12th September 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಕ್ಯಾಂಪಸ್‍ನಲ್ಲಿ  440 ಜಾತಿಯ ಔಷಧಿ ಗಿಡಗಳನ್ನು ಸಂಗ್ರಹಿಸಿ ಹಾಕಲು ಇಬ್ಬರು ಪರಿಣಿತರು ದಿನಾಂಕ:30.06.2021 ರಂದು ಪ್ರತಿಜ್ಞೆ ಮಾಡಿದರು. ಯಾವುದೇ ಕಾರಣಕ್ಕೂ ನಮ್ಮ ಹೆಸರು, ನಮ್ಮ ಪೋಟೋವನ್ನು ಈಗ ಹಾಕುವುದು ಬೇಡ ನಾವು ಗಿಡಗಳನ್ನು ಹಾಕಿ 6 ತಿಂಗಳು ಬೆಳೆಸಿದ ನಂತರ ಪ್ರಕಟಿಸಿ ಎಂಬ ಅವರ ಅನಿಸಿಕೆಯನ್ನು ತಿಳಿಸಿದರು.

ಇಂದಿನಿಂದ ಶಕ್ತಿಪೀಠ ಕ್ಯಾಂಪಸ್‍ನಲ್ಲಿ  ಆಯುಷ್ ಥೀಮ್ ಪಾರ್ಕ್’ ಕಾಮಗಾರಿ ಆರಂಭವಾಗಿದೆ. ಜೆಸಿಬಿ ಮಾಲೀಕ ಶ್ರೀ ಬಸವರಾಜ್‍ರವರು ಮತ್ತು ಸಾರಥಿ ಶ್ರೀ ರಾಜೇಶ್‍ರವರು ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ರಾಜ್ಯದಲ್ಲಿ, ದೇಶದಲ್ಲಿ ಮತ್ತು ವಿಶ್ವದಲ್ಲಿ ಇರುವ ಎಲ್ಲಾ ಜಾತಿಯ ಔಷಧಿ ಗಿಡ ಸಂಗ್ರಹಣೆ ಮಾಡಲು ಸಾಧ್ಯವೇ ಎಂಬ ಬಗ್ಗೆ ಸಮಾಲೋಚನೆ ನಡೆಸಿದೆವು. ಯಾವುದಾದರೂ ಸರ್ಕಾರ ಈ ರೀತಿ ಎಲ್ಲಾ ಜಾತಿಯ ಔಷಧಿ ಗಿಡಗಳನ್ನು ಬೆಳೆಸುವ ಕೆಲಸ ಮಾಡಲಾಗಿದಯೇ? ಅಥವಾ ಖಾಸಗಿಯಾಗಿ ಯಾರಾದರೂ ಮಾಡಿದ್ದಾರೇಯೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಚರ್ಚೆ ನಡೆಯಿತು.

ಇಬ್ಬರೂ ಸಹ ಶ್ರೀ ಗಾ.ನಂ, ಶ್ರೀಕಂಠಯ್ಯನವರ ಮತ್ತು ಶ್ರೀ ಚಂದ್ರಪ್ಪನವರ ಅಭಿಮಾನಿಗಳು. ಒಬ್ಬರು ನನಗೆ ಸುಮಾರು 20 ವರ್ಷಗಳಿಂದ ಗೊತ್ತಿದ್ದರೆ. ಇನ್ನೊಬ್ಬರು ಇಂದೇ ಪರಿಚಯವಾದರೂ ನಮ್ಮ ಜಿಲ್ಲೆಯವರೇ ಆಗಿರುವುದರಿಂದ ಅವರಿಗೆ ನನ್ನ ಪರಿಚಯ ಬಹಳ ದಿನಗಳಿಂದ ಇದೆ ಎಂಬುದಾಗಿ ತಿಳಿಸಿದರು.

ನಮ್ಮ ಕ್ಯಾಂಪಸ್ ಲೇಔಟ್ ನೋಡಿ ಖುಷಿಯಾದ ಅವರು ನಮ್ಮ ಕನಸಿನ ಔಷಧಿ ಗಿಡ ಬೆಳೆಸಲು ಒಂದು ಸುವರ್ಣ ಅವಕಾಶ ಸಿಕ್ಕಿದೆ. ತಾಯಿ ಶಕ್ತಿದೇವತೆ’ ಸೇವೆ ನಾವೂ ಮಾಡುತ್ತೇವೆ. ಇಂದಿನಿಂದಲೇ ಗಿಡ ಸಂಗ್ರಹಣೆ ಕೆಲಸ ಆರಂಭಿಸುತ್ತೇವೆ, ಗಿಡಗಳಿಗೆ ತಗುಲುವ ವೆಚ್ಚ, ಸಾಗಾಣಿಕೆ ವೆಚ್ಚ, ನಮ್ಮ ಖರ್ಚು ವೆಚ್ಚಗಳನ್ನು ನಮ್ಮ ಅಕೌಂಟ್‍ಗೆ ಹಾಕಿ, ನಿಮ್ಮ ಗುರಿಯಂತೆ 440 ಜಾತಿಯ ಗಿಡ ಗುರುತಿಸಿ ತಂದು ಹಾಕಿದ ನಂತರ ನಮ್ಮ ಬಗ್ಗೆ ಬರೆಯಿರಿ.

ನೀವೂ ನಮಗೆ ಒಂದು ತಿಂಗಳ ಕಾಲವಕಾಶ ನೀಡಿ, ನಾವು ಸಿಕ್ಕಿದ ಗಿಡಗಳನ್ನು ತಂದ ನಂತರ ಹಾಕಲು ಪ್ರಾರಂಭಿಸೋಣ, ನೀವೂ ಪೈಪ್ ಲೈನ್ ಕಾಮಗಾರಿ, ಗಿಡ ಹಾಕಲು ಮಡಿಗಳನ್ನು ಮಾಡಿಸುವುದರೊಳಗೆ ನಾವು ಗಿಡ, ಬೇರು, ಬಳ್ಳಿ, ಬೀಜ, ಕಡ್ಡಿ ಹೀಗೆ ಯಾವುದೋ ಸಿಗುತ್ತದೆಯೋ ಅವುಗಳನ್ನು ಸಂಗ್ರಹಣೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ.

ಆರಂಭದಲ್ಲಿ ಕೆರೆಮಣ್ಣು ಹೊಡೆಸಿದ್ದೀರಿ, ಗೊಬ್ಬರ ಈಗ ಬೇಡ ಗಿಡಗಳು ಬೆಳೆದ ನಂತರ ಗೊಬ್ಬರ ಹಾಕೋಣ ಎನ್ನುತ್ತಾರೆ. ನನಗೆ ಈಗಲೇ ಗೊಬ್ಬರ ಕೊಡುವ ಇಚ್ಚೆ ಇದೆ.ನೋಡೋಣ ಶ್ರೀ ಗಾ.ನಂ, ಶ್ರೀಕಂಠಯ್ಯನವರು ಮತ್ತು ಶ್ರೀ ಚಂದ್ರಪ್ಪನವರನ್ನು ಆಹ್ವಾನಿಸಿ ನಂತರ ತೀರ್ಮಾನ ಮಾಡೋಣ ಎಂಬ ಅಭಿಪ್ರಾಯಕ್ಕೆ ಬಂದಿದ್ದೇವೆ.

ಹಿರಿಯೂರು ತಾಲ್ಲೂಕು ಆಯುಷ್ ಅಧಿಕಾರಿ ಡಾ.ಶ್ರೀ ಶಿವಕುಮಾರ್ ರವರು ನಿರಂತರವಾಗಿ ಮಾರ್ಗದರ್ಶನ ನೀಡಲು ಮುಂದಾಗಿದ್ದಾರೆ. ನಮ್ಮ ತಾಲ್ಲೂಕಿನಲ್ಲಿ ಇಂತಹ ಪಾರ್ಕ್ ಆಗುತ್ತಿರುವುದು ನಮ್ಮ ಹೆಮ್ಮೆ ಎಂಬುದಾಗಿ ಅವರು ಸಹಕಾರ ನೀಡುತ್ತಿದ್ದಾರೆ.