12th September 2024
Share

TUMAKURU:SHAKTHIPEETA FOUNDATION

 ಆತ್ಮೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರೇ.

ಮಾರಶೆಟ್ಟಿಹಳ್ಳಿ, ಗೋಡೆಕೆರೆ, ಕುರುಂಕೋಟೆ, ಚಿಕ್ಕದಾಳವಟ್ಟ ಮತ್ತು ಅರಳಗುಪ್ಪೆ ಗ್ರಾಮಪಂಚಾಯಿತಿ.

ತುಮಕೂರು ಜಿಲ್ಲೆ.

  ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಈ ಯೋಜನೆಯನ್ನು ಜಾರಿಗೊಳಿಸಿದ್ದಾರೆ.  ದೇಶದ ಪ್ರತಿಯೊಬ್ಬ ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರು ಪ್ರತಿ ವರ್ಷ ಒಂದೊಂದು ಗ್ರಾಮಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡು 5 ವರ್ಷದ ಅವಧಿಯಲ್ಲಿ ಐದು ಗ್ರಾಮಪಂಚಾಯಿತಿಗಳನ್ನು ಅಭಿವೃದ್ಧಿ ಪಡಿಸುವುದು ಅವರ ಆಶಯ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಅವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ಗ್ರಾಮ ಪಂಚಾಯತಿಯನ್ನು ಒಂದೇ ಬಾರಿ ಆಯ್ಕೆ ಮಾಡಿಕೊಳ್ಳಲು ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿ ಪ್ರಯತ್ನಿಸಿದರು.

ಈ ಹಿನ್ನಲೆಯಲ್ಲಿ ಒಂದೇ ಬಾರಿ ಐದು ಗ್ರಾಮಪಂಚಾತಿಗಳನ್ನು ಆಯ್ಕೆ ಮಾಡಿಕೊಳ್ಳಲು ಪೋರ್ಟಲ್‌ನಲ್ಲಿ ದೇಶದ ಎಲ್ಲಾ ಸಂಸದರಿಗೂ ಅವಕಾಶ ದೊರೆತಿದೆ. ಅದರಂತೆ ಸಂಸದರು ಮಾರಶೆಟ್ಟಿಹಳ್ಳಿ, ಗೋಡೆಕೆರೆ, ಕುರುಂಕೋಟೆ, ಚಿಕ್ಕದಾಳವಟ್ಟ ಮತ್ತು ಅರಳಗುಪ್ಪೆ ಗ್ರಾಮಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು ದೇಶದಲ್ಲಿಯೇ ಮಾದರಿಯಾಗಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಿದ್ದಾರೆ.

 ತುಮಕೂರು ನಗರ ವಿಧಾನಸಭಾ ಕ್ಷೇತ್ರ ಸ್ಮಾರ್ಟ್ ಸಿಟಿಯಾಗಿದೆ. ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿ ರುರ್ಬನ್’ ಯೋಜನೆಗೆ ಸಂಸದರು ಆಯ್ಕೆ ಮಾಡಿದ್ದಾರೆ. ಇನ್ನೂ ಬಾಕಿ ಇರುವುದು ತುರುವೇಕೆರೆ ವಿಧಾನಸಭಾ ಕ್ಷೇತ್ರ, ಇಲ್ಲಿ ಯಾರಾದರೂ ರಾಜ್ಯಸಭಾ ಸದಸ್ಯರಿಂದ ಒಂದು ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಸಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ.

ಈ ಕೆಳಕಂಡ ಅಂಶಗಳ ಮಾಹಿತಿ ಸಂಗ್ರಹಿಸಿಟ್ಟುಕೊಂಡು ವಿಲೇಜ್ ಡೆವಲಪ್ ಮೆಂಟ್ ಪ್ಲಾನ್ ಮಾಡಿ ಪೋರ್ಟಲ್‌ನಲ್ಲಿ ಅಫ್‌ಲೋಡ್ ಮಾಡುವುದು ಅಗತ್ಯವಾಗಿದೆ.

ತಾವೂ 5 ಜನ ಕುಳಿತುಕೊಂಡು ಈ ಅಂಶಗಳ ಬಗ್ಗೆ ಸಮಾಲೋಚನೆ ನಡೆಸಿ, ಇವುಗಳಲ್ಲಿ ಯಾವ ಮಾಹಿತಿ ಬೇಕಿಲ್ಲ ಅಥವಾ ಇನ್ನೂ ಯಾವುದಾದರೂ ಅಂಶಗಳನ್ನು ಸೇರ್ಪಡೆ ಮಾಡಬೇಕು ಎಂಬ ಬಗ್ಗೆ ಚರ್ಚಿಸಿ ಒಂದು ಒಮ್ಮತದ ಅಭಿಪ್ರಾಯಕ್ಕೆ ಬನ್ನಿ,

ತಾವು ಯಾವಾಗ ಬೇಕಾದರೂ ಐದು ಸೇರಿಕೊಂಡು ಸಮಾಯವಾಕಾಶ ನಿಗದಿಗೊಳಿಸಿ, ನಾನು ಸಹ  ವಿಡಿಪಿ ಸಂಬಂಧ ಸಂವಾದ ನಡೆಸುತ್ತೇನೆ. ನಂತರ ನೋಡೆಲ್ ಆಫೀಸರ್‌ರವರೊಂದಿಗೆ ಚರ್ಚಿಸಿ ಅಂತಿಮ ರೂಪಕ್ಕೆ ತಂದು  ಸಂಸದರು ಮತ್ತು ಸಿಇಓ ರವರೊಂದಿಗೆ ಸಮಾಲೋಚನೆ ನಡೆಸೋಣ. ನಂತರ ಎಲ್ಲರೂ ಒಪ್ಪಿದ ನಂತರ ವಿಡಿಪಿಗೆ ಜಿಐಎಸ್ ಲೇಯರ್ ಮಾಡಲು ಕ್ರಮಕೈಗೊಳ್ಳಲು ಈ ಮೂಲಕ ಮನವಿ.

 ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಸಂಸದರ ಆದರ್ಶ ಗ್ರಾಮ ಯೋಜನೆ(ಎಸ್.ಎ.ಜಿ.ವೈ.) , ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ನಮ್ಮ ಗ್ರಾಮ-ನಮ್ಮ ಯೋಜನೆ, ಮಿಷನ್ ಅತ್ಯೋದಯ ಯೋಜನೆಯ ಅಂಶಗಳು ಸೇರಿದಂತೆ, ಮಾರಶೆಟ್ಟಿಹಳ್ಳಿ, ಗೋಡೆಕೆರೆ, ಕುರುಂಕೋಟೆ, ಚಿಕ್ಕದಾಳವಟ್ಟ ಮತ್ತು ಅರಳಗುಪ್ಪೆ  5 ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಗ್ರಾಮಗಳ ಯೋಜನೆಗೆ   ಸಂಗ್ರಹಿಸ ಬೇಕಾದ ಗ್ರಾಮವಾರು, ವ್ಯಕ್ತಿವಾರು ಮತ್ತು ಕುಟುಂಬವಾರು ಮಾಹಿತಿಗಳ ಪಟ್ಟಿ ಲಗತ್ತಿಸಿದೆ.

ಕೊರೋನಾ ಮಹಾಮಾರಿ ಬಹುತೇಕ ಎರಡು ವರ್ಷ ಹಾಳು ಮಾಡಿದೆ. ಉಳಿದ ಮೂರು ವರ್ಷದ ಸಂಸದರ ಅವಧಿಯಲ್ಲಿ ನೀವೂ ಐದು ಜನ ಪಿಡಿಓಗಳು ದೇಶದ ಸುದ್ದಿ ಆಗಬೇಕು. ಈ ಯೋಜನೆಯಲ್ಲಿ ಆಯ್ಕೆ ಮಾಡುವ ಪ್ರತಿಯೊಂದು ಯೋಜನೆ ಗಳನ್ನು ಆಯಾ ಇಲಾಖಾ ಅನುದಾನದಲ್ಲಿ ವಿಶೇಷ ಆಧ್ಯತೆ  ನೀಡಿ ಮಂಜೂರು ಮಾಡಬೇಕಂತೆ. ನಾವೂ ಒಂದು ಪ್ರಯೋಗ ಶಾಲೆಯಂತೆ  ಪ್ರಯತ್ನ ಮಾಡೋಣ.

 5 ಗ್ರಾಮಪಂಚಾಯಿತಿಗಳ, ಐದು ತಾಲ್ಲೂಕುಗಳ ಅಧಿಕಾರಿಗಳ, ಎಲ್ಲರ ಬುದ್ದಿವಂತಿಕೆಗಳನ್ನು ಕ್ರೋಡೀಕರಿಸಿ ವಿಡಿಪಿ ಮಾಡೋಣ. ಯೋಜನೆಗಳು ಬರೀ ಘೋಷಣೆ ಆಗಬಾರದು, ನಾಮಕವಾಸ್ಥೆಗೆ ಮಾಡಬಾರದು ಪ್ರಾಮಾಣಿಕ ಪ್ರಯತ್ನ ಮಾಡೋಣ.

ಪಲಿತಾಂಶ ನಮ್ಮದಲ್ಲ. ಯಾರಿಂದ ತಪ್ಪಾಗಿದೆ, ಹೇಗೆ ತಪ್ಪಾಗಿದೆ ಎಂಬ ಅಂಶವನ್ನು ಮಾನ್ಯ ಮುಖ್ಯ ಮಂತ್ರಿಯವರ ಮೂಲಕ , ಮಾನ್ಯ ಪ್ರಧಾನಿಯವರಿಗೆ ಕಳುಹಿಸುವುದು ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ ನನ್ನ ಆದ್ಯ ಕರ್ತವ್ಯ.