15th September 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯ ಎಲ್ಲಾ ಇಲಾಖೆಗಳು ಗಣಕ ವಿಭಾಗದವರಿಗೆ ಜಿಐಎಸ್ ತರಬೇತಿ ನೀಡುವ ಮೂಲಕ ಅವರ ಕಚೇರಿಯಲ್ಲಿಯೇ ಕುಳಿತು ತುಮಕೂರು ಜಿಐಎಸ್ ಪೋರ್ಟಲ್ ಮತ್ತು ದಿಶಾ ಪೋರ್ಟಲ್‌ಗೆ ಅಫ್ ಲೋಡ್ ಮಾಡಲು ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಮಹತ್ವದ ಚಿಂತನೆ ನಡೆದಿದೆ.

ಈ ಬಗ್ಗೆ ಎನ್‌ಐಸಿ ಜಿಲ್ಲಾ ಅಧಿಕಾರಿಯಾದ ಶ್ರೀ ಅಜಯ್‌ರವರಿಗೆ ಇಲಾಖಾವಾರು ಗಣಕ ವಿಭಾಗದವರ ಮಾಹಿತಿ ಸಂಗ್ರಹಿಸಿ ಅವರಿಗೆ ತರಬೇತಿ ನೀಡುವ ಬಗ್ಗೆ ರೂಪುರೇಷೆಗಳ ವರದಿಯನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಅನುಮತಿ ಪಡೆಯಲು ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಸೂಚಿಸಿದ್ದಾರೆ.

 ಈ ಹಿನ್ನಲೆಯಲ್ಲಿ ತುಮಕೂರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಇಲಾಖೆಯ ಗಣಕ ವಿಭಾಗಕ್ಕೆ ಭೇಟಿ ಮಾಡಿ ಅವರೊಂದಿಗೆ ಚರ್ಚಿಸಿದಾಗ ಎಲ್ಲರೂ ಸಹ ವಿಶೇಷ ಆಸಕ್ತಿ ವಹಿಸಿ ಜಿಐಎಸ್ ಲೇಯರ್ ಬಗ್ಗೆ ತರಬೇತಿ ಪಡೆಯುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಇಲಾಖೆಯ ಉಪನಿರ್ದೇಶಕರಾದ ಶ್ರೀ ನಟರಾಜ್ರವರು ಹಾಜರಿದ್ದು ಜಿಐಎಸ್ ಲೇಯರ್ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್, ಎನ್‌ಆರ್‌ಡಿಎಂಎಸ್ ಮತ್ತು ಸ್ಕಿಲ್‌ಡೆವಲಪ್‌ಮೆಂಟ್  ಇಲಾಖೆ ಸಹ ಬಾಗಿತ್ವದಲ್ಲಿ ತರಬೇತಿ ನೀಡಲು ರೂಪುರೇಷೆ ನಿರ್ಧರಿಸಬೇಕಿದೆ.