13th November 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯದ ಮೇರೆಗೆ ತುಮಕೂರು ಜಿಲ್ಲೆಯಲ್ಲಿನ ಎಲ್ಲಾ ಶಾಲೆಗಳಲ್ಲಿ ಮಗುವಿಗೊಂದು ಮರ ಶಾಲೆಗೊಂದು ವನ ಯೋಜನೆಯಡಿಯಲ್ಲಿ ಗಿಡ ಹಾಕಲು ಡಿಮ್ಯಾಂಡ್ ಸರ್ವೇಯನ್ನು   ತುಮಕೂರು ಡಿಡಿಪಿಐ ಶ್ರೀ ನಂಜಯ್ಯನವರು ಮತ್ತು ಮಧುಗಿರಿ ಡಿಡಿಪಿಐ ಶ್ರೀ ರೇವಣ್ಣಸಿದ್ದಪ್ಪನರವರು ಅವರ ಕೆಲಸ ಆರಂಭಿಸಿದ್ದಾರೆ.

ಹಾಗೇಯೇ ತುಮಕೂರು ನಗರದಲ್ಲಿ ಗಿಡಹಾಕಲು ತುಮಕೂರು ಮಹಾನಗರ ಪಾಲಿಕೆ ಮೇಯರ್ ಶ್ರೀ ಕೃಷ್ಣಪ್ಪನವರು ಮತ್ತು ಆಯುಕ್ತರಾದ ಶ್ರಿಮತಿ ರೇಣುಕರವರು ಪ್ಲಾನ್ ಮಾಡಲು ಆರಂಭಿಸಿದ್ದಾರೆ.

ಅರಣ್ಯ ಇಲಾಖೆಯ ಡಿಎಫ್‌ಓರವರಾದ ಶ್ರೀ ಗೀರೀಶ್‌ರವರು  ಸಹ ಗಿಡಗಳ ವಿತರಣೆ ಮಾಡಲು ಯೋಜನೆ ರೂಪಿಸುತ್ತಿದ್ದಾರೆ.

ತುಮಕೂರು ಜಿಲ್ಲಾ ಪಂಚಾಯತ್ ಅಧಿಕಾರಿಗಳಾದ ಶ್ರೀ ರಮೇಶ್‌ರವರು ಮತ್ತು ಶ್ರೀ ನಂಜೇಗೌಡರವರು ಶಾಲಾ ಆವರಣದಲ್ಲಿ ಅಥವಾ ಸರ್ಕಾರಿ ಜಾಗದಲ್ಲಿ ಅಥವಾ ವಿದ್ಯಾರ್ಥಿಗಳ ಜಮೀನನಲ್ಲಿ ಗಿಡ ಹಾಕಲು ಗುಂಡಿ ತೆಗೆಯಲು ವಿಧ್ಯಾರ್ಥಿಗಳ ಪೋಷಕರು ನರೇಗಾ ಜಾಬ್ ಕಾರ್ಡ್ ಹೊಂದಿದ್ದಲ್ಲಿ ಅವರನ್ನು ಬಳಸಿಕೊಳ್ಳಲು ಸಹ ಚಿಂತನೆ ಮಾಡುತ್ತಿದ್ದಾರೆ. ಪರಿಸಾಕ್ತರು ಅಧಿಕಾರಿಗಳಿಗೆ ಸಲಹೆ ನೀಡಬಹುದಾಗಿದೆ.

ಇವರೆಲ್ಲರನ್ನೂ ಗಿಡಹಾಕಲು ಪ್ರೇರಣೆ ನೀಡಿದರೆ ಸಾಲದು, ನಮ್ಮ ಶಕ್ತಿಪೀಠ ಕ್ಯಾಂಪಸ್‌ನಲ್ಲಿಯೂ ಸಹ ಹಸಿರು ಕ್ಯಾಂಪಸ್ ಮಾಡುವ ಮೂಲಕ  ಸಾಧಕ-ಭಾಧಕಗಳ ಅರಿವು ನನಗೂ ಆಗಲಿ ಎಂಬ ಚಿಂತನೆಯಿಂದ ನಾನು ಸಹ ಭರದಿಂದ ಕೆಲಸ ಆರಂಭಿಸಿದ್ದೇನೆ. ಪಲಿತಾಂಶವನ್ನು  ಕಾದು ನೋಡೋಣ