22nd December 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಕ್ಯಾಂಪಸ್‌ಗೆ ವಿವಿಧ ವರ್ಗದ ಪರಿಣಿತರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈಗಾಗಲೇ ಹಲವಾರು ಪರಿಣಿತರು ವಿವಿಧ ರೀತಿಯ ಸಲಹೆಗಳನ್ನು ನೀಡಿದ್ದಾರೆ. ಎಲ್ಲಾ ಪರಿಣಿತರ ಸಲಹೆಗಳನ್ನು ಪಡೆದು ಅಂತಿಮವಾಗಿ ಹಲವಾರು ಜನರೊಂದಿಗೆ ಸಂವಾದ ನಡೆಸಿ ಶೀಘ್ರದಲ್ಲಿ ಲೇ-ಔಟ್‌ಗೆ ಅಂತಿಮ ರೂಪು ಕೊಡಲಾಗುವುದು.

ನದಿ ಜೋಡಣೆ ಪ್ರಾತ್ಯಾಕ್ಷಿಕೆ: ಭೂಮಿಯ ಮೇಲೆ ನಿರ್ಮಾಣ ಮಾಡಿರುವ ಬಾರತ ನಕ್ಷೆಯಲ್ಲಿ  ನದಿ ಜೋಡಣೆ ಪ್ರಾತ್ಯಕ್ಷಿಕೆಗೆ ಅಂತಿಮ ರೂಪು ಕೊಟ್ಟು ಭೂಮಿಯ ಮೇಲೆ ಗುರುತು ಮಾಡಿ ನದಿ ಹುಟ್ಟುವ ಸ್ಥಳದಿಂದ ಸಮುದ್ರ ಸೇರುವ ತನಕ  ,  ನದಿಗಳ ನೀರು ಸರಾಗವಾಗಿ ಹರಿಯುವಂತೆ ಮಾಡುವ ಕಾಮಗಾರಿಗೆ ಚಾಲನೆ

ನೀಡಲು ಶ್ರೀ ಹರೀಶ್‌ರವರು ಮಾಹಿತಿ ಸಂಗ್ರಹಿಸಿದರು.

ಹಿಂದೂ ಸಂಸ್ಕೃತಿ: ಶ್ರೀ ನಾಗರಾಜರಾವ್‌ರವರು ಕ್ಯಾಂಪಸ್‌ನಲ್ಲಿ ಹಿಂದೂ ಸಂಸ್ಕೃತಿ ಪ್ರಕಾರ ಯಾವ ಭಾಗದಲ್ಲಿ ಏನಿರಬೇಕು, ತಾವು ಈಗ ಮಾಡಲು ಉದ್ದೇಶಿರುವುದರಲ್ಲಿ ಯಾವುದು ಸರಿ ಇದೆ, ಯಾವುದು ಬದಲಾಗಬೇಕು ಎಂಬ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪುರಾವೆಗಳ ಸಹಿತ ಲಿಖಿತ ರೂಪದಲ್ಲಿ  ವರದಿ ನೀಡುವ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಮಾಹಿತಿ ಸಂಗ್ರಹಿಸಿದರು.

ರಾಜ್ಯ ಮತ್ತು ಜಿಲ್ಲಾ ಭವನ: ಕ್ಯಾಂಪಸ್‌ನಲ್ಲಿ ದೇಶದ ೩೭ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಭವನಗಳು ಮತ್ತು ಕರ್ನಾಟಕ ರಾಜ್ಯದ ಜಿಲ್ಲಾ ಭವನಗಳು ಎಲ್ಲೆಲ್ಲಿ ನಿರ್ಮಾಣ ಮಾಡಬೇಕು, ಯಾವ ರಾಜ್ಯ ಮತ್ತು ಯಾವ ಜಿಲ್ಲೆಯ ಭವನಗಳು ಒಂದೇ ಕಟ್ಟಡದಲ್ಲಿರಬೇಕು ಎಂಬ ವರದಿ ನೀಡಲು ಶ್ರೀ ಟಿ.ಆರ್.ರಘೋತ್ತಮರಾವ್‌ರವರು ಮಾಹಿತಿ ಸಂಗ್ರಹಿಸಿದರು.

ಅರ್ಕಿಟೆಕ್ಟ್: ಆರಂಭದಿಂದ ಕ್ಯಾಂಪಸ್ ಉದ್ದೇಶಗಳ ಬಗ್ಗೆ ಮತ್ತು ಕ್ಯಾಂಪಸ್ ಕನಸಿನ ಬಗ್ಗೆ ಸಲಹೆ ನೀಡುತ್ತಿರುವ ಶ್ರೀ ಚಿದಾನಂದ್‌ರವರು ಕ್ಯಾಂಪಸ್‌ನ ಅಂತಿಮ ರೂಪು ಹೇಗಿರ ಬೇಕು ಎಂಬ ಬಗ್ಗೆ ತಮ್ಮದೇ ಆದ ಪರಿಕಲ್ಪನೆಯ ವರದಿ ನೀಡಲು ಹಾಲಿ ಪ್ರಗತಿಯಲ್ಲಿರುವ ಎಲ್ಲಾ ಕಾಮಗಾರಿಗಳ ಪರಿಶೀಲನೆ ಮಾಡಿದರು.

ಕ್ಯಾಂಪಸ್ ಹೆಸರು: ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಕ್ಯಾಂಪಸ್‌ಗೆ ಅಧಿಕೃತವಾಗಿ ಯಾವುದೇ ಹೆಸರು ನೀಡಿಲ್ಲ, ರಾಜ್ಯ ಸರ್ಕಾರ ಈ ಕ್ಯಾಂಪಸ್‌ಗೇ ಉತ್ತಮವಾದ ಒಂದು ಹೆಸರು ಇಡಲು ಸೂಚಿಸಿದೆ. ಕ್ಯಾಂಪಸ್‌ನ ಉದ್ದೇಶ ಭೂಮಿಯ ಮೇಲೆ ಗುರುತು ಮಾಡುವ ತನಕ ಯಾವುದೇ ಹೆಸರು ಅಂತಿಮ ಗೊಳಿಸಿರಲಿಲ್ಲ, ಪ್ರಸ್ತುತ ಶಕ್ತಿಪೀಠ ಫೌಂಡೇಷನ್ ಪರಿಕಲ್ಪನೆಯ ಕನಸುಗಳನ್ನು ಭೂಮಿಯ ಮೇಲೆ ಗುರುತು ಮಾಡಲಾಗಿದೆ. ವಿವಿಧ ವರ್ಗದವರ ಅಭಿಪ್ರಾಯ ಪಡೆದು ಕ್ಯಾಂಪಸ್‌ಗೆ ಒಂದು ಹೆಸರು ಸೂಚಿಸಲು ಶ್ರೀ ಮಧುಕರ ಮತ್ತು ಅವರ ತಂಡದವರು ಚಿಂತನೆ ಆರಂಭಿಸಿದ್ದಾರೆ. 

ಕ್ಯಾಂಪಸ್‌ಗೆ ಆರಂಭದಿಂದಲೂ ಒಂದು ಇಂಚು ಭೂಬಳಕೆ ಬಗ್ಗೆ ಜಿಐಎಸ್ ಅಧ್ಯಯನ ಮಾಡುತ್ತಿರುವ ಶ್ರೀ ಸತ್ಯಾನಂದ್ ಮತ್ತು ಅವರ ತಂಡ, ಶಕ್ತಿಪೀಠಗಳ ಸಂಶೋಧಕರಾದ ಶ್ರೀ ಅಶೋಕ್ ಮತ್ತು ಸ್ಟ್ರಚ್ಚರಲ್ ಇಂಜಿನಿಯರ್ ಶ್ರೀ ಮಲ್ಲೇಶ್‌ರವರು ಸಹ ಅವರ ತಾಂತ್ರಿಕಕ ವರದಿಗಳನ್ನು ಶೀಘ್ರವಾಗಿ ನೀಡಲಿದ್ದಾರೆ. 

ಮೇಲುಕೋಟೆಯ ಶ್ರೀ ತಾತಾಚಾರ್‌ರವರು ಮತ್ತು ಶ್ರೀ ಚಂದ್ರಪ್ಪನವರು ಸ್ಥಳ ಪರಿಶೀಲನೆ ಮಾಡಿ ಎಲ್ಲಿ, ಯಾವ ಜಾತಿಯ ಗಿಡ ಹಾಕಬೇಕು, ಏಕೆ ಹಾಕಬೇಕು ಎಂಬ ವರದಿ ನೀಡಲಿದ್ದಾರೆ.