21st November 2024
Share

TUMAKURU:SHAKTHIPEETA FOUNDATION

ತುಮಕೂರು ಲೋಕಸಭಾ  ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ದೇಶದ ಎಲ್ಲಾ ಸಂಸದರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ಅವರ ಅವಧಿಯಲ್ಲಿ ವರ್ಷಕ್ಕೊಂದರಂತೆ 5 ಗ್ರಾಮ ಪಂಚಾಯಿತಿಗಳನ್ನು  ಸಂಸದರ ಆದರ್ಶ ಗ್ರಾಮ ಯೋಜನೆಗೆ ಈಗಲೇ ಆಯ್ಕೆ ಮಾಡಿಕೊಳ್ಳುವ ಮೂಲಕ ‘ದೇಶದಲ್ಲಿಯೇ ಹೊಸ ಮುನ್ನುಡಿ’ ಬರೆದಿದ್ದಾರೆ.

ಕೋವಿಡ್ ಮಾಹಾಮಾರಿಯ ನೆಪದಲ್ಲಿ ಎರಡು ವರ್ಷದ ಸಂಸದರ ಆದರ್ಶ ಗ್ರಾಮ ಯೋಜನೆ ನೀರಿಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣದಿದ್ದರೂ ಒಳ್ಳೆಯ ಚಾಲನೆ ದೊರಕಿದೆ ಎಂದರೆ ತಪ್ಪಾಗಲಾರದು.

 ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿನ ಕುರುಂಕೋಟೆ ಗ್ರಾಮ ಪಂಚಾಯಿತಿ, ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿನ ಅರಳಗುಪ್ಪೆ ಗ್ರಾಮ ಪಂಚಾಯಿತಿ, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿನ ಗೋಡೆಕೆರೆ ಗ್ರಾಮ ಪಂಚಾಯಿತಿ, ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿನ ಚಿಕ್ಕದಾಳವಟ್ಟ ಗ್ರಾಮ ಪಂಚಾಯಿತಿ ಸೇರಿದಂತೆ 5 ಗ್ರಾಮ ಪಂಚಾಯಿತಿಗಳನ್ನು ಆಯ್ಕೆಮಾಡಿ ಸಾಗಿ ಪೋರ್ಟಲ್‌ನಲ್ಲಿ ಅಪ್ ಲೋಡ್ ಮಾಡಲು ದಿನಾಂಕ:26.03.2021 ರಲ್ಲಿ ನಡೆದ ದಿಶಾ ಸಭೆಯಲ್ಲಿ ನಿರ್ಣಯ ಮಾಡಿಸಿದ್ದಾರೆ.

ಈಗಾಗಲೇ ಎರಡು ಗ್ರಾಮಪಂಚಾಯಿತಿಗಳಿಗೆ ನೋಡೆಲ್ ಆಫೀಸರ್ ನೇಮಕ ಮಾಡಲಾಗಿದೆ. ಒಂದೆರಡು ದಿವಸದಲ್ಲಿ ಉಳಿದ 3 ಗ್ರಾಮ ಪಂಚಾಯಿತಿಗಳಿಗೂ ನೋಡೆಲ್ ಆಫೀಸರ್ ನೇಮಕ ಮಾಡಲಿದ್ದಾರೆ. ಜೊತೆಗೆ ತುಮಕೂರು ನಗರದ ಹೊರವಲಯದ ಪ್ರದೇಶಗಳನ್ನು ರುರ್ಬನ್’ ಯೋಜನೆಗೆ ಸಂಸದರು ಗುರುತಿಸಿದ್ದು ತುಮಕೂರು ಉಪವಿಭಾಗಾಧಿಕಾರಿಯಾದ ಶ್ರೀ ಅಜಯ್ ಅವರನ್ನು ನೋಡೆಲ್ ಆಫೀಸರ್ ಆಗಿ ನೇಮಕ ಮಾಡಲು ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿಸಿದ್ದಾರೆ. ಏಫ್ರಿಲ್ ಮೊದಲ ವಾರದಲ್ಲಿ ರುರ್ಬನ್ ವ್ಯಾಪ್ತಿಯನ್ನು ಪ್ರಕಟಿಸಿಲಿದ್ದಾರೆ.

ನಾನು ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯ ಸಂಸದರ ಆದರ್ಶ ಗ್ರಾಮ ಯೋಜನೆ ತಪಾಸಣೆಗೆ ಹೋಗಿದ್ದಾಗ ಪಂಚಾಯತ್ 100 – ಬಾಪೂಜಿ ಸೇವಾ ಕೇಂದ್ರ’ ಪಟ್ಟಿ ಕೇಳಿದಾಗ ನನಗೆ ನೀಡಿರುವ ಪಟ್ಟಿ ನೋಡಿದಾಗ, ಇನ್ನೂ ಶ್ರೀ ಸಿದ್ಧರಾಮಯ್ಯನವರೇ ನಮ್ಮ ಮುಖ್ಯ ಮಂತ್ರಿಗಳು ಮತ್ತು ಶ್ರೀ ಹೆಚ್.ಕೆ.ಪಾಟೀಲ್‌ರವರೇ ನಮ್ಮ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರು.

ಇದು ಸಂಸದರ ಆದರ್ಶ ಗ್ರಾಮ ಯೋಜನೆ ಪಂಚಾಯಿತಿಯ ಸ್ಥಿತಿ ಎಂದರೆ ತಪ್ಪಾಗಲಾರದು, ಇನ್ನೂ ಉಳಿದವುಗಳ ಸ್ಥಿತಿ ಹೇಗೆ? ಅಧಿಕಾರಿಗಳು ಇವುಗಳನ್ನು ಗಮನಿಸುವುದಿಲ್ಲವೇ? ಮುಂದೆ ಈ ರೀತಿ  ಆಗದಂತೆ ಎಚ್ಚರ ವಹಿಸಲು ಎಲ್ಲಾ ಹಂತದ ಅಧಿಕಾರಿಗಳಿಗೆ ಬಹಿರಂಗವಾಗಿ ಸಲಹೆ ನೀಡಲಾಗಿದೆ.

ನಾನೂ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ ಪ್ರತಿ ಹಂತದಲ್ಲೂ ನಮ್ಮ ಪ್ರಧಾನಿ ಶ್ರೀ ನರೇಂದ್ರಮೋದಿಯವರ ಕನಸಿನ ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಕೈಗೊಳ್ಳ ಬೇಕಾಗಿರುವ ಯೋಜನೆಗಳ ಬಗ್ಗೆ ಡಿಜಿಟಲ್ ರೂಪದಲ್ಲಿ ಸಲಹೆ ನೀಡಲು ಒಂದು ವಾಟ್ಸ್ ಅಫ್ ಗ್ರೂಪ್’ ಮಾಡಿಸಲಾಗಿದೆ. ಪಿಡಿಓಗಳು ಗಮನಿಸಲು ಮನವಿ ಮಾಡಲಾಗಿದೆ.

ಸಂಸದರ ಅಭಿಪ್ರಾಯ ಪಡೆದ ನಂತರವೇ ನಾನೂ ಸಲಹೆ ನೀಡುವುದು, ದಯವಿಟ್ಟು ಪ್ರತಿಯೊಂದು ಯೋಜನೆಗೂ ಚಾಲನೇ ನೀಡಿ. ಮೊದಲು ಬಾಪೂಜಿ ಸೇವಾ ಕೇಂದ್ರದ ಅವಗಡ ಬದಲಾಯಿಸಿ. ಈ ರೀತಿ ಯಾವುದೇ ವಿಷಯ ನನ್ನ ಕಣ್ಣಿಗೆ ಇನ್ನೂ ಮುಂದೆ ಕಂಡಲ್ಲಿ ನಿಯಾಮುನುಸಾರ ಕ್ರಮ ಕೈಗೊಳ್ಳಲು ದಿಶಾ ಸದಸ್ಯ ಕಾರ್ಯದರ್ಶಿರವರಿಗೆ ವರದಿ ನೀಡಲಾಗುವುದು.