22nd December 2024
Share

ಡಿಜಿಟಲ್ ಸೇವೆ ಡೊನೇಷನ್: ಈ ಪಟ್ಟಿಯಲ್ಲಿನ ಖಾಲಿ ಜಾಗವನ್ನು ಆಸಕ್ತರು ಭರ್ತಿ ಮಾಡಿ ಕಳುಹಿಸುವಿರಾ? ಗೂಗಲ್ ಡೇಟಾ ಯಾವುದು ಸರಿ/ತಪ್ಪು ನಂಬುವುದೇ ಕಷ್ಟ.

TUMAKURU:SHAKTHIPEETA FOUNDATIN

ಭಾರತ ನಕ್ಷೆಯ ಬಗ್ಗೆ ನಿನ್ನೆ ಬರೆದ ಲೇಖನದಿಂದ ತುಮಕೂರಿನ ಶ್ರೀ ಸತೀಶ್ ರವರು ಮತ್ತು ದೆಹಲಿಯಿಂದ ಶ್ರೀ ಹೀರೆಮಠ್ ರವರು ಒಂದು ಡಿಜಿಟಲ್ ಇಂಡಿಯಾ ಮ್ಯಾಪ್‍ನ್ನು ಕಳುಹಿಸಿದ್ದಾರೆ. ಇದು ಪಿಡಿಎಫ್‍ನಲ್ಲಿ ಮಾತ್ರ ಆಯಾ ರಾಜ್ಯದ ಮೇಲೆ ಟಚ್ ಮಾಡಿದರೆ, ಆಯಾ ರಾಜ್ಯದ ಇತಿಹಾಸವುಳ್ಳ ವಿಕಿಪೀಡಿಯಾಕ್ಕೆ ಲಿಂಕ್ ಆಗುತ್ತಿದೆ’ ನಾನು ಇಲ್ಲಿ ಪಿಡಿಎಫ್ ಅನ್ನು ಪೋಟೋ ಮಾಡಿ ಹಾಕಿರುವುದರಿಂದ ಟಚ್ ಮಾಡಿದರೆ ಓಪನ್ ಆಗುತ್ತಿಲ್ಲಾ.

ಡಿಜಿಟಲ್ ಇಂಡಿಯಾ ಹೆಮ್ಮರವಾಗಿ ಬೆಳೆದು ನಿಂತಿದೆ, ಎಲ್ಲವೂ ಬೆರಳ ತುದಿಯಲ್ಲಿ ದೊರಕಲಿದೆ, ಆದರೆ ಏನೇನು ಎಲ್ಲಿ ದೊರೆಯುತ್ತದೆ ಎಂಬ ಮಾಹಿತಿ ನಮಗಿಲ್ಲ. ಒಬ್ಬೊಬ್ಬರದು ಒಂದೊಂದು ಆಸಕ್ತಿ. ಅವರು ಅದರಲ್ಲಿ ಹುಡುಕಿ ತೆಗೆಯುತ್ತಾರೆ.

ನಮ್ಮ ಶಕ್ತಿಪೀಠ ಕ್ಯಾಂಪಸ್ ಇಂಥವರಿಗೆ ಒಂದು ಪ್ಲಾಟ್ ಫಾರಂ, ಈ ಕೇಂದ್ರ ಅಭಿವೃದ್ಧಿ ಕಾಮನ್ ಫೆಸಿಲಿಟಿ ಸೆಂಟರ್’ ರೀತಿ ಕಾರ್ಯನಿರ್ವಹಿಸಲಿದೆ. ಈ ಪಟ್ಟಿಯಲ್ಲಿರುವಂತೆ ಭಾರತ ದೇಶದ 28 ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶಗಳಿಗೂ ಒಂದೊಂದು ಅಂದರೆ ‘37 ನಿವೇಶವನ್ನು ಕ್ಯಾಂಪಸ್’ನಲ್ಲಿ ನಿಗದಿ ಗೊಳಿಸಲಾಗಿದೆ.

 ಈ ರಾಜ್ಯಗಳ ಕಟ್ಟಡದಲ್ಲಿಯೇ ಕರ್ನಾಟಕ ರಾಜ್ಯದ 31 ಜಿಲ್ಲೆಗಳ 224 ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಮಾಹಿತಿಯ ಪರಿಣಿತರು ಬಂದು ಉಳಿದುಕೊಂಡು ತಮ್ಮ ಅನುಭವ ಹಂಚಿಕೊಂಡು ಹೋಗಲು ಒಂದು ಅಭಿವೃದ್ಧಿ ತಾಣವಾಗಿ ಕಾರ್ಯ ನಿರ್ವಹಿಸಲಿದೆ.

 37 ಕಟ್ಟಡಗಳಲ್ಲಿ ಒಟ್ಟು  440 ಕೊಠಡಿಗಳು ಬರಲಿವೆ. ಒಂದು ರಾಜ್ಯ ಭವನದಲ್ಲಿ ಕನಿಷ್ಠ 12 ಕೊಠಡಿಗಳು ನಿರ್ಮಾಣ ಮಾಡಬೇಕು ಎಂಬ ಷರತ್ತು ಹಾಕಲಾಗಿದೆ. ನಿವೇಶನಗಳ ವಿಸ್ಥೀರ್ಣ ಸ್ವಲ್ಪ ಹೆಚ್ಚು ಕಡಿಮೆಯಾಗುವ ಆಗಿದೆ. ನೋಡೋಣ ಹೇಗೆ ಕೂರಿಸ ಬಹುದು.

 ಈ ಕೊಠಡಿಗಳು ರಾಜ್ಯದ 225 ಜನ ವಿಧಾನಸಭಾ ಸದಸ್ಯರ, 75 ವಿಧಾನ ಪರಿಷತ್ ಸದಸ್ಯರ, 28 ಜನ ಲೋಕಸಭಾ ಸದಸ್ಯರ, 12 ಜನ ರಾಜ್ಯಸಭಾ ಸದಸ್ಯರ, 31 ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ, 31 ಜಿಲ್ಲಾಧಿಕಾರಿಗಳ ಮತ್ತು 31 ಜಿಲ್ಲಾ ಪಂಚಾಯತ್ ಸಿಇಓಗಳ ಮತ್ತು ಒಬ್ಬ ದಹಲಿ ಪ್ರತಿನಿಧಿಯೂ ಸೇರಿದಂತೆ 440 ಜನರ ಕಾರ್ಯ ವೈಖರಿ ಬಗ್ಗೆ ಚಿಂತನೆ ನಡೆಸುವ ‘ವಿಷನ್ ಗ್ರೂಪ್‍’ಗಳ ಸದಸ್ಯರು ಬಂದು ಉಳಿದು ಕೊಂಡು ಹೋಗಲು ಒಟ್ಟು 440 ಕೊಠಗಳ ಲೆಕ್ಕ ಹಾಕಿ ಕನಸು ಕಾಣಲಾಗಿದೆ. ಇದೇ ರೀತಿ ನಿವೇಶನವನ್ನು ಲೇ ಔಟ್‍ನಲ್ಲಿ ಗುರತು ಮಾಡಲಾಗುವುದು.

ವಿಶ್ವದ 108 ಶಕ್ತಿಪೀಠಗಳ ಪ್ರಾತ್ಯಕ್ಷಿಕೆ, 12 ಜ್ಯೋತಿರ್ಲಿಂಗಗಳ, ಹನುಮ, 3 ಸಾಯಿಬಾಬಾ, ನವಗ್ರಹಗಳ, ಅಷ್ಟದಿಕ್ಪಾಲಕರ, ಗಣಪ, ಷಣ್ಮುಖ, ಗರುಡ ಮತ್ತು ಇತರೆ ಪ್ರಾತ್ಯಕ್ಷಿಕೆಗಳು ಭಾರತ ದೇಶದ ನಕ್ಷೆಯಲ್ಲಿ ಭೂಮಿಯ ಮೇಲೆ ಬರಲಿವೆ ಇದೊಂದು ಧಾರ್ಮಿಕ ಪ್ರವಾಸಿ ತಾಣವೂ ಅಗಲಿದೆ’. ಈಗಾಗಲೇ ಪ್ರಾತ್ಯಕ್ಷಿಕೆ ಸ್ಥಳಗಳನ್ನು ಜಿಐಎಸ್ ಆಧಾರದ ಮೇಲೆ ಗುರುತು ಮಾಡಲಾಗಿದೆ.

ದೇಶದ ನದಿ ಜೋಡಣೆ’ ಪ್ರಾತ್ಯಕ್ಷಿಕೆಯೂ ಭಾರತ ನಕ್ಷೆಯಲ್ಲಿ ಬರಲಿದೆ. ದೇಶದ ಒಂದೊಂದು ಹನಿ ನೀರಿನ ಲೆಕ್ಕವೂ ಇಲ್ಲಿ ದೊರೆಯಲಿದೆ. ದೇಶದಲ್ಲಿನ ಔಷಧಿ ಗಿಡಗಳು’ ಈ ಕ್ಯಾಂಪಸ್ ನಲ್ಲಿ ಇರಬೇಕು ಎಂಬ ಒಂದು ಚಿಂತನೆಯಿದೆ. ವಿಶ್ವದ 108 ಶಕ್ತಿಪೀಠಗಳ ಪ್ರದಕ್ಷಿಣೆ’ ಗೆ ಮಾಡಿರುವ ಸುಮಾರು 500 ಮೀಟರ್ ಸುತ್ತಳತೆಯ ರಿಂಗ್ ರಸ್ತೆಯ ಪಕ್ಕದಲ್ಲಿ ಬೆಳೆಯಲಿವೆ.

 ಕ್ಯಾಂಪಸ್ ಚಿತ್ರದುರ್ಗಜಿಲ್ಲೆಯಲ್ಲಿ ಬರುವುದರಿಂದ ಚಿತ್ರದುರ್ಗ ಕಲ್ಲಿನ ಕೋಟೆಯಾದ್ದರಿಂದ ದೇಶದ 37 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ‘ಪ್ರಮುಖ ಬಂಡೆಗಳು’ ಇಲ್ಲಿ ನೆಲದ ಮೇಲೆ ರಾರಾಜಿಸಲಿವೆ.

ಈ ರಿಂಗ್ ರಸ್ತೆಯ ಸುತ್ತಲೂ ‘37 ರಾಜ್ಯಗಳ ದಿಶಾ ಭವನಗಳು ಪಿಪಿಪಿ ಮಾದರಿ’ ಯಲ್ಲಿ ತಲೆ ಎತ್ತುವ ಪರಿಕಲ್ಪನೆ ಇದೆ. ಕೇಂದ್ರ ಸರ್ಕಾರ ರಚಿಸಿರುವ ದೇಶದ 37 ರಾಜ್ಯ ದಿಶಾ ಸಮಿತಿಗಳ ಮತ್ತು 697 ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಕಾರ್ಯವೈಖರಿ ಬಗ್ಗೆ ಇಲ್ಲಿ ಚಿಂಥನ-ಮಂಥನ’ ನಡೆಯಲಿದೆ.

 ಈಗ ಭೂಮಿಯ ಮೇಲೆ ಈ ನಿವೇಶನಗಳನ್ನು ಗುರುತು ಮಾಡಿ, ಉಳಿದ ಜಮೀನನಲ್ಲಿ ಆಯುಷ್ ಗಿಡ ಹಾಕಲು ಚಿಂತನೆ ನಡೆಸಿ, ಲೇಔಟ್ ಕಾಮಗಾರಿ ಪೂರ್ಣಗೊಳ್ಳುವ  ವೇಳೆಗೆ ಲಾಕ್ ಡೌನ್ ಬಂದು ನೆನೆಗುದಿಗೆ ಬಿದ್ದಿದೆ. ಯಾರು ಬೇಕಾದರೂ ಒಂದೊಂದು ನಿವೇಶನ ಲೀಸ್ ಪಡೆದು ಷರತ್ತಿನ ಮೇಲೆ ಕಟ್ಟಡಗಳ ಹೂಡಿಕೆ’ ಮಾಡಬಹುದು. 37 ಜನರಿಗೆ ಮಾತ್ರ ಅವಕಾಶವಿದೆ. ಕಟ್ಟಡ ಆಗುವವರೆಗೂ ಮರ-ಗಿಡಗಳ ಕೆಳಗೆ ಚಿಂಥನ-ಮಂಥನ’ ನಡೆಯಲಿದೆ.

ಆದ್ದರಿಂದ ಭಾರತ ನಕ್ಷೆ ಪ್ರಾತ್ಯಕ್ಷಿಕೆಯ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ನಿಮ್ಮಂಥ ತಿಳಿದವರಿಂದ ಪಡೆಯಲು ಚಿಂತನೆ ನಡೆಸಲಾಗಿದೆ. ಇದೊಂದು ಕೇಂದ್ರ ಸರ್ಕಾರದ ಅನುದಾನ ತಾರತಮ್ಯ ಅಧ್ಯಯನದ ಅಭಿವೃದ್ಧಿ ಪ್ರವಾಸ ತಾಣ’ ಆಗಬೇಕೆಂಬುದು ನಮ್ಮ ಕನಸು.