21st December 2024
Share

TUMAKURU:SHAKTHIPEETA FOUNDATION

ಉತ್ತರಾಖಂಡ ರಾಜ್ಯದ ಹರಿದ್ವಾರ್ ಜಿಲ್ಲೆಯ ಕಂಕಲ್‍ನಲ್ಲಿ 52 ಶಕ್ತಿಪೀಠಗಳ ಥೀಮ್ ಪಾರ್ಕ್‍ನ್ನು ಅಲ್ಲಿನ ರಾಜ್ಯ ಸರ್ಕಾರದ ಪ್ರವಾಸೋಧ್ಯಮ ಇಲಾಖೆ ಸ್ಥಾಪಿಸಲು ಪೂರಕ ಕ್ರಮಕೈಗೊಂಡಿದೆ.
ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಶಕ್ತಿಪೀಠ ಫೌಂಡೇಷನ್ ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೂಕಿನ ಜೆಜಿ ಹಳ್ಳಿ ಹೋಬಳಿ, ಕೆ.ಆರ್.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಬಗ್ಗನಡು ಕಾವಲ್‍ನಲ್ಲಿ ವಿಶ್ವದ 108 ಶಕ್ತಿಪೀಠಗಳ ಪಾರ್ಕ್‍ನ್ನು ಸ್ಥಾಪಿಸಲು ಆರಂಭಿಸಿರುವುದು ನಿಜಕ್ಕೂ ತೃಪ್ತಿ ತಂದಿದೆ. ಹಲವಾರು ಜನ ಶ್ರಮಿಸುತ್ತಿದ್ದಾರೆ ಎಂದು ತಿಳಿಸಲು ನನಗೆ ಹೆಮ್ಮೆಯಾಗುತ್ತಿದೆ.
ಈಶ್ವರನ ಪತ್ನಿಯಾಗಿದ್ದ ಸತಿಯು ದಕ್ಷಬ್ರಹನ ಪುತ್ರಿ. ಸತಿಯು ಯಜ್ಞದಲ್ಲಿ ಬಿದ್ದಿದ್ದು ಯಾವಾಗ, ಇಲ್ಲಿಗೆ ಎಷ್ಟು ವರ್ಷಗಳಾಗಿರ ಬಹುದು ಎಂಬ ಅಂಶ ಇನ್ನೂ ನಮಗೆ ತಿಳಿದಿಲ್ಲ. ನಿಖರವಾದ ಮಾಹಿತಿಗಾಗಿ ನಮ್ಮ ಸಂಸ್ಥೆ ಅಧ್ಯಯನ ಆರಂಭಿಸಿದೆ. ಇಷ್ಟು ವರ್ಷಗಳ ನಂತರ ಯಜ್ಞ ನಡೆದ ಸ್ಥಳಕ್ಕೆ ಮೊದಲೇ ನಾವು ವಿಶ್ವದ ಮೊದಲನೇ 108 ಶಕ್ತಿಪೀಠಗಳ ಪಾರ್ಕ್ ಸ್ಥಾಪಿಸಲು ತಾಯಿ ಶಕ್ತಿದೇವತೆ ನಮಗೆ ಅವಕಾಶ ನೀಡಿದ್ದಕ್ಕೆ ನಾವೇ ಧನ್ಯರು. ಜೊತೆಗೆ ಉತ್ತರಾಖಂಡ ರಾಜ್ಯ ಸರ್ಕಾರದ ಶಕ್ತಿಪೀಠಗಳ ಥೀಮ್ ಪಾರ್ಕ್ ಚಿಂತನೆ ನಮಗೂ ಆನೆಬಲ ಬಂದಂತಾಗಿದೆ.
ಪ್ರಸ್ತುತ ಉತ್ತರಾಖಂಡ ರಾಜ್ಯ ಸರ್ಕಾರ ಈ ಎಲ್ಲಾ ಮಾಹಿತಿಗಳ ಅಂಶಗಳ ಸಂಗ್ರಹಣೆ ಮಾಡಲಿದೆ. ಈ ಬಗ್ಗೆ ಈಗಾಗಲೇ ಹರಿದ್ವಾರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಕೊರೋನಾ ಮಹಾಮಾರಿಯ ಅಬ್ಬರದ ನಂತರ ಕಂಕಲ್‍ಗೆ ಭೇಟಿ ನೀಡಿ ಸಮಾಲೋಚನೆ ನಡೆಸಲಾಗುವುದು.
ನಮ್ಮ ತಂಡ ಶಕ್ತಿಪೀಠ ಫೌಂಡೇಷನ್ ಸ್ಥಾಪನೆಯಾದಾಗ ಕಂಕಲ್‍ಗೆ ಭೇಟಿ ನೀಡಿ ಸತಿ ಯಜ್ಞಕ್ಕೆ ಬಿದ್ದ ಸ್ಥಳದಲ್ಲಿ ಪೂಜೆ ಮಾಡುವ ಮೂಲಕ ಚಾಲನೇ ನೀಡಲಾಗಿತ್ತು. ಪ್ರಸ್ತುತ ಭೂಮಿಯ ಮೇಲೆ ಭಾರತ ನಕ್ಷೆ ನಿರ್ಮಾಣ ಮಾಡಿ 108 ಶಕ್ತಿಪೀಠಗಳಿರುವ ಸ್ಥಳಗಳನ್ನು ಜಿಐಎಸ್ ಆಧಾರಿತ ಗುರುತು ಮಾಡಲಾಗಿದೆ.
ಪ್ರಸ್ತುತ ಗಿಡಗಳನ್ನು ಹಾಕಲು ಭರದ ಸಿದ್ಧತೆ ನಡೆಯುತ್ತಿದೆ, ಕೊರೊನಾ ಕ್ವಾರಂಟೈನ್ ಕ್ಯಾಂಪಸ್‍ನಲ್ಲಿಯೇ ಆರಂಭವಾಗಿದೆ. ಈಗ ಕಾಮಗಾರಿ ನಿಲ್ಲಿಸಲು ಒತ್ತಡವಿದೆ ಶಕ್ತಿದೇವತೆಯ ಆದೇಶ ಏನಿದೆ ನೋಡೋಣ.