22nd May 2024
Share

TUMAKURU:SHAKTHIPEETA FOUNDATIN

ತುಮಕೂರು ಜಿಲ್ಲಾ ದಿಶಾ ಸಮಿತಿ ಉತ್ತಮ ಕೆಲಸ ಮಾಡಿದ ಇಲಾಖೆ ಅಧಿಕಾರಿಗಳಿಗೆ ದಿಶಾ ಅವಾರ್ಡ್’ ನೀಡಿ ಗೌರವಿಸುವ ಮೂಲಕ ಅಧಿಕಾರಿಗಳಿಗೆ ಬೆನ್ನು ತಟ್ಟುವ ಮಹತ್ವದ ನಿರ್ಣಯ ಕೈಗೊಂಡಿದೆ. ದಿನಾಂಕ:26.03.2021  ರಂದು ಸಂಸದ ಶ್ರೀ ಜಿ.ಎಸ್.ಬಸವರಾಜ್ ಅಧ್ಯಕ್ಷತೆಯಲ್ಲಿ  ನಡೆದ ದಿಶಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

 ಪ್ರಗತಿ ಪರಿಶೀಲನೆ ಮಾಡುವಾಗ ಶೇಕಡವಾರು ಕಡಿಮೆ ಕೆಲಸ ಮಾಡಿದ ಅಧಿಕಾರಿಗಳ ಮೇಲೆ ನಿಯಾಮಾನುಸಾರ ಕಾನೂನು ಕ್ರಮಕೈಗೊಳ್ಳಲು ಸಂಸದರು ಸೂಚಿಸಿದಾಗ, ಸದಸ್ಯ ಕಾರ್ಯದರ್ಶಿ ಶ್ರೀ ಗಂಗಾಧರ್ ಸ್ವಾಮಿರವರು ಮತ್ತು ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್‌ರವರು ವಿನೂತನ ಐಡಿಯಾ ಮಾಡೋಣ. ಕೆಲಸ ಮಾಡದ ಅಧಿಕಾರಿಗಳಿಗೆ ಶಿಕ್ಷೆ ನೀಡುವ ಬದಲು ಆರಂಭಿಕವಾಗಿ ಉತ್ತಮ ಕೆಲಸ ಮಾಡಿವರಿಗೆ ಪ್ರೋತ್ಸಾಹ ನೀಡೋಣ. ಅದನ್ನು ನೋಡಿಯಾದರೂ ಕೆಲಸ ಮಾಡದವರಿಗೆ ಜ್ಞಾನೋದಯವಾಗಬಹುದು ಎಂಬ ಸಲಹೆಗೆ ಅಧ್ಯಕ್ಷರಾದಿಯಾಗಿ ಎಲ್ಲರೂ ಒಕ್ಕೊರಲಿನಿಂದ ಬೆಂಬಲಿಸಿದರು.

 ಕೇಂದ್ರ ಸರ್ಕಾರ ದಿನಾಂಕ:27.06.2016  ರಂದು ಪ್ರಥಮವಾಗಿ ದಿಶಾ ಸಮಿತಿ ರಚನೆ ಮಾಡಿದೆ. ಅಂದಿನಿಂದ ಇಲ್ಲಿಯವರೆಗೂ ದಿಶಾ ಡ್ಯಾಷ್ ಬೋರ್ಡ್‌ನಲ್ಲಿರುವ ಅಂಶಗಳು ಮತ್ತು ಅಂದಿನ ಸಂಸದರು ನಡೆಸಿದ ದಿಶಾ ಸಮಿತಿ ನಡವಳಿಕೆಗಳ ಬಗ್ಗೆ ಹಾಗೂ  ದಿನಾಂಕ:21.09.2019 ರಿಂದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ ದಿಶಾ ಸಭೆಯ ನಡವಳಿಕೆಗಳು ಮತ್ತು ದಿಶಾ ಡ್ಯಾಷ್ ಬೋರ್ಡ್‌ಗಳಲ್ಲಿರುವ ಅಂಶಗಳ ಬಗ್ಗೆ ಅಧ್ಯಯನ ಮಾಡಿ ವಾರ್ಷಿಕ ಸಾಧನೆ ಅನುಸರಿಸಿ ದಿಶಾ ಅವಾರ್ಡ್ ನೀಡಲು ಒಂದು ರೂಪು ರೇಷೆ ನಿರ್ಧರಿಸುವ ಕೆಲಸ ಮಾಡಬೇಕಿದೆ. 

 ಅಂದರೆ ಪೂರ್ವಾನ್ವಯಾವಾಗಿ ದಿಶಾ ಸ್ಥಾಪನೆ ದಿವಸದಿಂದ ಆವಾರ್ಡ್ ನೀಡಲು ಚಿಂತನೆ ಮೊಳಕೆಯೊಡಿದಿದೆ.  ಎನ್.ಐ.ಸಿ ದಿಶಾ ಡ್ಯಾಷ್ ಬೋರ್ಡ್‌ನಲ್ಲಿ ನೀಡಿರುವ ರ್‍ಯಾಂಕಿಂಗ್ ಪಟ್ಟಿಯನ್ನು ಪರಿಶೀಲಿಸುವುದು  ಅಗತ್ಯವಾಗಿದೆ. ತುಮಕೂರು ಜಿಐಎಸ್ ರಚಿಸಿರುವ ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಇಲಾಖಾವಾರು ಜಿಐಎಸ್ ಲೇಯರ್ ಮಾಹಿತಿ ನೀಡುವುದು ಸೂಕ್ತವಾಗಿದೆ.

ನಂತರ ದಿಶಾ ಸಮಿತಿ ನಡವಳಿಕೆಗಳ ಮೇಲೆ ಕೈಗೊಂಡಿರುವ ಯೋಜನೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಗಳ ಬಳಕೆ  ಮಾಡಿರುವ  ಮಾಹಿತಿ ಆಧರಿಸಿ ರೂಪು ರೇಷೆ ನಿರ್ಧರಿಸ ಬಹುದಾಗಿದೆ.

ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು ಹಾಸ್ಯ ಮಾಡಿ ಶೇ 100 ರ ಗುರಿ ತಲುಪಿಸಿದ ನಮಗೂ ಅವಾರ್ಡ್ ನೀಡುತ್ತೀರಾ ಎಂಬ ಮಾತಿಗೆ ಹೌದು ಎಂಬ ಕೂಗೂ ದಿಶಾ ನಾಮನಿರ್ದೇಶಿತ ಸದಸ್ಯರ ಕಡೆಯಿಂದ ಕೇಳಿಸಿತು.

ದಿನಾಂಕ:27.06.2021  ರಂದೇ 5 ವರ್ಷ ತುಂಬುವ ಹಾಗೂ 6 ನೇ ವರ್ಷಕ್ಕೆ ದಿಶಾ ಸಮಿತಿ ಕಾಲಿಡುವ ಸಂದರ್ಭದಲ್ಲಿ ದಿಶಾ ಅವಾರ್ಡ್ ನೀಡಲು ಚಿಂತನೆ ಆರಂಭವಾಗಿದೆ.  ಅಧಿಕಾರಿಗಳೇ ಜಾಗೃತಗೊಳ್ಳಿ ನಿಮ್ಮ ಅಭಿವೃದ್ಧಿ ಶ್ರಮ ಬಡವರ ಒಂದೊಂದು ಕಣ್ಣಿರು ಒರೆಸುವ ಮೆಟ್ಟಿಲಾಗಬೇಕು.’