22nd December 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ ದೇಶದಲ್ಲಿ TEXTILE INDUSTRIAL  MEGHA PARK(MITRA) ಮಾಡಲು ಆಲೋಚನೆ ನಡೆಸಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಕೇಂದ್ರ ಸರ್ಕಾರ 2019 ರಲ್ಲಿಯೇ ಪತ್ರ ಬರೆದು 1000 ಎಕರೆಗಿಂತ ಜಾಸ್ತಿ ಜಮೀನು, ಸುಮಾರು 0.53 ಟಿ.ಎಂ.ಸಿ ಅಡಿ ನೀರು ಮತ್ತು ಅಗತ್ಯವಿರುವ ಮೂಲಭೂತ  ಸೌಕರ್ಯ ನೀಡಲು ಕೇಳಿದೆ.

ಈ ಪತ್ರದ ಆಧಾರದ ಮೇಲೆ ಯಾವ ಜಿಲ್ಲೆಯಲ್ಲಿ ಈ ಪಾರ್ಕ್ ಸ್ಥಾಪಿಸಬೇಕೆಂಬ ಬಗ್ಗೆ ರಾಜ್ಯ ಮಟ್ಟದ ದಿಶಾ ಸಮಿತಿಯಲ್ಲಿ ಚರ್ಚೆಯಾಬೇಕು. ನಂತರ ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ಚರ್ಚೆಯಾಗಬೇಕು.   ಈ ವಿಷಯದ ಬಗ್ಗೆ ಎಷ್ಟು ಜಿಲ್ಲೆಗಳ್ಲಿ ಚರ್ಚೆಯಾಗಿದೆ ಎಂಬ ಮಾಹಿತಿ ಇನ್ನೂ ದೊರೆತಿಲ್ಲ.

ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಕೇಂದ್ರ ಜವಳಿ ಖಾತೆ ಸಚಿವರಾದ ಶ್ರೀಮತಿ ಸ್ಮøತಿ ಇರಾನಿಯವರೊಂದಿಗೆ ಸಮಾಲೋಚನೆ ನಡೆಸಿದ್ದಾರಂತೆ. ಮೊದಲ 7 ಪಾರ್ಕ್‍ಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಒಂದು ಪಾರ್ಕ್ ನೀಡುವ ಭರವಸೆ ನೀಡಿದ್ದಾರಂತೆ. ಯಾವ ಜಿಲ್ಲೆಗೆ ದೊರಕುವುದು ನೋಡೋಣ?

ತುಮಕೂರು ಜಿಲ್ಲೆಗೆ 2021 ರಲ್ಲಿ ಪತ್ರ ಬರೆದ ನಂತರ, ಜವಳಿ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಸುಮರವರು, ಜಿಲ್ಲಾ ಮತ್ತು ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀ ನಾಗೇಶ್ ರವರು, ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರು ಈ ಬಗ್ಗೆ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ, ಸಂಸದರು ಮಧುಗಿರಿ ಜಿಲ್ಲೆಯಲ್ಲಿ ಸ್ಥಾಪಿಸಲು ಜಮೀನು ಹುಡುಕಲು ಸಲಹೆ ನೀಡಿದ್ದಾರೆ. ಮಧುಗಿರಿ ಉಪವಿಭಾಗಾದಿಕಾರಿಗಳು ಅಧಿಕಾರಿಗಳ ಸಭೆ ನಡೆಸಿ ಜಮೀನು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ಸುರ್ಧೀಘರ್Àವಾಗಿ ಚರ್ಚಿಸಲಾಗುವುದು.

ಇತರೆ ಜಿಲ್ಲೆಗಳ ಮಾಹಿತಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳಲು ಜಿಲ್ಲಾ ಮಟ್ಟದ ದಿಶಾ ಸದಸ್ಯ ಕಾರ್ಯದರ್ಶಿ ಯವರಲ್ಲಿ ಮನವಿ. ಕೇಂದ್ರ ಸರ್ಕಾರದ ದಿಶಾ ಸಮಿತಿಯ ಉದ್ದೇಶವೂ ಇದಾಗಿದೆ.