TUMAKURU:SHAKTHIPEETA FOUNDATION
ಗುಬ್ಬಿ ವಿಧಾನಸಭಾ ಕ್ಷೇತ್ರದ ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಸಂಪಿಗೆ ನಿಟ್ಟೂರು ರಸ್ತೆಯ ಗ್ರಾಮಪಂಚಾಯಿತಿ ವ್ಯಾಪ್ತಿ ಗಡಿಯಿಂದ ಮಲ್ಲೆನಹಳ್ಳಿ, ರಾಂಪುರ, ದೊಣ್ಣೇರಿ, ಮಾರಶೆಟ್ಟಿಹಳ್ಳಿ, ಕುಂದರನಹಳ್ಳಿ ಮಾರ್ಗವಾಗಿ ಗ್ರಾಮಪಂಚಾಯಿತಿ ವ್ಯಾಪ್ತಿ ಗಡಿವರೆಗೆ ಮಾದರಿ ರಸ್ತೆಯಾಗಿ ರೂಪಿಸಲು ಚಿಂತನೆ ನಡೆಸಲಾಗಿದೆ.
ಈ ರಸ್ತೆ ಎಷ್ಟು ಕೀಮೀ ಉದ್ದ ಇದೆ. ಲೋಕೋಪಯೋಗಿ ಇಲಾಖೆಯಿಂದ ಎಷ್ಟು ಕಿಮೀ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಉಳಿದ ರಸ್ತೆಯನ್ನು ಜಿಲ್ಲಾ ಪಂಚಾಯತ್ ಮತ್ತು ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಿಂದ ಅಭಿವೃದ್ಧಿ ಪಡಿಸಲು ಅನುದಾನ ಮಂಜೂರಾಗಿರುವ ದೂರ ಎಷ್ಟು, ಈ ರಸ್ತೆಯ ಅಗಲ ಎಷ್ಟಿದೆ, ಭೂ ಸ್ವಾಧೀನದ ಅವಶ್ಯಕತೆ ಇದೆಯಾ? ಎಂಬ ಬಗ್ಗೆ ಜಿಐಎಸ್ ಆಧಾರಿತ ನಕ್ಷೆಯೊಂದಿಗೆ, ರಸ್ತೆಯ ಉದ್ದ, ಯಾವ ಇಲಾಖೆ ಎಷ್ಟು ಕೀಮೀ ರಸ್ತೆ ಅಭಿವೃದ್ಧಿ ಪಡಿಸುತ್ತಿದೆ, ಅಭಿವೃದ್ಧಿ ಮಾಡದೇ ಇರುವ ರಸ್ತೆಯ ಉದ್ದ ಎಷ್ಟು ಕಿಮೀ ಇದೆ ಎಂಬ ಮಾಹಿತಿ ಸಂಗ್ರಹ ಮಾಡಲಾಗುವುದು.
ಗ್ರಾಮಪಂಚಾಯಿತಿ ವ್ಯಾಪ್ತಿಯ ಎರಡು ಗಡಿಯಿಂದ ಎಷ್ಟು ದೂರ ಈ ರಸ್ತೆ ಇದೆ, ಈ ರಸ್ತೆಯನ್ನು (ಸಂಪಿಗೆ- ಮಾರಶೆಟ್ಟಿಗಹಳ್ಳಿ-ಕುಂದರನಹಳ್ಳಿ-ಅದಲಗೆರೆ- ಚಿಕ್ಕನಾಯಕನಹಳ್ಳಿ- ಬುಕ್ಕಾ ಪಟ್ನಾ ರಸ್ತೆ) ಮೇಲ್ದರ್ಗೆರಿಸಲು ಕೈಗೊಂಡಿರುವ ಕ್ರಮಗಳು ಏನು ಎಂಬ ಬಗ್ಗೆ ಇಇ ಲೋಕಪಯೋಗಿ, ಇಇ ಜಿಲ್ಲಾ ಪಂಚಾಯತ್ ಮತ್ತು ಇಇ ಪಿಎಂಜಿಎಸ್‌ವೈ ರವರೊಂದಿಗೆ ಸಮಾಲೋಚನೆ ನಡೆಸಲಾಗಿದೆ.
ಈ ರಸ್ತೆ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು, ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಹ ಅನುದಾನ ನೀಡಿದ್ದಾರೆ, ಅವರಿಬ್ಬರಿಗೂ ಅಭಿನಂದನೆಗಳು. ಜೊತೆಗೆ ಹೆಚ್.ಎ.ಎಲ್‌ಗೆ ಅನೂಕೂಲ ಮಾಡಲು ಲೋಕಪಯೋಗಿ ಇಲಾಖೆ ಸಹ ಅನುದಾನ ಮಂಜೂರು ಮಾಡಿ ರಸ್ತೆಯನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದೆ.
ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯ ಅತ್ಯಂತ ಪ್ರಮುಖ ರಸ್ತೆ ಇದಾಗಿದೆ. ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಈ ರಸ್ತೆಯನ್ನು ಮಾದರಿ ರಸ್ತೆಯಾಗಿ ರೂಪಿಸಲು ಇನ್ನೂ ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಈ ಮೂರು ಇಲಾಖೆಗಳ ಇಇ ರವರು ಮತ್ತು ಮಾರಶೆಟಿಹಳ್ಳಿ ಗ್ರಾಮಪಂಚಾಯಿತಿ ನೋಡೆಲ್ ಆಫೀಸರ್‌ರವರಿಗೆ ವರದಿ ಸಿದ್ಧಪಡಿಸಲು ಸಲಹೆ ನೀಡಲಾಗಿದೆ.
ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ 206 ರಸ್ತೆಯ ಉದ್ದದ ಮಾಹಿತಿ, ರೈಲ್ವೆ ಹಳಿ ಮಾರ್ಗದ ಮಾಹಿತಿ ಹಾಗೂ ಹೇಮಾವತಿ ಕಾಲುವೆ ಪಕ್ಕದ ರಸ್ತೆ ಮಾಹಿತಿ ಸೇರಿದಂತೆ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಿಧವಾದ ರಸ್ತೆಗಳು, ರೈತರ ಜಮೀನುಗಳಿಗೆ ಹೋಗುವ ಕರಾಬು ದಾರಿಗಳು ಮತ್ತು ಅಗತ್ಯವಿರುವ ಕರಾಬು ದಾರಿಗಳ ಬಗ್ಗೆಯೂ ನಕ್ಷೆ ಸಿದ್ಧಪಡಿಸಲು ಸೂಚಿಸಲಾಗಿದೆ.
ಎಲ್ಲಾ ರಸ್ತೆಗಳ ಪಕ್ಕದಲ್ಲಿ ಸಾಧ್ಯತೆ ಇರುವ ಕಡೆ ಗಿಡ ಹಾಕಲು ಕ್ರಮ ಕೈಗೊಳ್ಳಲು ನೋಡೆಲ್ ಆಫೀಸರ್ ಶ್ರೀ ರಮೇಶ್ ರವರೊಂದಿಗೆ ಚರ್ಚಿಸಲಾಗಿದೆ. ರಸ್ತೆಗಳು ವಿವಿಧ ಇಲಾಖೆಗಳ ವ್ಯಾಪ್ತಿಗೆ ಸೇರಿದ್ದರಿಂದ ಆ ಎಲ್ಲಾ ಇಲಾಖೆಗಳ ಸಮನ್ವಯತೆ ಸಾಧಿಸಲು ರಸ್ತೆಗಳ ಅಭಿವೃದ್ಧಿಗೆ ಒಬ್ಬ ನೋಡೆಲ್ ಇಂಜನಿಯರ್ ನೇಮಕ ಮಾಡುವುದು ಸೂಕ್ತವಾಗಿದೆ.
‘ಇದೇ ಮಾದರಿಯನ್ನು ಸಂಸದರ 5 ಆದರ್ಶ ಗ್ರಾಮ ಪಂಚಾಯಿತಿಗಳಲ್ಲೂ ಕೈಗೊಳ್ಳಲು ಸಲಹೆ ನೀಡಲಾಗಿದೆ. ಪಿಡಿಓ ರವರು ಈ ಬಗ್ಗೆ ವಿಶೇಷ ಆಸಕ್ತಿ ವಹಿಸುವುದು ಅಗತ್ಯವಾಗಿದೆ’