12th September 2024
Share

TUMAKURU:SHAKTHIPEETA FOUNDATION

ಸ್ವತಂತ್ರ ಭಾರತದ 75 ನೇ ವರ್ಷದ ಅಂಗವಾಗಿ ತುಮಕೂರು ಜಿಲ್ಲಾ ಅಂಕಿ ಅಂಶಗಳ ನೋಟವನ್ನು ಜಿಐಎಸ್ ಆಧಾರಿತ ಪ್ರಕಟಿಸುವ ಮಹತ್ವದ ನಿರ್ಧಾರಕ್ಕೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯ ಕೈಗೊಂಡಿದೆ.

 ಅಂಕಿ ಅಂಶಗಳ ರೀತಿ ನೀತಿಯನ್ನೇ ಅಲ್ಪ-ಸ್ವಲ್ಪ ಬದಲಾವಣೆ ಮಾಡಿ ಹಾಲಿ ಇರುವ ಮತ್ತು ಹೊಸದಾಗಿ ಆಗಬೇಕಾಗಿರುವ ಯೋಜನೆಗಳ ಮಾಹಿತಿಯನ್ನು ಪ್ರಕಟಿಸದರೇ ಹೇಗೆ ಎಂಬ ಚಿಂತನೆಯನ್ನು ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್ ನೀಡಿದಾಗ, ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ರವರು ಸಹಮತ ವ್ಯಕ್ತಪಡಿಸಿ ಮುಂದಿನ ಸಭೆಗೆ ಜಿಲ್ಲಾ ಸಂಗ್ರಹಣಾಧಿಕಾರಿಗಳು ಈ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ಬರಲು ಸೂಚಿಸಿದರು.  

 ಪ್ರಧಾನಿ ಮೋದಿಯವರ ಆಶಯದಂತೆ 2022 ರೊಳಗೆ ಪೂರ್ಣಗೊಳಿಸುವ ಯೋಜನೆಗಳ ಬಗ್ಗೆ  ಎಲ್ಲೆಲ್ಲಿ ಏನೇನು ಮಾಡಿದರೇ ಶೇಕಡ 100 ರ ಗುರಿ ತಲುಪಬೇಕು ಎಂಬ ಬಗ್ಗೆ ಅಂಕಿ- ಅಂಶಗಳವಾರು ಮಾಹಿತಿಯನ್ನು ಇಲಾಖಾವಾರು ಮತ್ತು ಯೋಜನಾವಾರು ಮಾಡಲು ಇಲಾಖೆಗಳು ಸಿದ್ಧತೆ ನಡೆಸಬೇಕಿದೆ ಎಂದು ಅಧ್ಯಕ್ಷತೆ ವಹಿಸಿದ್ಧ ಶ್ರೀ ಜಿ.ಎಸ್.ಬಸವರಾಜ್ ರವರು ಸೂಚಿಸಿದರು.

 ಈ ಬಗ್ಗೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ತುಮಕೂರು ಜಿಲ್ಲೆ ಇವರನ್ನು ಭೇಟಿಯಾಗಲು ಕಚೇರಿಗೆ ಹೋದಾಗ ಅವರು ಪ್ರವಾಸದಲ್ಲಿ ಇದ್ದುದರಿಂದ ಉಪನಿರ್ದೇಶಕರಾದ ಶ್ರೀಮತಿ ಸುವರ್ಣರವರು ಮತ್ತು ಎಎ ಓ ಶ್ರೀ ರವಿಕುಮಾರ್ ರವರ ಜೊತೆ ಸಮಾಲೋಚನೆ ನಡೆಲಾಯಿತು.

ಉದಾಃ: ಇಡೀ ದೇಶದಲ್ಲಿ 2019 ರೊಳಗೆ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸರಬರಾಜು ಮಾಡುವುದು ಕೇಂದ್ರ ಸರ್ಕಾರದ ಗುರಿ, ತುಮಕೂರು ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಗ್ರಾಮಗಳ ಜಿಐಎಸ್ ಲೇಯರ್ ಮಾಡಿ ಎಷ್ಟು ಗ್ರಾಮದಲ್ಲಿ ವಿದ್ಯುತ್ ಸರಬರಾಜು ಇದೆ, ಎಷ್ಟು ಗ್ರಾಮಗಳ್ಲಿ ಇಲ್ಲ, ಅವು ಯಾವು ಅಥವಾ ಪೂರ್ಣವಾಗಿ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸರಬರಾಜು ಆಗಿದೆ.  ಎಂಬ ಅಂಕಿಅಂಶಗಳ ತಾಜಾ ಡೇಟಾ ಪ್ರಕಟಿಸುವುದು.

ಹೌಸಿಂಗ್ ಫಾರ್ ಆಲ್-2022 ಯೋಜನೆಯಡಿ 2022 ರೊಳಗೆ ದೇಶದ ಎಲ್ಲಾ ಕುಟುಂಬಗಳಿಗೂ ಸೂರು ಒದಗಿಸಲೇ ಬೇಕು, ಯಾವ ಗ್ರಾಮದಲ್ಲಿ ಎಷ್ಟು ಕುಟುಂಬಗಳಿಗೆ ವಸತಿ ಇಲ್ಲ, ಅವರಿಗೆ ಯಾವ ಸರ್ವೇನಂಬರ್ ಜಮೀನಿನಲ್ಲಿ ನಿವೇಶನ ಮತ್ತು ವಸತಿ ನೀಡಲಾಗುವುದು ಎಂಬ ತಾಜಾ ಜಿಐಎಸ್ ಲೇಯರ್ ಮಾಡಿ, ಪ್ರತಿ ತಿಂಗಳು ಶೇಕಡವಾರು ಪ್ರಗತಿ ಬಗ್ಗೆ ಅಂಕಿ- ಅಂಶಗಳ ಮಾಹಿತಿ ಸಂಗ್ರಹಸಿದರೇ ಹೇಗೆ ಎಂಬ ಬಗ್ಗೆ ಚಿಂತನೆ ಆರಂಭವಾಗಿರುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.

 ಎಲ್ಲಾ ಇಲಾಖೆಗಳು ಈ ರೀತಿ ಮಾಹಿತಿ ನೀಡಿದರೇ ನಮ್ಮ ಜಿಲ್ಲಾ ಅಧಿಕಾರಿಗಳು, ನಿರ್ದೇಶಕರ ಅನುಮತಿ ಪಡೆದು ಸೂಕ್ತ ಕ್ರಮಕೈಗೊಳ್ಳಬಹುದು ಈ ಬಗ್ಗೆ ಅವರೊಂದಿಗೆ ಚರ್ಚಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಯಿತು.