22nd December 2024
Share

TUMAKURU:SHAKTHIPEETA FOUNDATION

 ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ ರವರಿಗೆ ಬಹಿರಂಗ ಮನವಿ.

ನಮ್ಮ ಸಂಸ್ಥೆ ದಿಶಾ ಸಮಿತಿಗಳ ಕಾರ್ಯವೈಖರಿ ಅಧ್ಯಯನ ಮಾಡುತ್ತಿದೆ. ಕೇಂದ್ರ ಸರ್ಕಾರ 2019 ರಲ್ಲಿ ರಚಿಸಿದ ದೇಶದ 697 ದಿಶಾ ಸಮಿತಿಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ರಾಜ್ಯದ 31 ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ದೇಶಕ್ಕೆ ಮಾದರಿ’ಯಾಗಬೇಕು. ಎಂಬ ಕನಸು ನಮ್ಮದಾಗಿದೆ.

ಕರ್ನಾಟಕ ರಾಜ್ಯ ದೇಶದಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ಪಡೆದ ರಾಜ್ಯವಾಗಬೇಕು.’ ರಾಜ್ಯದಲ್ಲಿ ನದಿ ನೀರಿನ ಸಾಮಾಜಿಕ ನ್ಯಾಯದೊಂದಿಗೆ ‘ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆಯಡಿಯಲ್ಲಿ ರಾಜ್ಯದ ಪ್ರತಿ ಗ್ರಾಮಕ್ಕೂ ಒಂದಲ್ಲ ಒಂದು ನದಿ ನೀರಿನ ಅಲೋಕೇಷನ್ ಆಗಲೇ ಬೇಕು ಎಂಬ ಕನಸು ಕಂಡಿದೆ.

ಮೊದಲು ರಾಜ್ಯದ ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ವರ್ಷಕ್ಕೆ ನಾಲ್ಕು ಸಭೆಗಳನ್ನು ನಡೆಸುವಂತಾಗ ಬೇಕು. ಈ ವರ್ಷವೇ ಶೇ 100 ರಷ್ಟು ಸಾಧನೆ ಮಾಡಲೇ ಬೇಕು ಎಂಬ ಛಲದಿಂದ ನಮ್ಮ ರಾಜ್ಯದ ಎಲ್ಲಾ ಜಿಲ್ಲಾಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂÀ ಜಿಲ್ಲಾ ಪಂಚಾಯತ್ ಸಿಇಓ ಗಳ ಮನವೊಲಿಸುವ ಕಾರ್ಯಕ್ಕೆ ಮುಂದಾಗಿದೆ.

ತಾವು ದಯವಿಟ್ಟು ವರ್ಷಕ್ಕೆ ನಾಲ್ಕು ಸಭೆಗಳನ್ನು ಮಾಡಲು ಈ ಮೂಲಕ ಮನವಿ, ಜೊತೆಗೆ ‘ಜಲಜೀವನ್ ಮಿಷನ್ ಅಡಿಯಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮಗಳಿಗೂ ಮನೆ ಮನೆಗೆ ನಲ್ಲಿ ಹಾಕುವ ಯೋಜನೆಯನ್ನು ಶೇ 100 ರಷ್ಟು ಪೂರ್ಣಗೊಳಿಸುವ ಮೂಲಕ ದೇಶಕ್ಕೆ ಮಾದರಿ’ಯಾಗಬೇಕು.

ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ರಾಜ್ಯ ಮಟ್ಟದ ದಿಶಾ ಸಮಿತಿಗೆ ಮತ್ತು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಗೆ ನನ್ನನ್ನು ಸದಸ್ಯನಾಗಿ ಮಾಡಿರುವುದರಿಂದ ನಾನು ದೇಶಕ್ಕೆ ನಮ್ಮ ರಾಜ್ಯದ ದಿಶಾ ಸಮಿತಿಗಳು ಮಾದರಿಯಾಗ ಬೇಕು ಎಂಬ ಛಲದಿಂದ ಶ್ರಮಿಸಲು ಉದ್ದೇಶಿಸಿದ್ದೇನೆ.’

ತಾವುಗಳು ಮಾತ್ರ ನನ್ನ ಕನಸನ್ನು ನನಸು ಮಾಡುವ ‘ಆಧಾರ ಸ್ಥಂಭಗಳು’ ಎಂಬ ಭಾವನೆ ನನ್ನದಾದಿದೆ. ಲೋಕಸಭಾ ಸದಸ್ಯರ ಮನವೊಲಿಸಿ ವರ್ಷಕ್ಕೆ ನಾಲ್ಕು ಸಭೆ ನಡೆಸುವ ಮೂಲಕ ಇತಿಹಾಸ ಸೃಷ್ಠಿಸುತ್ತಿರೆಂಬ ನಂಬಿಕೆ ನನ್ನದಾಗಿದೆ.

ತಾವು ದಿನದ 24 ಗಂಟೆಗಳು ನನ್ನ ಸೇವೆಯನ್ನು ಬಳಸಿಕೊಳ್ಳಬಹುದು. ಚಿಕ್ಕಮಗಳೂರು ಮತ್ತು ವಿಜಯಪುರದ ಸಿಇಓಗಳ ಟ್ವಿಟ್ಟರ್ ಖಾತೆ ನನಗೆ ದೊರೆತಿಲ್ಲ ದಯವಿಟ್ಟು ನನಗೆ ನಿಮ್ಮಲ್ಲಿ ಯಾರಾದರೂ ಕಳುಹಿಸಲು ಕೋರಿದೆ.

ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸದಸ್ಯನಾದ ನಾನು ‘ನಂಬರ್-1 ಸ್ಮಾಟ್ ಸಿಟಿ ತುಮಕೂರು’ ಎಂಬ ವಾಟ್ಸ್ ಅಫ್ ಗ್ರೂಪ್ ಮಾಡಲು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷರಾಗಿದ್ದ ಶ್ರೀಮತಿ ಶಾಲಿನಿ ರಜನೀಶ್ ರವರನ್ನು ಕೇಳಿದಾಗ ಮಾಡಲು ಹಸಿರು ನಿಶಾನೆ ನೀಡಿದ್ದರು. ತುಮಕೂರು ಸ್ಮಾರ್ಟ್ ಸಿಟಿ ದೇಶಕ್ಕೆ 8 ನೇಯದಾಗಿ ಹಾಗೂ ರಾಜ್ಯಕ್ಕೆ ನಂಬರ್ -1 ಆಗಿದೆ. ನನಗೂ ಶೇ 80 ರಷ್ಟು ತೃಪ್ತಿಯಿದೆ.

ಈಗ ‘ನಂಬರ್ -1 ದಿಶಾ ಕರ್ನಾಟಕ’ ಎಂಬ ಹೆಸರಿನ ವಾಟ್ಸ್ ಅಫ್ ಗ್ರೂಪ್ ಮಾಡಲು,  ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿಯ ಕಾರ್ಯದರ್ಶಿಯಾದ ಶ್ರೀಮತಿ ಶಾಲಿನಿ ರಜನೀಶ್ ರವರನ್ನು ಈ ಮೂಲಕ ಕೋರಿದ್ದೇನೆ. ಅವರ ಅನುಮತಿ ಪಡೆದ ನಂತರ ಗ್ರೂಪ್ ನಾನೇ ಮಾಡುತ್ತೇನೆ ಅಥವಾ ತಾವೇ ಯಾರಾದರೂ ಮಾಡಿ ನನ್ನ ನಂಬರ್ ಸೇರ್ಪಡೆ ಮಾಡಬಹುದು.

ನಮ್ಮ ರಾಜ್ಯ ದೇಶದಲ್ಲಿ ನಂಬರ್ -1 ಆಗಲೇಬೇಕು. ನೀವೂಗಳು ಮನಸ್ಸು ಮಾಡಿದರೇ ಮಾತ್ರ ಸಾಧ್ಯ. ಈ ವರ್ಷದ ಏಪ್ರಿಲ್ ನಲ್ಲಿ ಮಾಡಬೇಕಾದ ದಿಶಾ ಸಮಿತಿ ಸಭೆಯನ್ನು ಜುಲೈ ಒಳಗೆ ಮಾಡಿ ಪೋರ್ಟಲ್ ನಲ್ಲಿ ಅಫ್ ಲೋಡ್ ಮಾಡುವ ಮೂಲಕ ದಾಖಲೆ ಬರೆಯುವಿರಿ ಎಂಬ ಅತಿ ಆಸೆ ನನ್ನದಾಗಿದೆ.

                                                                                                     -ಕುಂದರನಹಳ್ಳಿ ರಮೇಶ್