಡಿದೆ? ನಂತರ ಆಗಿರುವ ಬದಲಾವಣೆಗಳು ಏನು? ಜಿಐಎಸ್ ಲೇಯರ್ ಸಹಿತ ಯಾರ ಬಳಿ ಮಾಹಿತಿ ಇದೆ? ಅಥವಾ ಯಾರು ಸಂಗ್ರಹ ಮಾಡಬೇಕು?
  15. ತುಮಕೂರು ಜಿಲ್ಲೆಯಲ್ಲಿ ಹಾಲಿ ಇರುವ ಪ್ಲಡ್‌ಇರ್ರಿಗೇಷನ್ ಎಷ್ಟು? ಇದನ್ನು ಮೈಕ್ರೋ ಇರ್ರಿಗೇಷನ್ ಪದ್ದತಿಗೆ ಬದಲಾಯಿಸಿದರೆ? ಉಳಿಯುವ ನೀರಿನ ಪ್ರಮಾಣ ಎಷ್ಟು? ಅಥವಾ ಇನ್ನೂ ಹೆಚ್ಚಿಗೆ ಎಷ್ಟು ಎಕರೆ ಪ್ರದೇಶಕ್ಕೆ ಬಳಸ ಬಹುದು ಗ್ರಾಮವಾರು ಮಾಹಿತಿ ಯಾರ ಬಳಿ ಇದೆ? ಅಥವಾ ಯಾರು ಮಾಡಬೇಕು?
  16. ಕರ್ನಾಟಕದಲ್ಲಿ ನೀರಿಗೆ ಸಂಬಂಧಿಸಿದಂತೆ ಯಾವ ಯಾವ ಇಲಾಖೆ ಏನೇನು ಮಾಡುತ್ತಿದೆ? ಇದೂವರೆಗೂ ಯಾವ ಯಾವ ಯೋಜನೆ ಜಾರಿಗೊಳಿಸಿದೆ? ಮುಂದೆ ಏನೇನು ಮಾಡಬೇಕು? ಈ ಮಾಹಿತಿ ಒಂದೇ ಕಡೇ ಲಭ್ಯವಾಗುತ್ತದಯೇ? ಅಥವಾ ಇನ್ನೂ ಮುಂದೆಯಾದರೂ ಎಲ್ಲಾ ಮಾಹಿತಿ ಒಂದೇ ಕಡೆ ದೊರೆಯುವಂತೆ ಮಾಡಲು ಉದ್ದೇಶಿಸಲಾಗಿದೆಯೇ?
  17. ರಾಜ್ಯದ ವಾಟರ್ ಆಡಿಟ್, ವಾಟರ್ ಬಡ್ಜೆಟ್ ಮತ್ತು ವಾಟರ್ ಸ್ಟ್ರಾಟಜಿ ಗ್ರಾಮವಾರು ಅಥವಾ ಗ್ರಾಮಪಂಚಾಯಿತಿವಾರು ಮಾಹಿತಿ ಇದೆಯೇ ಅಥವಾ ಯಾವಾಗ ಪೂರ್ಣಗೊಳಿಸ ಬಹುದು?
  18. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ  ನೀರಿಗೆ ಸಂಬಂಧಿಸಿದ ಯಾವುದಾದರೂ ಹೊಸ ಯೋಜನೆಗಳನ್ನು ತುಮಕೂರು ಜಿಲ್ಲೆಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆಯೇ? ಈ ಮಾಹಿತಿ ಯಾರ ಬಳಿ ಇದೆ?
  19. ತುಮಕೂರು ಜಿಲ್ಲೆಯಲ್ಲಿ ದಿಶಾ ಸಮಿತಿಯಲ್ಲಿ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಇದೂವರೆಗೂ ನೀರಿಗೆ ಸಂಬಂಧಿಸಿದಂತೆ ಕೈಗೊಳ್ಳಲು ಉದ್ದೇಶಿರುವ ಯೋಜನೆಗಳ ಮಾಹಿತಿ ಯಾರ ಬಳಿ ಇದೆ?
  20. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಇದೂವರೆಗೂ ನೀರಿಗೆ ಸಂಬಂಧಿಸಿದಂತೆ ಕೈಗೊಳ್ಳಲು ಉದ್ದೇಶಿರುವ ಯೋಜನೆಗಳ ಮಾಹಿತಿ ಯಾರ ಬಳಿ ಇದೆ?
  21. ಒಂದು ಹನಿ ಮಳೆ ನೀರು ಅಂತರ್ಜಲ ಸೇರಲು 50  ವರ್ಷ ಬೇಕು ಎಂಬ ಅದ್ಯಯನ ವರದಿ ಇದೆ ಎಂದು ವಿಜ್ಞಾನಿಯೊಬ್ಬರೂ ಹೇಳಿದಾಗ ಈ ಬಗ್ಗೆ ಅನಾಲೀಸಿಸ್ ವರದಿ ನೀಡಿ, ಮತ್ತೆ ಇದೂವರೆಗೂ ಮಳೆ ನೀರನ್ನು ಸಂಗ್ರಹಿಸಲು ಕೈಗೊಂಡಿರುವ ಯೋಜನೆಗಳಲ್ಲಿ ಎಷ್ಟು ನೀರು ಎಲ್ಲಿಗೆ ಹೋಗಿದೆ, ಗ್ರಾಮವಾರು-ವರ್ಷವಾರು ಮಾಹಿತಿ ಇದೆಯಾ? ಅಥವಾ ಯಾರು ಮಾಡಬೇಕು?

ಈ ಪ್ರಶ್ನೆಗಳ ಸುರಿಮಳೆಗೆ ಅಧಿಕಾರಿಗಳು ಮತ್ತು ವಿಜ್ನಾನಿಗಳು  ಮೂರು ನಾಲ್ಕು ದಿನದಲ್ಲಿ ನೀಡುವುದಾಗಿ ತಿಳಿಸಿದರು? ಕೆಲವು ಪ್ರಶ್ನೆಗಳಿಗೆ ನಾವು ಉತ್ತರ ನೀಡಲು ಸಾಧ್ಯವಿಲ್ಲ ಎಂದು ಸಭೆಯ ನಂತರ ತಿಳಿಸಿದರು.

ಈ ಮೇಲ್ಕಂಡ 21 ಅಂಶಗಳಿಗೆ ವಿಷಯವಾರು ನಿಖರವಾದ ಮಾಹಿತಿಯನ್ನು ಸಂಬಂಧಿಸಿದ ಇಲಾಖಾವಾರು ಮಾಹಿತಿ ಸಂಗ್ರಹಿಸಿ ನೀಡಲು ಒಂದು ವಾರಗಳ ಕಾಲ ಅವಧಿ ನೀಡಿ? ಈ ಪತ್ರವನ್ನು ತುಮಕೂರು ಜಿಲ್ಲಾಧಿಕಾರಿಗಳಿಗೆ ನೀಡಲು ಉದ್ದೇಶಿಸಲಾಗಿದೆ.